ಕೆಂಪಸಾಗರ ಕೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ

| Published : Feb 15 2025, 12:32 AM IST

ಸಾರಾಂಶ

ಮಾಗಡಿ: ನಾಡಪ್ರಭು ಕೆಂಪೇಗೌಡರ ತಾಯಿ ಕೆಂಪಮ್ಮನಿಗಾಗಿ ಕಟ್ಟಿಸಿರುವ ಐತಿಹಾಸಿಕ ಕೆಂಪಸಾಗರ ಕೆರೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

ಮಾಗಡಿ: ನಾಡಪ್ರಭು ಕೆಂಪೇಗೌಡರ ತಾಯಿ ಕೆಂಪಮ್ಮನಿಗಾಗಿ ಕಟ್ಟಿಸಿರುವ ಐತಿಹಾಸಿಕ ಕೆಂಪಸಾಗರ ಕೆರೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

ಕಳೆದ ಎರಡು ವರ್ಷಗಳಿಂದಲೂ ಕೆಂಪಸಾಗರ ಕೆರೆ ಕೋಡಿ ಹರಿದದ್ದರಿಂದ ಗ್ರಾಮಸ್ಥರು ಆಯೋಜಿಸಿದ್ದ ತೆಪ್ಪೋತ್ಸವಕ್ಕೆ ಶಾಸಕ ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ.ಸುರೇಶ್, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ಎಂ. ರೇವಣ್ಣ ಹಾಗೂ ಗಣ್ಯರು ಚಾಲನೆ ನೀಡಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಕೆಂಪೇಗೌಡರು ತಮ್ಮ ತಾಯಿಗಾಗಿ ಕಟ್ಟಿಸಿರುವ ಕೆರೆ ಹಲವು ಗ್ರಾಮಗಳ ರೈತರ ಬದುಕಿಗೆ ಆಸರೆಯಾಗಿದೆ.ಈ ಕೆರೆ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಈಗಾಗಲೇ ಕೆರೆ ಏರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರು ಮತ್ತಷ್ಟು ಬೇಡಿಕೆಗಳನ್ನು ಇಟ್ಟಿದ್ದು ಅದನ್ನು ಪೂರೈಸುತ್ತೇವೆ ಎಂದು ತಿಳಿಸಿದರು.

ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕೆಂಪೇಗೌಡರ ದೂರ ದೃಷ್ಟಿಯಿಂದ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ್ದು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದಾಗ ಎಲ್ಲರಿಗೂ ಒಳಿತಾಗಲಿದೆ. ತಾಲೂಕಿಗೆ ಶಾಶ್ವತ ನೀರಾವರಿ ತರುವ ನಿಟ್ಟಿನಲ್ಲಿ ಈಗಾಗಲೇ ಹೇಮಾವತಿ ಕಾಮಗಾರಿ ಪೂರ್ಣ ಹಂತದಲ್ಲಿದೆ. ವೈ.ಜಿ.ಗುಡ್ಡ ಮತ್ತು ಮಂಚನ ಬೆಲೆ ಜಲಾಶಯಕ್ಕೆ ಕಣ್ವ ಜಲಾಶಯದಿಂದ ನೀರು ತುಂಬಿಲಾಗುತ್ತಿದೆ. ಜೊತೆಗೆ ಎತ್ತಿನಹೊಳೆ ಮೂಲಕವೂ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ತಾಪಂ ಮಾಜಿ ಸದಸ್ಯ ಸುಮಾರಮೇಶ್, ಗ್ರಾಮ ಮುಖಂಡರಾದ ಮಲ್ಲಿಕ್, ಉಮೇಶ್, ಎಸ್.ಕಾಂತರಾಜು ಗಿರಿಯಪ್ಪ, ಮಂಜುನಾಥ್, ರಾಜಶೇಖರ್, ಮಾದೇವ್, ಜಯರಾಂ, ನಂದೀಶ್ ಇತರರು ಭಾಗವಹಿಸಿದ್ದರು.

ತಾಲೂಕಿನ ಮುತ್ತರಾಯನಗುಡಿಪಾಳ್ಯದಲ್ಲಿ ಗ್ರಾಮದೇವತೆ ಅಮ್ಮನವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ವಿಗ್ರಹ ಮರು ಪ್ರತಿಷ್ಠಾಪನಾ ಮಹೋತ್ಸವ ದೇವಾಲಯವನ್ನು ಆದಿಚುಂಚನಗಿರಿ ಮಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ತಾಲೂಕಿನ ಕೆಂಪಸಾಗರಕೆರೆ ತೆಪ್ಪೋತ್ಸವಕ್ಕೆ ಶಾಸಕ ಬಾಲಕೃಷ್ಣ, ಮಾಜಿ ಸಂಸದ ಸುರೇಶ್‌ ಇತರರು ಚಾಲನೆ ನೀಡಿದರು.