ಹಿಂದು ಸಂಸ್ಕ್ರತಿಯ ಆಚಾರಣೆ, ಪದ್ದತಿ ಜಿವಂತವಾಗಿರಸಬೇಕಾದರೆ ಧಾರ್ಮಿಕ ಕಾರ್ಯಗಳ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ತಾಲೂಕಿನ ಕಾಡವಾದ ಗ್ರಾಮದ ಐತಿಹಾಸಿಕ ಹಿನ್ನಲೆಯುಳ್ಳ ವೃತ್ತದಲ್ಲಿ ನರಮದೇಶ್ವರ ಶಿವಲಿಂಗ, ನಂದಿ ಪ್ರತಿಷ್ಠಾಪನೆ ಸೋಮವಾರ ಅದ್ಧೂರಿಯಾಗಿ ನಡೆಯಿತು.ಪೂಜ್ಯ ಶಾಂತಿ ಬಾಬಾ ಅವರ ಅಮೃತ ಹಸ್ತದಿಂದ ಪವಿತ್ರ ಶ್ರಾವಣ ಮಾಸದ ಪ್ರಥಮ ಸೋಮವಾರ ನಾಗಪಂಚಮಿಯಂದು ಶಿವಲಿಂಗ ನಂದಿ ಪ್ರತಿಷ್ಠಾಪಿಸಲಾಯಿತು. ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಭಾಗವಹಿಸಿ ನರಮದೇಶ್ವರ ಶಿವಲಿಂಗ ದರ್ಶನ ಪಡೆದು ಮಾತನಾಡಿ,
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಬ್ಬರಿಗೂ ದೇವರ ಮೇಲೆ ಭಕ್ತಿ, ಗಾಢಶ್ರದ್ಧೆಯಿಂದ ಆರಾಧನೆ ಪೂಜಿಸುವ ಪರಂಪರೆಯು ಋಷಿ, ಮುನಿಗಳ ಪರಂಪರೆಯಿಂದ ನಡೆದುಕೊಂಡು ಬರುತ್ತಿದ್ದೇವೆ. ಹಿಂದು ಸಂಸ್ಕ್ರತಿಯ ಆಚಾರಣೆ, ಪದ್ದತಿ ಜಿವಂತವಾಗಿರಸಬೇಕಾದರೆ ಧಾರ್ಮಿಕ ಕಾರ್ಯಗಳ ಅಗತ್ಯವಿದೆ ಎಂದರು.ಪ್ರತಿಷ್ಠಾಪನೆ ಮಾಡಿದ ಪೂಜ್ಯ ಶಾಂತಿ ಬಾಬಾ ಅವರು ಆಶೀರ್ವಚನ ನೀಡಿ ಇಂಥಹ ಪವಿತ್ರ ಕಾರ್ಯದಲ್ಲಿ ವಿಶೇಷವಾಗಿ ದೇವಾದಿ ದೇವ ಮಹಾದೇವ, ಧರ್ಮದ ಸಂಕೇತವಾಗಿ ನಂದಿಯ ಪ್ರತಿಷ್ಠಾಪನೆ ಆಗಿದ್ದು ಗ್ರಾಮಸ್ಥರು ಭಾಗ್ಯವಂತರು ಎಂದರು.
ಪೂಜ್ಯ ಅಮೃತಪ್ಪ ಅವರು ಶಿವಲಿಂಗದ ಮಹತ್ವ ತಿಳಿಸಿದರು.ಬೀದರ್ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯ ನಾಗಭೂಷಣ ಕಮಠಾಣ, ಬಿಜೆಪಿ ಪ್ರಮುಖರಾದ ಈಶ್ವರ ಸಿಂಗ್ ಠಾಕೂರ, ಸುರಭಿ ಎನ್.ಜಿ.ಓ ಅಧ್ಯಕ್ಷರಾದ ಡಾ.ಅಮರ ಎರೋಳಕರ್, ಅಮರ ಹಿರೇಮಠ ಆಗಮಿಸಿ ಶಿವಲಿಂಗ ದರ್ಶನ ಪಡೆದರು.
ಇದಕ್ಕೂ ಮುನ್ನ ಕಳಸ ಹೊತ್ತ ಮಹಿಳೆಯರಿಂದ ಶಿವಲಿಂಗದ ಭವ್ಯ ಮೆರವಣಿಗೆ ನಡೆಯಿತು.ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಕಾಶಿನಾಥ ಮಿನಕೇರಿ, ಬಾಬುರಾವ ಪಾಟೀಲ್, ಶಿವುಕುಮಾರ ಪೊಲೀಸ್ ಪಾಟೀಲ್, ಸಿದ್ದು ಪಾಟೀಲ್, ಅಮೃತರಾವ ಪಾಟೀಲ್, ಶಂಕರರಾವ ಚಿದ್ರಿ. ಹಣಮಂತ ಕರಕನಳ್ಳಿ, ಬಸವರಾಜ ಆಣದುರ, ದಯಾನಂದ ಪಾಟೀಲ್, ದತ್ತು ಬುಕೆಗಾರ, ಲಾಲಪ್ಪ ಬುಕೆಗಾರ, ದೇವಿಂದ್ರ ಠಾಕುರ್. ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಗಲಗಿ, ಶಿವಶರಣು ನಿಣಿ, ಮನ್ಮಥ ಮಿನಕೇರಿ, ಗಣಪತಿ ಚಿದ್ರಿ, ಶ್ರಿನಿವಾಸ ಕುಲಕರ್ಣಿ, ಸಂಗಮೇಶ ಹಂಡೆ, ಸತೀಶ ಪಾಟೀಲ್ ಸೇರಿದಂತೆ ಯುವಕ- ಯವತಿಯರು ಭಾಗವಹಿಸಿದರು. ಇಡೀ ರಾತ್ರಿ ಸಂಗಿತ, ಭಜನೆ ಕಾರ್ಯಕ್ರಮ ನಡೆಯಿತು.