ಶಿರಾ ನಗರದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಿರುವ ೧೦ನೇ ವರ್ಷದ ಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ಅದ್ಧೂರಿಯಾಗಿ ನೆರವೆರಿತು. ಶೋಭಾಯಾತ್ರೆ ಮಾರ್ಗದುದ್ದಕ್ಕೂ ಸಾವಿರಾರು ಜನ ಪಾಲ್ಗೊಂಡಿದ್ದರು. ಹಿರಿಯರು, ಕಿರಿಯರು, ಮಹಿಳೆಯರು ಕಲಾತಂಡಗಳ ನಾದಕ್ಕೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ನಗರದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಿರುವ ೧೦ನೇ ವರ್ಷದ ಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ಅದ್ಧೂರಿಯಾಗಿ ನೆರವೆರಿತು. ಶೋಭಾಯಾತ್ರೆ ಮಾರ್ಗದುದ್ದಕ್ಕೂ ಸಾವಿರಾರು ಜನ ಪಾಲ್ಗೊಂಡಿದ್ದರು. ಹಿರಿಯರು, ಕಿರಿಯರು, ಮಹಿಳೆಯರು ಕಲಾತಂಡಗಳ ನಾದಕ್ಕೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.ಬೆಳಗ್ಗೆ ೧೦ ಗಂಟೆಗೆ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ, ಶಾಸಕ ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಸೇರಿ ಹಲವು ಗಣ್ಯರು ಹಿಂದೂ ಮಹಾ ಗಣಪತಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಕನಕ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎಸ್.ಸತ್ಯಪ್ರಕಾಶ್, ಜೆಡಿಎಸ್ ಮುಖಂಡ ಆರ್.ಉಗ್ರೇಶ್, ನಗರಸಭೆ ಸದಸ್ಯ ಬಿ.ಅಂಜಿನಪ್ಪ, ಆರ್.ರಾಮು, ಉಮಾ ವಿಜಯರಾಜ್ ಸೇರಿ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು. ಶೋಭಾಯಾತ್ರೆ ತೆರಳುವ ಮಾರ್ಗದುದ್ದಕ್ಕೂ ಕೇಸರಿ ಬಾವುಟ, ದೀಪಾಲಂಕಾರ ಮಾಡಲಾಗಿತ್ತು. ಹಿಂದೂ ಮಹಾಗಣಪತಿ ಬಳಗದ ಸದಸ್ಯರು, ಸಾರ್ವಜನಿಕರು, ಮಹಿಳೆಯರು ಕೇಸರಿ ಶಾಲು ಧರಿಸಿ ಸಂಭ್ರಮದಿಂದ ಪಾಲ್ಗೊಂಡಿದ್ದರು, ಮೆರವಣಿಗೆಯಲ್ಲಿ ನಾಗಸಾಧುಗಳು, ಮಂಗಳವಾದ್ಯ, ಮಂಗಳೂರು ಭಾಗದ ಪ್ರಸಿದ್ಧ ಹುಲಿ ಕುಣಿತ, ಮಕ್ಕಳ ಭಜನಾ ತಂಡ, ಡಿಜೆ, ವಯಲಿನ್, ಚಂಡೆ, ತಮಟೆ ವಾದ್ಯ, ನಾಸಿಕ್ ಡೋಲ್ ಹಾಗೂ ಇತರೆ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ಮೆರವಣಿಗೆಯ ವೈಭವ ಹೆಚ್ಚಿಸಿತ್ತು. ಹಿಂದೂ ಮಹಾ ಗಣಪತಿ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆಯು ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸ್ಥಳದಿಂದ ಅಂಬೇಡ್ಕರ್ ಸರ್ಕಲ್, ಮುಖ್ಯರಸ್ತೆ, ಬನ್ನಿಮಂಟಪ ರಸ್ತೆ, ಹಳೇ ಖಾಸಗಿ ಬಸ್ ನಿಲ್ದಾಣ ರಸ್ತೆ, ಹಳೇ ರಾ.ಹೆ. ರಸ್ತೆ, ದರ್ಗಾ ಸರ್ಕಲ್, ಸಂತೇಪೇಟೆ ರಸ್ತೆ, ಬಾಲಾಜಿ ನಗರ ರಸ್ತೆಯ ಮುಖಾಂತರ ಜಾಜಮ್ಮನ ಕಟ್ಟೆಯಲ್ಲಿ ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ಹಿಂದೂ ಮಹಾಗಣಪತಿ ಚಾರಿಟೇಬಲ್ ಟ್ರಸ್ಟ್, ಮಾಜಿ ನಗರಸಭಾ ಸದಸ್ಯ ಆರ್.ರಾಘವೇಂದ್ರ, ವಿಜಯ್ ರಾಜ್, ಆಂಜಿನಪ್ಪ, ಸುಧಾಕರ್ ಗೌಡ, ನರೇಂದ್ರ, ಕರಣ್, ನಟರಾಜ್, ನಗರಸಭೆ ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ಜಯಲಕ್ಷ್ಮೀ, ಮಂಜುನಾಥ್, ವಾಜರಹಳ್ಳಿ ರಮೇಶ್, ಮಣಿಕಂಠ, ಅಂಜನ್ ಕುಮಾರ್, ಹೇಮಂತ್ ಗೌಡ, ಶೇಷಾನಾಯ್ಕ, ಉಮೇಶ್, ಪದ್ಮಾ ಮಂಜುನಾಥ್, ಲಲಿತಮ್ಮ ಸೇರಿದಂತೆ ಪ್ರಮುಖರು ಹಾಜರಿದ್ದರು.