ಹಾಲಾಪೂರದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ

| Published : Feb 17 2024, 01:15 AM IST

ಹಾಲಾಪೂರದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಿಂದ ಕುಂಭ, ಕಳಸ, ಡೊಳ್ಳು ಕುಣಿತ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಕುಂಭ ಕಳಸ ಮತ್ತು ಡೊಳ್ಳು ಕುಣಿತ ಸೇರಿದಂತೆ ವಿವಿಧ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಮೆರವಣಿಗೆಗೆ ಮೆರಗು ತಂದರು.

ಕವಿತಾಳ: ಸಮೀಪದ ಹಾಲಾಪೂರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಿಂದ ಕುಂಭ, ಕಳಸ, ಡೊಳ್ಳು ಕುಣಿತ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕುಂಭ ಕಳಸ ಮತ್ತು ಡೊಳ್ಳು ಕುಣಿತ ಸೇರಿದಂತೆ ವಿವಿಧ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಮೆರವಣಿಗೆಗೆ ಮೆರಗು ತಂದರು.

ತಹಶೀಲ್ದಾರರಾದ ಸುದಾ ಅರಮನೆ ಅವರು ಸಂವಿಧಾನದ ಪ್ರತಿಜ್ಞಾ ವಿಧಿ ಭೋದಿಸಿದರು ನಂತರ ಮಾತನಾಡಿದ ಅವರು ಮಸ್ಕಿ ಶಾಸಕರಾದ ಆರ್. ಬಸನಗೌಡ ತುರುವಿಹಾಳ ಅವರು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡ ಕಾರಣ ಕಾರಣ ಅವರು ಕಳುಹಿಸಿದ ಸಂದೇಶವನ್ನು ಓದಿದರು.

ಪಿಡಿಒ ವಿಶ್ವನಾಥ ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲರಿಗೂ ಉಪಯುಕ್ತವಾಗಿದೆ, ಸಂವಿಧಾನವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಉಪ ತಹಶಿಲ್ದಾರ ಸುನೀಲ್ ಕುಮಾರ್, ಆರ್.ಐ.ಅರಳಪ್ಪ, ಮುಖಂಡರಾದ ಜಗದೀಶ್ ತಾತ, ಬಿ.ಕರಿಯಪ್ಪ, ವೆಂಕರಟರಡ್ಡಿಗೌಡ, ಮಾಜಿ ತಾ.ಪ,ಸದಸ್ಯರಾದ ಕರಿಯಪ್ಪ, ಬಸ್ಸಪ್ಪ ಜಂಗಮರಹಳ್ಳಿ, ಎರಿತಾತ, ರವಿ ದೇಸಾಯಿ, ಬಸವರಾಜ ರಾಮತ್ನಾಳ, ಶಿವಪ್ಪ ತುಗ್ಗಲದಿನ್ನಿ, ಮಂಜುನಾಥ ಶಿಕ್ಷಕರು, ಸಿದ್ದಾರ್ಥ ಪಾಟೀಲ್, ಬಾಲಸ್ವಾಮಿ, ಚಂದಪ್ಪ, ಮೌನೇಶ, ಜೆ.ಯಂಕೊಬ, ಮಾರುತಿ, ಪೌಲರಾಜ್, ಪಂಪಣ್ಣ,ಅಮರೇಶ, ಲಕ್ಷ್ಮಣ, ಹಾಗೆ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.