ಸಾರಾಂಶ
ಹಲಗೂರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೌಚಾಲಯ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ 30 ಸಾವಿರ ರು. ಅನುದಾನ ನೀಡಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆಯವರಿಗೆ ಅನುದಾನ ಕೋರಿ ಶಾಲೆಯಿಂದ ಮನವಿ ಪತ್ರ ಸಲ್ಲಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೌಚಾಲಯ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ 30 ಸಾವಿರ ರು. ಅನುದಾನ ನೀಡಲಾಯಿತು.ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆಯವರಿಗೆ ಅನುದಾನ ಕೋರಿ ಶಾಲೆಯಿಂದ ಮನವಿ ಪತ್ರ ಸಲ್ಲಿಸಲಾಗಿತ್ತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 2025-26ನೇ ಸಾಲಿನ ಜ್ಞಾನ ದೀಪ ಕಾರ್ಯಕ್ರಮದಂತೆ ಶಾಲಾ ಶೌಚಾಲಯ ಕಟ್ಟಡ ರಚನೆಗೆ ಪೂಜ್ಯರು 30 ಸಾವಿರ ರು. ಅನುದಾನ ನೀಡಿದರು.ಅನುದಾನ ಮಂಜೂರಾತಿಯಾದ ಅನುದಾನ ಪತ್ರವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಭಾರತಿನಗರ ವಲಯ ಯೋಜನಾಧಿಕಾರಿ ಶ್ರೀಮತಿ ಸುವರ್ಣ ಭಟ್ ಮೂಲಕ ಹಲಗೂರು ವಿದ್ಯಾ ಸಂಸ್ಥೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಅನುದಾನದ ಮುಂಜೂರಾತಿ ಪತ್ರ ವಿತರಿಸಿದರು.
ಈ ವಿದ್ಯಾ ಸಂಸ್ಥೆ ನಿರ್ದೇಶಕರಾದ ಎ.ಟಿ.ಶ್ರೀನಿವಾಸ್, ಎನ್.ಎಸ್.ಗುಣೇಶ್, ಜಿ.ಎಸ್.ಮನೋಹರ್, ಸಿ.ಪ್ರವೀಣ್, ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಎಚ್.ಶಿವರಾಮ್ ಉಪಸ್ಥಿತರಿದ್ದರು.ಅನಿಕೇತನ ಪ್ರೌಢಶಾಲೆಗೆ ಶೇ. 97ರಷ್ಟು ಫಲಿತಾಂಶ
ಮಂಡ್ಯ: ಐಸಿಎಸ್‌ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕಾಳೇನಹಳ್ಳಿಯ ಅನಿಕೇತನ ಪ್ರೌಢಶಾಲೆಗೆ ಶೇ. 97ರಷ್ಟು ಫಲಿತಾಂಶ ಬಂದಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿದೆ.ಶಾಲೆ ವಿದ್ಯಾರ್ಥಿಗಳಾದ ಪಾವನ ಸೂರ್ಯದೇವರ (615), ಜಿ.ಎಸ್. ಪ್ರೀತಮ್ (614), ಯಶಸ್ವಿನಿ (600), ಯಶಸ್ವಿನಿ ಎಸ್.ಗೌಡ (593), ಆರ್.ರಾಧಿಕಾ (573), ಎ.ಹಿತೈಷಿ (547) ಅವರು ಅಂಕ ಪಡೆದಿದ್ದಾರೆ. 14 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 53 ಪ್ರಥಮ ಶ್ರೇಣಿ ಪಡೆದುಕೊಂಡಿದ್ದಾರೆ. ಈ ಬಾರಿಯೂ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ಶಾಲೆ ಪ್ರಾಂಶುಪಾಲ ರಾಮಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.