ಸಾರಾಂಶ
1008 ಭಗವಾನ ಪಾರ್ಶ್ವನಾಥ ತೀರ್ಥಂಕರರ ಪಂಚಲೋಹ ಮೂರ್ತಿಯ ಮೂರ್ತಿಯ ಭವ್ಯ ಮೆರವಣಿಗೆ ಉಳ್ಳಾಗಡ್ಡಿ-ಖಾನಾಪುರದ ಜೈನ ಮಂದಿರದ ರಸ್ತೆ ಮಾರ್ಗವಾಗಿ ಪ್ರಾರಂಭವಾಗಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ನಡೆಯುತ್ತಿರುವ ಮಂಟಪದವರೆಗೆ ಜರುಗಿತು.
ಕನ್ನಡಪ್ರಭ ವಾರ್ತೆ ಯಮಕನಮರಡಿ
1008 ಭಗವಾನ ಪಾರ್ಶ್ವನಾಥ ತೀರ್ಥಂಕರರ ಪಂಚಲೋಹ ಮೂರ್ತಿಯ ಮೂರ್ತಿಯ ಭವ್ಯ ಮೆರವಣಿಗೆ ಉಳ್ಳಾಗಡ್ಡಿ-ಖಾನಾಪುರದ ಜೈನ ಮಂದಿರದ ರಸ್ತೆ ಮಾರ್ಗವಾಗಿ ಪ್ರಾರಂಭವಾಗಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸ ನಡೆಯುತ್ತಿರುವ ಮಂಟಪದವರೆಗೆ ಜರುಗಿತು.ಧರ್ಮ ಧ್ವಜಗಳು, ವಾದ್ಯ ಮೇಳಗಳು ಮೆರವಣಿಗೆ ಮೆರಗು ತಂದವು. ಭವ್ಯ ಮೂರ್ತಿ: 3-4 ಅಡಿಗಳಷ್ಟಿರುವ ಪಾರ್ಶ್ವನಾಥ ತೀಥಂಕರರ ಮೂಲ ನಾಯಕ ಪಂಚಲೋಹ ಮೂರ್ತಿ ಜೈನ ಮಂದಿರದಲ್ಲಿ ಪ್ರತಿಷ್ಠಾಪಣೆಗೊಳ್ಳಲಿದೆ.
ಈ ವೇಳೆ 108 ಜಿನಸೇನ ಮುನಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು, ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು, ಧಾರ್ಮಿಕ ವಿಧಿ ವಿಧಾನಗಳನ್ನು ಪವನ ಚಂದ್ರನಾಥ ಉಪಾಧ್ಯ ಹಾಗೂ ಜಿನೇಂದ್ರ ಕಾಂತ ಉಪಾಧ್ಯೆ, ವೃಷಭ ಉಪಾಧ್ಯೆ, ಮಹಾವೀರ ಉಪಾಧ್ಯೆ ನಡೆಸಿಕೊಟ್ಟರು. ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು.