ಸೆಪ್ಟೆಂಬರ್ ೧೪ರ ಶ್ರೀ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಶ್ರೀ ಸ್ವಾಮಿಯ ಗಣೇಶೋತ್ಸವವು ೩೩ ದಿನಗಳು ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಂದ ವೈಭವದಿಂದ ಜರುಗಿತ್ತು. ಜತೆಗೆ ೬೯ನೇ ವರ್ಷದ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವಕ್ಕೆ ಶನಿವಾರ ಮಧ್ಯಾಹ್ನದ ಪೂಜೆಯಲ್ಲಿ ಸಮಿತಿಯ ಗೌರಾವಾಧ್ಯಕ್ಷ ಟಿ. ಶಿವಕುಮಾರ್ ಭಾಗವಹಿಸಿ, ಉತ್ಸವಕ್ಕೆ ಚಾಲನೆ ನೀಡಿದರು. ಶನಿವಾರ ಸಂಜೆ ಮಹಾಮಂಗಳಾರತಿ ನೆರವೇರಿಸಿ, ತೀರ್ಥ ಪ್ರಸಾದ ವಿನಿಯೋಗದ ನಂತರ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ವಿವಿಧ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಸರ್ವಲಂಕೃತಗೊಂಡ ವೈಭವದ ರಥದಲ್ಲಿ ಗೌರಿಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಶ್ರೀ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಶ್ರೀ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವದ ಉತ್ಸವ ಶನಿವಾರ ರಾತ್ರಿ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ, ಡಿಜೆ ಇಲ್ಲದೇ ಇದ್ದರೂ ಸಾಂಸ್ಕೃತಿಕ ಕಲಾ ತಂಡಗಳ ಅದ್ಧೂರಿಯ ಪ್ರದರ್ಶನಗಳು ಶ್ರೀ ಗಣೇಶೋತ್ಸವದ ವೈಭವ ಕಾಪಾಡುವ ಜತೆಗೆ ವೈಭವದ ಉತ್ಸವಕ್ಕೆ ಮೆರುಗನ್ನು ತಂದಿತು.
ಸೆಪ್ಟೆಂಬರ್ ೧೪ರ ಶ್ರೀ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಶ್ರೀ ಸ್ವಾಮಿಯ ಗಣೇಶೋತ್ಸವವು ೩೩ ದಿನಗಳು ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಂದ ವೈಭವದಿಂದ ಜರುಗಿತ್ತು. ಜತೆಗೆ ೬೯ನೇ ವರ್ಷದ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವಕ್ಕೆ ಶನಿವಾರ ಮಧ್ಯಾಹ್ನದ ಪೂಜೆಯಲ್ಲಿ ಸಮಿತಿಯ ಗೌರಾವಾಧ್ಯಕ್ಷ ಟಿ. ಶಿವಕುಮಾರ್ ಭಾಗವಹಿಸಿ, ಉತ್ಸವಕ್ಕೆ ಚಾಲನೆ ನೀಡಿದರು. ಶನಿವಾರ ಸಂಜೆ ಮಹಾಮಂಗಳಾರತಿ ನೆರವೇರಿಸಿ, ತೀರ್ಥ ಪ್ರಸಾದ ವಿನಿಯೋಗದ ನಂತರ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ವಿವಿಧ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಸರ್ವಲಂಕೃತಗೊಂಡ ವೈಭವದ ರಥದಲ್ಲಿ ಗೌರಿಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪೇಟೆ ಮುಖ್ಯರಸ್ತೆ, ಕೋಟೆ ರಾಜಬೀದಿಯಲ್ಲಿ ಹಾಗೂ ಪ್ರಮುಖ ರಸ್ತೆಗಳು ಮತ್ತು ಡಾ. ಅಂಬೇಡ್ಕರ್ ನಗರದಲ್ಲಿ ಮೆರವಣಿಗೆ ನಡೆದು ಭಾನುವಾರ ಮುಂಜಾನೆ ೪ ಗಂಟೆ ಸುಮಾರಿನಲ್ಲಿ ಪುರಸಭೆ ಮುಂಭಾಗದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದ ವಾಹನವನ್ನು ನಿಲ್ಲಿಸಲಾಯಿತು. ಭಕ್ತರು ದಾರಿಯುದ್ದಕ್ಕೂ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಯನ್ನು ಪೂರೈಸುವಂತೆ ವರಸಿದ್ಧಿ ವಿನಾಯಕನಲ್ಲಿ ಪ್ರಾರ್ಥಿಸಿದರು. ಜತೆಗೆ ಮಹಿಳೆಯರು ಮನೆಗಳ ಮುಂದೆ ರಂಗೋಲಿ ಇಟ್ಟು, ಶ್ರೀಸ್ವಾಮಿಯ ಮೂರ್ತಿಗೆ ಪೂಜೆ ಸಲ್ಲಿಸುವ ಜತೆಗೆ ಸಂಪ್ರದಾಯದ ಆಚರಣೆಯನ್ನು ಭಕ್ತಿಯಿಂದ ನೆರವೇರಿಸಿದರು. ಭಾನುವಾರ ಮಧ್ಯಾಹ್ನ ೨ ಗಂಟೆಯ ನಂತರ ಹೇಮಾವತಿ ನದಿಯಲ್ಲಿ ಗೌರಿಗಣೇಶ ಸ್ವಾಮಿಯ ಮೂರ್ತಿಗಳನ್ನು ತೆಪ್ಪೋತ್ಸವ ನಡೆಸಿ, ವಿಸರ್ಜಿಸಲಾಯಿತು. ಶ್ರೀ ರಾಘವೇಂದ್ರ ಮಠದ ಆಡಳಿತಾಧಿಕಾರಿ ಶ್ರೀಷಾಚಾರ್ ಮಾರ್ಗದರ್ಶನದಲ್ಲಿ ರಾಮಮೂರ್ತಿ ಶ್ರೀ ಗಣೇಶೋತ್ಸವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಮಹಾಗಣಪತಿ ವಿಸರ್ಜನಾ ಮಹೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಮೆರವಣಿಗೆಯ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಐಪಿಎಸ್ ಅಧಿಕಾರಿ, ಡಿವೈಎಸ್ಪಿ ಅಧಿಕಾರಿಗಳು, ವೃತ್ತ ನಿರೀಕ್ಷಕರು, ಪಿಎಸ್ಸೈಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಎಚ್. ಕೆ. ಪ್ರಸನ್ನ, ಕಾರ್ಯಾಧ್ಯಕ್ಷ ಪುಟ್ಟಸೋಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎ.ಜಗನ್ನಾಥ್, ಎಎಸ್ಪಿ ಶುಭಂ ಸುರೇಶ್ ಪವಾರ್, ವೃತ್ತ ನಿರೀಕ್ಷಕ ಸಂತೋಷ್, ಪಿಎಸ್ಐ ರಮೇಶ್, ತಾ.ಪಂ. ಮಾಜಿ ಅಧ್ಯಕ್ಷೆ ಚಂದ್ರಮತಿ, ಜಿ.ಪಂ.ಮಾಜಿ ಸದಸ್ಯ ಎಚ್. ವೈ. ಚಂದ್ರಶೇಖರ್, ಸಮಿತಿಯ ವೈ.ವಿ.ಚಂದ್ರಶೇಖರ್, ಎಚ್.ವಿ.ಸುರೇಶ್ ಕುಮಾರ್, ಎಸ್.ಗೋಕುಲ್, ಪಿಎಚ್ಇ ವೆಂಕಟೇಶ್, ನಿ. ಯೋಧರಾದ ಈಶ್ವರ್ ಹಾಗೂ ಮಂಜುನಾಥ್, ಎಚ್.ಟಿ.ನರಸಿಂಹಶೆಟ್ಟಿ, ಎಚ್. ಸಿ. ಅಶೋಕ್, ಮುರಳೀಧರ ಗುಪ್ತ, ಕಾದಲನ್ ಕೃಷ್ಣ, ಡಿಶ್ ಗೋವಿಂದ, ಶಿವಕುಮಾರ್, ಶಿವಾನಂದ, ನಾಗರಾಜು, ಚೆನ್ನೇಗೌಡ, ಪ್ರಹಲ್ಲಾದ್, ಕಿಶೋರ್, ಆರ್.ಕೆ.ಗುರುರಾಜ್, ಶಂಕರ್ನಾರಾಯಣ ಐತಾಳ್, ಎಚ್. ವಿ. ರವಿಕುಮಾರ್, ಆರ್. ಬಿ. ಪುಟ್ಟೇಗೌಡ, ಜಗದೀಶ್, ವನಜಾಕ್ಷಿ, ಪ್ರಭಾ ಮಂಜುನಾಥ್, ಭಾಗವಹಿಸಿದ್ದರು.