ಚನ್ನಗಿರಿ ಪಟ್ಟಣ ತಲುಪಿದ ಭುವನೇಶ್ವರಿ ಕನ್ನಡ ರಥಯಾತ್ರೆಗೆ ಅದ್ಧೂರಿ ಸ್ವಾಗತ

| Published : Oct 26 2024, 12:47 AM IST

ಸಾರಾಂಶ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಭುವನೇಶ್ವರಿ ಕನ್ನಡ ರಥಯಾತ್ರೆಯು ಶುಕ್ರವಾರ ಚನ್ನಗಿರಿ ಪಟ್ಟಣ ಪ್ರವೇಶಿಸುತು. ರಥವು ಆಗಮಿಸುತ್ತಿದ್ದಂತೆ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಬಳಿ ಸೇರಿದ್ದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಕನ್ನಡ ತಾಯಿ ಭುವನೇಶ್ವರಿಗೆ ಜೈಕಾರಗಳನ್ನು ಹಾಕಿದರು. ಪುಷ್ಪಸೃಷ್ಟಿ ಸುರಿಸಿ, ಅದ್ಧೂರಿಯಾಗಿ ಬರಮಾಡಿಕೊಂಡರು.

- ಭುವನೇಶ್ವರಿ, ಕೃಷ್ಣರಾಜ ಒಡೆಯರ್, ಸರ್‌ಎಂವಿ ಪುತ್ಥಳಿಗಳಿಗೆ ಪೂಜೆ - - - ಚನ್ನಗಿರಿ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಭುವನೇಶ್ವರಿ ಕನ್ನಡ ರಥಯಾತ್ರೆಯು ಶುಕ್ರವಾರ ಚನ್ನಗಿರಿ ಪಟ್ಟಣ ಪ್ರವೇಶಿಸುತು. ರಥವು ಆಗಮಿಸುತ್ತಿದ್ದಂತೆ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಬಳಿ ಸೇರಿದ್ದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಕನ್ನಡ ತಾಯಿ ಭುವನೇಶ್ವರಿಗೆ ಜೈಕಾರಗಳನ್ನು ಹಾಕಿದರು. ಪುಷ್ಪಸೃಷ್ಟಿ ಸುರಿಸಿ, ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಸಾಗಿ ಬರುವ ಮಾರ್ಗ ಮಧ್ಯದಲ್ಲಿರುವ ಶ್ರೀ ಕೆರೆ ಏರಿ ಚೌಡೇಶ್ವರಿ ದೇವಾಲಯ ವತಿಯಿಂದ ರಥದಲ್ಲಿದ್ದ ಭುವನೇಶ್ವರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಪುತ್ಥಳಿಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ವಿವಿಧ ಕಲಾತಂಡಗಳು, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್‌ತಂಡದೊಂದಿಗೆ ರಥಯಾತ್ರೆಯ ಮೆರವಣಿಗೆ ಸಾಗಿತು. ಗ್ರೇಡ್-2 ತಹಸೀಲ್ದಾರ್ ರುಕ್ಮಿಣಿ ಬಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಬೆಸ್ಕಾಂ ಇಲಾಖೆಯ ಅಭಿಯಂತರ ಮಂಜ ನಾಯ್ಕ್, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಸಿಡಿಪಿಒ ನಿರ್ಮಲಾ, ಶಿರಸ್ತೇದಾರ್ ಮೋಹನ್, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಎಸ್.ಶಂಕರಪ್ಪ, ಪುರಸಭೆ ಕಂದಾಯ ಅಧಿಕಾರಿ ಮಂಜುನಾಥ್, ವ್ಯವಸ್ಥಾಪಕ ಆರಾಧ್ಯ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ, ತಾಲೂಕು ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಾ ನಾಯ್ಕ್, ಕನ್ನಡನಾಡು ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ನಗರ ಘಟಕದ ಅಧ್ಯಕ್ಷ ನಟರಾಜ ರಾಯ್ಕರ್, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ರಥಯಾತ್ರೆಯು ತಾಲೂಕಿನ ಗಡಿಗ್ರಾಮ ಮರಡಿಯಿಂದ ಸಂತೆಬೆನ್ನೂರು, ದೇವರಹಳ್ಳಿ, ಗರಗ, ಚನ್ನಗಿರಿ ಪಟ್ಟಣ, ದೋಣಿಹಳ್ಳಿ, ನಲ್ಲೂರು, ಸೂಳೆಕೆರೆ, ಬಸವಾಪಟ್ಟಣ ಮಾರ್ಗದಲ್ಲಿ ಸಂಚರಿಸಿ ಪಕ್ಕದ ಹೊನ್ನಾಳಿ ತಾಲೂಕಿಗೆ ಸಾಗಿತು.

- - - -25ಕೆಸಿಎನ್‌ಜಿ1: ಚನ್ನಗಿರಿಯಲ್ಲಿ ಕನ್ನಡ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿ

ತು.