ಗಣೇಶ ಚತುರ್ಥಿ ಹಿನ್ನೆಲೆ ನಗರದ ಗದಿಗೇರ ಓಣಿಯಲ್ಲಿ ಶ್ರೀ ಗಜಾನನ ಸೇವಾ ಸಮಿತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಹಾವೇರಿ ಕಾ ಸಾಮ್ರಾಟ್ ಗಣಪತಿಯ ಬೃಹತ್ ಶೋಭಾಯಾತ್ರೆ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ನಗರದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆಯಿತು.
ಹಾವೇರಿ: ಗಣೇಶ ಚತುರ್ಥಿ ಹಿನ್ನೆಲೆ ನಗರದ ಗದಿಗೇರ ಓಣಿಯಲ್ಲಿ ಶ್ರೀ ಗಜಾನನ ಸೇವಾ ಸಮಿತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಹಾವೇರಿ ಕಾ ಸಾಮ್ರಾಟ್ ಗಣಪತಿಯ ಬೃಹತ್ ಶೋಭಾಯಾತ್ರೆ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ನಗರದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆಯಿತು.
ಶೋಭಾಯಾತ್ರೆ ಹಿನ್ನೆಲೆ ಶುಕ್ರವಾರ ಮಧ್ಯಾಹ್ನ ಶೃಂಗರಿಸಿದ ವಾಹನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗಣೇಶ ಮೂರ್ತಿಗೆ ನಾನಾ ಬಗೆಯ ಹೂಗಳಿಂದ ತಯಾರಿಸಿದ್ದ ಹೂವಿನ ಹಾರವನ್ನು ಹಾಕಲಾಗಿತ್ತು. ಶೋಭಾಯಾತ್ರೆ ಪ್ರಾರಂಭವಾದ ಬಳಿಕ ಡಿಜೆ ಹಾಡುಗಳಿಗೆ ಯುವಕ, ಯುವತಿಯರು, ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಮೆರವಣಿಗೆಯುದ್ದಕ್ಕೂ ಹಾವೇರಿ ಕಾ ಸಾಮ್ರಾಟ್ ಕೀ ಜೈ, ಜೈ ಶ್ರೀರಾಮ್, ಜೈ ಶಿವಾಜಿ ಮಹಾರಾಜ ಎನ್ನುವ ಜಯಘೋಷಣೆಗಳು ಮೊಳಗಿದವು,ಮೆರವಣಿಗೆಯು ಗದಿಗೇರ ಓಣಿಯಿಂದ ಆರಂಭವಾಗಿ ನಗರದ ಮೇಲಿನಪೇಟೆ, ಅಕ್ಕಿಪೇಟೆ, ಯಾಲಕ್ಕಿ ಓಣಿ, ಜೈನ್ ಮಂದಿರ, ಎಂ.ಜಿ. ರೋಡ್, ದ್ಯಾಮವ್ವನಗುಡಿ ಪಾದಗಟ್ಟಿ, ಗಾಂಧಿ ವೃತ್ತ, ಜೆ.ಪಿ. ವೃತ್ತ, ಬಸ್ ನಿಲ್ದಾಣ ಸಮೀಪ, ಹೊಸಮನಿ ಸಿದ್ದಪ್ಪ ವೃತ್ತ, ಕಾಗಿನೆಲೆ ವೃತ್ತ ಮಾರ್ಗವಾಗಿ ಸಂಚರಿಸಿ ಕೆಇಬಿ ವೃತ್ತದ ಬಳಿ ಸಮಾಪರೋಪಗೊಂಡಿತು. ಇದೇ ವೇಳೆ ಜೆ.ಪಿ.ಸರ್ಕಲ್ ಬಳಿ ವಿದ್ಯುತ್ ಅಲಂಕಾರಿತ ಇವೆಂಟ್ಸ್ ಕಾರ್ಯಕ್ರಮ ನೋಡುಗರ ಜನಮನಸೂರೆಗೊಂಡಿತು.
ಈ ವೇಳೆ ಮಾಲತೇಶ ಸುಂಕದ, ನಂದೀಶ ಗದಗಿ, ಶೇಖರ ಗದಗಿ, ಅಭಿ ಗದಗಿ, ಚನ್ನಬಸಪ್ಪ ಗದಗಿ, ಸಚಿನ ಕುಂಬಾರಿ, ಕಿರಣ ಪಾಟೀಲ, ರಜತ ಅಳ್ಳಪ್ಪನವರ, ಗಿರೀಶ ಗದಗಿ, ಶಿವರಾಜ ಗಾಳಿ, ನಾಗರಾಜ ಸುಂಕದ, ನಿರಂಜನ ಹಿರೇಮಠ, ಗಣೇಶ ಮಡಿವಾಳರ, ವಿನಯ ರೊಡ್ಡಪ್ಪನವರ, ಮಧು ಕಡೇಮನಿ, ನಾಗರಾಜ ಯರೇಶಿಮಿ, ಪ್ರಭು ಹಿಟ್ನಳ್ಳಿ ಸೇರಿದಂತೆ ಹಾವೇರಿ ಕಾ ಸಾಮ್ರಾಟ್ ಗಣಪತಿ ಸಮಿತಿ ಪದಾಧಿಕಾರಿಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.