ಸಾರಾಂಶ
ಮಂಡ್ಯ ನಗರದ ಸಿಹಿನೀರು ಕೊಳದ ಬಳಿ ಇರುವ ಬ್ರಾಹ್ಮಣ ಸಭಾಗೆ ಸೇರಿದ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಅನುಕೂಲವಾಗುವಂತೆ ಅನುದಾನ ಬಿಡುಗಡೆ ಮಾಡಿಕೊಡುತ್ತೇನೆ. ನಾನು ವಿಧಾನಸಭೆಗೆ ಸ್ಪರ್ಧಿಸಿದಾಗ ಬ್ರಾಹ್ಮಣ ಸಭಾದಿಂದಲೇ ಪ್ರಚಾರ ಆರಂಭಿಸಿದ್ದೆ. ಚುನಾವಣೆಯಲ್ಲಿ ನನಗೆ ಜಯ ಸಿಕ್ಕಿತು. ಅದೇ ರೀತಿ ಸ್ಟಾರ್ ಚಂದ್ರು ಪ್ರಚಾರವೂ ಇಲ್ಲಿಂದಲೇ ಆರಂಭವಾಗಿದೆ. ಅವರ ಗೆಲುವೂ ನಿಶ್ಚಿತ.
ಕನ್ನಡಪ್ರಭ ವಾರ್ತೆ ಮಂಡ್ಯಬ್ರಾಹ್ಮಣ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿಯಿಂದ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಬ್ರಾಹ್ಮಣರ ಸಂಘದಿಂದ ಗಾಯಿತ್ರಿ ಭವನದಲ್ಲಿ ಏರ್ಪಡಿಸಿದ್ದ ಮಂಡ್ಯ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನಗರದ ಸಿಹಿನೀರು ಕೊಳದ ಬಳಿ ಇರುವ ಬ್ರಾಹ್ಮಣ ಸಭಾಗೆ ಸೇರಿದ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಅನುಕೂಲವಾಗುವಂತೆ ಅನುದಾನ ಬಿಡುಗಡೆ ಮಾಡಿಕೊಡುತ್ತೇನೆ. ನಾನು ವಿಧಾನಸಭೆಗೆ ಸ್ಪರ್ಧಿಸಿದಾಗ ಬ್ರಾಹ್ಮಣ ಸಭಾದಿಂದಲೇ ಪ್ರಚಾರ ಆರಂಭಿಸಿದ್ದೆ. ಚುನಾವಣೆಯಲ್ಲಿ ನನಗೆ ಜಯ ಸಿಕ್ಕಿತು. ಅದೇ ರೀತಿ ಸ್ಟಾರ್ ಚಂದ್ರು ಪ್ರಚಾರವೂ ಇಲ್ಲಿಂದಲೇ ಆರಂಭವಾಗಿದೆ. ಅವರ ಗೆಲುವೂ ನಿಶ್ಚಿತ ಎಂದರು.
ಅಭ್ಯರ್ಥಿ ವೆಂಕಟರಮಣೇಗೌಡರು ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಎಲ್ಲರ ಆಶೀರ್ವಾದ, ಸಹಕಾರ ನನಗೆ ಮುಖ್ಯವಾಗಿದೆ. ನನ್ನನ್ನು ಗೆಲ್ಲಿಸಿದಲ್ಲಿ ಜನರ ಮಧ್ಯೆ ಇದ್ದು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಭರವಸೆ ನೀಡಿದರು.ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಬೆಳ್ಳೂರು ಶಿವರಾಂ ಮಾತನಾಡಿ, ಜಿಲ್ಲೆಗೆ ಹೊರಗಿನವರು ಬರುವುದು ಬೇಡ. ನಮ್ಮವರಿಗೆ ಪ್ರಾಮುಖ್ಯತೆ ನೀಡೋಣ. ನಮ್ಮವರನ್ನೇ ಬೆಳೆಸೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ನಾಗರಾಜು, ಡಾ.ಭಾನುಪ್ರಕಾಶ್ ಶರ್ಮಾ, ರುದ್ರಪ್ಪ, ಎಂ.ಎಸ್.ಚಿದಂಬರ್, ಅಣ್ಣಯ್ಯ ಮತ್ತಿತರರಿದ್ದರು.ಎನ್.ಕೃಷ್ಣೇಗೌಡ ನೇಮಕಪಾಂಡವಪುರ:ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ನಿರ್ದೇಶಕರನ್ನಾಗಿ ಹಿರಿಯ ಪತ್ರಕರ್ತ ಎನ್.ಕೃಷ್ಣೇಗೌಡರನ್ನು ಸರ್ಕಾರ ನೇಮಕ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಸರ್ಕಾರದ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಜೆ.ಸಿ. ಪ್ರಕಾಶ್ ಅವರು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ನಿರ್ದೇಶಕರಾಗಿ ಎನ್.ಕೃಷ್ಣೇಗೌಡ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.ಮೊಹಮದ್ ಅನ್ವರ್ ನೇಮಕಶ್ರೀರಂಗಪಟ್ಟಣ: ಪಟ್ಟಣದ 14ನೇ ವಾರ್ಡ್ ನಿವಾಸಿ ಮೊಹಮದ್ ಅನ್ವರ್ ಅವರನ್ನು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. ಮೊಹಮದ್ ಅನ್ವರ್ ಪ್ರತಿಕ್ರಿಯಿಸಿ, ನನಗೆ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ, ಪುರಸಭಾ ಸದಸ್ಯ ಎಂ.ಎಲ್.ದಿನೇಶ್ ಹಾಗೂ ಕಾಂಗ್ರೆಸ್ ಟೌನ್ ಸಂಘಟನಾ ಕಾರ್ಯದರ್ಶಿ ಲೋಕೇಶ್ ಅವರು ಈ ಮಹತ್ತರವಾದ ಜವಾಬ್ದಾರಿ ವಹಿಸಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ.