ಸಾರಾಂಶ
ಬ್ಯಾಡಗಿ ತಾಲೂಕಿನ ವಿಶ್ವಕರ್ಮ ಸಮಾಜದ ಬಹುದಿನದ ನಿವೇಶನದ ಬೇಡಿಕೆಯ ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಸಹ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಬ್ಯಾಡಗಿ: ತಾಲೂಕಿನ ವಿಶ್ವಕರ್ಮ ಸಮಾಜದ ಬಹುದಿನದ ನಿವೇಶನದ ಬೇಡಿಕೆಯ ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಸಹ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿಶ್ವಕರ್ಮ ಸಮಾಜ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಎಲ್ಲ ಸಮಾಜದೊಂದಿಗೆ ಸಹ ಬಾಳ್ವೆ ನಡೆಸುತ್ತ ಬಂದಿರುವ ವಿಶ್ವಕರ್ಮ ಬಾಂಧವರು ಸರ್ವಕಾಲಕ್ಕೂ ಸಲ್ಲುವ ಪಂಚ ವೃತ್ತಿಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಅವರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದರು.ವಿಶ್ವಕರ್ಮ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ವಿಠ್ಠಲಾಚಾರಿ ಬಡಿಗೇರ ಮಾತನಾಡಿ, ವಿಶ್ವಕರ್ಮ ಸಮಾಜ ಅತ್ಯಂತ ಬಡ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ, ಪಂಚವೃತ್ತಿಗಳನ್ನೇ ನಂಬಿ ಬದುಕುತ್ತಿರುವ ಜನಾಂಗದ ಕೆಲಸಕ್ಕೂ ಇದೀಗ ಕುತ್ತು ಬಂದಿದೆ, ಮುಂದಿನ ದಿನಗಳಲ್ಲಿ ನಿಮ್ಮ ಅಸ್ತಿತ್ವಕ್ಕೂ ಧಕ್ಕೆ ಬರುವ ದಿನಗಳು ದೂರವಿಲ್ಲ, ಆದ್ದರಿಂದ ಸಂಘಟಿತರಾಗಿ ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಹ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಾಧ್ಯಕ್ಷ ಜಕಣಾಚಾರಿ ಬಡಿಗೇರ, ಪುರಸಭೆ ಸದಸ್ಯೆ ಕಲಾವತಿ ಬಡಿಗೇರ, ಮುಖಂಡರಾದ ಮೌನೇಶ ಬಡಿಗೇರ, ಎನ್.ಬಿ.ಕಮ್ಮಾರ, ನಾಗರಾಜ ಕಮ್ಮಾರ, ಶೇಶಣ್ಣ ಕಮ್ಮಾರ, ಯಶೋಧರ ಅರ್ಕಾಚಾರಿ, ಶಿವಾನಂದ ಬಡಿಗೇರ, ಮೌನೇಶ ಕಮ್ಮಾರ, ಸುನಿತಾ ಬಡಿಗೇರ, ಗಾಯತ್ರಿ ಅರ್ಕಾಚಾರಿ, ಸೇರಿದಂತೆ ತಹಸೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ಇನ್ನಿತರರಿದ್ದರು.