ಪಾವಗಡಕ್ಕೆ ಆಗಮಿಸಿದ ಕನ್ನಡ ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ

| Published : Nov 20 2024, 12:33 AM IST

ಸಾರಾಂಶ

ಡಿಸೆಂಬರ್‌ 20ರಂದು ಮಂಡ್ಯ ನಗರದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು ಇದರ ಪ್ರಯುಕ್ತ ಜನಜಾಗೃತಿಯ ಕನ್ನಡ ಜ್ಯೋತಿ ರಥಯಾತ್ರೆ ಪಾವಗಡದ ಪ್ರವಾಸಿ ಮಂದಿರಕ್ಕೆ ಆಗಮಿಸಿತು.

ಕನ್ನಡಪ್ರಭ ವಾರ್ತೆ ಪಾವಗಡ

ಡಿಸೆಂಬರ್‌ 20ರಂದು ಮಂಡ್ಯ ನಗರದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು ಇದರ ಪ್ರಯುಕ್ತ ಜನಜಾಗೃತಿಯ ಕನ್ನಡ ಜ್ಯೋತಿ ರಥಯಾತ್ರೆ ಪಾವಗಡದ ಪ್ರವಾಸಿ ಮಂದಿರಕ್ಕೆ ಆಗಮಿಸಿತ್ತು. ಈ ವೇಳೆ ಶಾಸಕ ಎಚ್‌.ವಿ.ವೆಂಕಟೇಶ್‌ ಹಾಗೂ ತಹಸೀಲ್ದಾರ್ ಡಿ.ಎನ್‌.ವರದರಾಜು ಭೇಟಿ ನೀಡಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ವಾರ್ಚನೆ ಸಲ್ಲಿಸುವ ಮೂಲಕ ಬರ ಮಾಡಿಕೊಂಡರು.

ಈ ವೇಳೆ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡಪರ ಸಂಘ ಸಂಸ್ಥೆಯ ಪದಾಧಿಕಾರಿಗಳು,ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಈ ವೇಳೆ ಹಾಜರಿದ್ದು,ಕನ್ನಡಪರ ಜೈಕಾರ ಮೊಳಗಿಸುವ ಮೂಲಕ ತಾಯಿ ಭುವನೇಶ್ವರಿಗೆ ಪುಷ್ಪಾ ಅರ್ಪಿಸಿ,ನಮನ ಸಲ್ಲಿಸಿದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಣಮ್ಮ,ಪುರಸಭೆ ಮುಖ್ಯಾಧಿಕಾರಿ ಜಾಪರ್‌ ಷರೀಫ್‌,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು,ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್, ಉಪಾಧ್ಯಕ್ಷ ಗೀತಾ ಆರ್.ಎ.ಹನುಮಂತರಾಯಪ್ಪ,ತೆಂಗಿನಕಾಯಿ ರವಿ,ಮುಖಂಡರಾದ ಶಂಕರ್ ರೆಡ್ಡಿ, ಸದಸ್ಯರಾದ ಎನ್.ರವಿ ಹಾಗೂ ಇತರೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿ ವರ್ಗ ಹಾಗೂ ಪುರಸಭೆಯ ಸದಸ್ಯರು,ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಇದ್ದರು.