ಸಾರಾಂಶ
- ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆ, ಶಾಲಾ ಮಕ್ಕಳು ಭಾಗಿ
ಕನ್ನಡಪ್ರಭ ವಾರ್ತೆ ಕಮಲಾಪುರಕರ್ನಾಟಕ ಸಂಭ್ರಮ 50ರ ರಥಯಾತ್ರೆಯನ್ನು ತಾಲೂಕಿಗೆ ಶುಕ್ರವಾರ ತಾಲೂಕು ಆಡಳಿತ ಪರ ಮೊಸಿನ್ ಮೊಹಮ್ಮದ್ ನೇತೃತ್ವದಲ್ಲಿ ಶಾಲಾ ಮಕ್ಕಳು ಕನ್ನಡಪರ ಸಂಘಟನೆಗಳು ಮುಖಂಡರು ಸೇರಿದಂತೆ ನಾಗರಿಕರು ಕನ್ನಡ ಕಲಾವಿದರು ನೃತ್ಯ ಡೊಳ್ಳು ಕುಣಿತದಂತಹ , ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕುತ್ತ ಅದ್ಧೂರಿಯಾಗಿ ಬರಮಾಡಿಕೊಂಡರು.ಕನ್ನಡದ ರಥವನ್ನು ಕಮಲಾಪುರ ಪಟ್ಟಣದ ನಾಗರಿಕರು ಸ್ವಾಗತಿಸಿ, ತಹಸೀಲ್ ಕಚೇರಿಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಶಾಲಾ ಮಕ್ಕಳ ನೃತ್ಯ ಕಲಾವಿದರು ನೃತ್ಯದೊಂದಿಗೆ ಕನ್ನಡ ಜೈಕಾರ ಕೂಗುತ್ತಾ ಆಕರ್ಷಿಕ ಮೆರವಣಿಗೆ ಮಾಡುತ್ತಾ ಸಂಜೆ 5 ಗಂಟೆಗೆ ಮಹಾಗಾಂವವರೆಗೆ ತೆರಳಿದ ಬೀಳ್ಕೊಡುಗೆ ಮಾಡಲಾಯಿತು ಎಂದು ತಾಲೂಕು ಆಡಳಿತದವರು ತಿಳಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ ತಾಲೂಕಿನ ಗಡಿ ಗ್ರಾಮವಾದ ವಿಕೆ ಸಲಗರದಲ್ಲಿ ತಾಲೂಕು ಆಡಳಿತ ಪರ ತಹಸೀಲ್ದಾರ್ ಮೊಸಿನ್ ಮಹಮ್ಮದ್ ನೇತೃತ್ವದಲ್ಲಿ ಹಾಗೂ ವಿಕೆ ಸಲಗರ್ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದ ಮುಖಂಡರು ಸೇರಿ ಅನೇಕ ಹಿರಿಯ ಗಣ್ಯರು ಒಳಗೊಂಡು ತಾಲೂಕಿನ ಲಾಡಮುಗಳಿ, ಮಡಕಿ, ಮಡಕೆ ತಾಂಡಾ, ಮಾರ್ಗವಾಗಿ ಕಮಲಾಪುರಕ್ಕೆ ತಲುಪಿದ ರಥಕ್ಕೆ ಪೂಜೆ ಸಲ್ಲಿಸಿ ನಾಗರಿಕರು ಮಲಾರ್ಪಣೆ ಮಾಡಿ ಬೀಳ್ಕೊಡುಗೆ ನೀಡಿದ್ದರು.ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಾಂತಪ್ಪ ಹಾದಿಮನಿ, ಗಂಗಾಧರ್ ಪಾಟೀಲ್, ಉಪ ತಹಸೀಲ್ದಾರ್ ಶರಣು ಜಾಲಹಳ್ಳಿ, ಮಂಜುನಾಥ್ ಬಿರಾದರ್, ತಾಪಂ ಇಒ ಹಾಗೂ ಸಿಬ್ಬಂದಿ, ಸಿಪಿಐ ಶಿವಶಂಕರ್ ಸಾವು, ಪಿಎಸ್ಐ ಸಂಗೀತ ಸಿಂಧೆ ಶಾಲಾ ಕಾಲೇಜು ಶಿಕ್ಷಕರು ಮತ್ತಿತರು ಪಾಲ್ಗೊಂಡಿದ್ದರು.
ಫೋಟೋ- 12ಜಿಬಿ21, 12ಜಿಬಿ22 ಮತ್ತು 12ಜಿಬಿ23