ಸಾರಾಂಶ
ಯೋಧರು ತಮ್ಮ ಪ್ರಾಣ ಲೆಕ್ಕಿಸದೆ ಗಾಳಿ, ಬಿಸಿಲು, ಮಳೆ ಅನ್ನದೆ ದೇಶಕ್ಕಾಗಿ ಶ್ರಮ ವಹಿಸುತ್ತಾರೆ. ಗಡಿಯಲ್ಲಿ ನಮ್ಮನ್ನು ಕಾಯ್ದು ನಿವೃತ್ತಿ ಹೊಂದಿ ಸಾಮಾಜಿಕ ಜೀವನದಲ್ಲಿ ಭಾಗವಹಿಸುತ್ತಾರೆ
ಕುಕನೂರು: ನಿವೃತ್ತಿಯಾಗಿ ಗ್ರಾಮಕ್ಕೆ ಆಗಮಿಸಿದ ತಾಲೂಕಿನ ಕುದರಿಮೋತಿ ಗ್ರಾಮದ ವೀರಯೋಧ ಶಿವಾನಂದ ಮಹಾಂತಪ್ಪ ದೊಡ್ಡಮನಿ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ಸೇನೆಯಲ್ಲಿ 22 ವರ್ಷ ಕಾಲ ಸೇವೆ ಸಲ್ಲಿಸಿ ಶಿವಾನಂದ ನಿವೃತ್ತಿ ಹೊಂದಿದ್ದು. ನಿವೃತ್ತ ಸೈನಿಕ ಶಿವಾನಂದ ಮಹಾಂತಪ್ಪ ದೊಡ್ಡಮನಿ ಹಾಗೂ ಧರ್ಮಪತ್ನಿ ಅವರನ್ನು ಕುದರಿಮೋತಿ ಕ್ರಾಸ್‌ನಿಂದ ಅದ್ಧೂರಿ ಮೆರವಣಿಗೆ ಜರುಗಿತು. ನಂತರ ಸನ್ಮಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗ್ರಾಮದ ದಳಪತಿ ಹನುಮಗೌಡ ಪೊಲೀಸ್ ಪಾಟೀಲ್, ಯೋಧರು ತಮ್ಮ ಪ್ರಾಣ ಲೆಕ್ಕಿಸದೆ ಗಾಳಿ, ಬಿಸಿಲು, ಮಳೆ ಅನ್ನದೆ ದೇಶಕ್ಕಾಗಿ ಶ್ರಮ ವಹಿಸುತ್ತಾರೆ. ಗಡಿಯಲ್ಲಿ ನಮ್ಮನ್ನು ಕಾಯ್ದು ನಿವೃತ್ತಿ ಹೊಂದಿ ಸಾಮಾಜಿಕ ಜೀವನದಲ್ಲಿ ಭಾಗವಹಿಸುತ್ತಾರೆ. ಸಾರ್ವಜನಿಕರು ಹಾಗೂ ದೇಶಭಕ್ತರು ಅವರ ಜತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರು.
ಮಾಜಿ ಸೈನಿಕ ಗವಿಸಿದ್ದಪ್ಪ ದೊಡ್ಡಮನಿ, ಜಿಪಂ ಮಾಜಿ ಸದಸ್ಯ ಅಶೋಕ ತೋಟದ, ಗ್ರಾಪಂ ಅಧ್ಯಕ್ಷೆ ಫರೀದಾಬೇಗಂ ತಂಬಾಕಾದರ್, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮಲ್ಲನಗೌಡ ಕೋನನಗೌಡ್ರು, ಮಾರುತಿ ಗಾವರಾಳ, ಶರಣಪ್ಪ ಗುಂಗಾಡಿ, ಬಸವನಗೌಡ ವಟಪರ್ವಿ, ಮಹಾಂತಪ್ಪ ದೊಡ್ಡಮನಿ, ಗ್ರಾಪಂ ಸದಸ್ಯ ರವಿ ಕಟಗಿ, ಮಂಜುನಾಥ ಸಜ್ಜನ್, ಮಾಬುಸಾಬ್ ಮಕಂದಾರ್, ಬಸಪ್ಪ ದೊಡ್ಡಮನಿ, ಸುಭಾಷ್ ಈಡಿಗೇರ್, ಮಂಜುನಾಥ ಗಟ್ಟೆಪ್ಪನವರ್ ಇತರರಿದ್ದರು.