ಕನ್ನಡಪ್ರಭ ವಾರ್ತೆ ಬೈಲಹೊಂಗಲ ನಗರದ ವಿವಿಧ ಸಾರ್ವಜನಿಕ ಗಜಾನನ ಮಂಡಳಿಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ಬೃಹತ್ ಶೋಭಾಯಾತ್ರೆ ಹಾಗೂ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮ ಶನಿವಾರ ಸಡಗರ, ಸಂಭ್ರಮದಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರದ ವಿವಿಧ ಸಾರ್ವಜನಿಕ ಗಜಾನನ ಮಂಡಳಿಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ಬೃಹತ್ ಶೋಭಾಯಾತ್ರೆ ಹಾಗೂ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮ ಶನಿವಾರ ಸಡಗರ, ಸಂಭ್ರಮದಿಂದ ನಡೆಯಿತು.ವಿಶ್ವ ಹಿಂದೂ ಪರಿಷತ್, ಬಜರಂಗದಳ ತಾಲೂಕು ಘಟಕ ಹಾಗೂ ಸಾರ್ವಜನಿಕ ಗಜಾನನ ಮಂಡಳಿಗಳ ಉತ್ಸವ ಕಮೀಟಿಯಿಂದ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲಾಯಿತು. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿವಿಧ ಗಜಾನನ ಉತ್ಸವ ಕಮೀಟಿಗಳ ಮುಖಂಡರು, ಪದಾಧಿಕಾರಿಗಳು, ಅಪಾರ ಸಂಖ್ಯೆಯ ಭಕ್ತರು ಗಣೇಶ ಮೂರ್ತಿಗಳನ್ನು ಬರಮಾಡಿಕೊಂಡರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಂಬೇಡ್ಕರ್ ಉದ್ಯಾನವನದವರೆಗೆ ಗಣೇಶ ಮೂರ್ತಿಗಳನ್ನ ಶೋಭಾಯಾತ್ರೆಯ ಮೂಲಕ ಮೆರವಣಿಗೆ ನಡೆಸಲಾಯಿತು. ವಿವಿಧ ಮಂಡಳಿಗಳ ಗಣೇಶ ಮೂರ್ತಿಗಳು ಒಂದೇ ವೇದಿಕೆಯಲ್ಲಿ ಸಾಗಿದ ದೃಶ್ಯ ಭಕ್ತರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಗಣೇಶನ ನಾಮಸ್ಮರಣೆ, ಜಯಘೋಷಗಳನ್ನು ಮೊಳಗಿಸಿ ಸಂಭ್ರಮಿಸಿದರು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.ವೇದಮೂರ್ತಿ ವೀರಯ್ಯಸ್ವಾಮಿ ಹಿರೇಮಠ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ನಟ ಶಿವರಂಜನ ಬೋಳನ್ನವರ, ಶಂಕರ ಮಾಡಲಗಿ, ಸೋಮೇಶ್ವರ ಕಾರ್ಖಾನೆ ನಿರ್ದೇಶಕ ಮಹಾಂತೇಶ ತುರಮರಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಡಾ.ಎ.ಎನ್.ಬಾಳಿ, ಸುಭಾಷ ತುರಮರಿ, ರವಿ ತುರಮರಿ, ಬಸವರಾಜ ದೊಡಮನಿ, ರವಿ ಹುಲಕುಂದ, ರಾಮಸಿಂಗ ರಜಪೂತ. ಶಿವಾನಂದ ಬಡ್ಡಿಮನಿ, ಅಶೋಕ ಸವದತ್ತಿ, ಗಿರೀಶ ಹರಕುಣಿ, ಚನ್ನಪ್ಪ ಹಾದಿಮನಿ. ವಿವೇಕಾನಂದ ಪೂಜಾರ, ದಯಾನಂದ ಗೆಜ್ಜಿ, ರಾಜು ಬೊಂಗಾಳೆ, ಚಂದ್ರು ಗೌಡರ, ಮಂಜುನಾಥ ಬೋಗೂರ, ಮಂಜುನಾಥ ಕಾದ್ರೊಳ್ಳಿ, ವಿನಾಯಕ ಜಿಗಜಿನ್ನಿ, ರಾಜು ಹರಕುಣಿ, ವಿವಿಧ ಗಜಾನನ ಮಂಡಳಿಗಳ ಪದಾಧಿಕಾರಿಗಳು, ಭಕ್ತರು ಇದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಶೋಭಾಯಾತ್ರೆಯ ಬಳಿಕ ಗಣೇಶ ಮೂರ್ತಿಗಳನ್ನು ವಿಧಿವಿಧಾನಗಳೊಂದಿಗೆ ಮಲಪ್ರಭಾ ನದಿಯಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು.