ಸಾರಾಂಶ
ಈ ವೇಳೆ ಶ್ರೀ ಹಟ್ಟಿಮಾರಮ್ಮ, ಶ್ರೀ ಸಿದ್ಧೇಶ್ವರ ಮತ್ತು ಶ್ರೀ ಚೌಡಮ್ಮ ದೇವಾಲಯ ಸಮಿತಿ ವತಿಯಿಂದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರನ್ನು ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ತಂದೆ, ಮಾಜಿ ಸಂಸದ ದಿ.ಜಿ.ಮಾದೇಗೌಡರಿಗೆ ಅಣ್ಣೂರು ಗ್ರಾಮ ಎಂದರೆ ಅಚ್ಚು ಮೆಚ್ಚು. ಈ ಗ್ರಾಮದ ಅಭಿವೃದ್ಧಿಗೆ ನನ್ನ ಕೈಲಾದಷ್ಟು ಅನುದಾನ ನೀಡಿ ಸಹಕರಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭರವಸೆ ನೀಡಿದರು.ಅಣ್ಣೂರು ಗ್ರಾಮದಲ್ಲಿ ಶ್ರೀ ಹಟ್ಟಿಮಾರಮ್ಮ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನನ್ನ ತಂದೆಗೆ ಅಣ್ಣೂರಿನ ಜನರೊಂದಿಗೆ ತುಂಬಾ ಒಡನಾಟವಿತ್ತು. ಅದನ್ನು ನಾನು ಸಹ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ರಾಜಕೀಯವನ್ನು ಚುನಾವಣೆ ವೇಳೆ ಮಾತ್ರ ಮಾಡಿ, ಉಳಿದ ಸಮಯದಲ್ಲಿ ಗ್ರಾಮದ ಅಭಿವೃದ್ಧಿಗೆ ಒಗ್ಗಟ್ಟಾಗಿ ಕಾರ್ಯಯೋಜನೆ ರೂಪಿಸಬೇಕು. ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ. ನನ್ನ ಅವಧಿ ಇನ್ನೂ 4 ವರ್ಷವಿದೆ. ಪರಿಷತ್ ಚುನಾವಣೆಯಲ್ಲೂ ನನಗೆ ಹೆಚ್ಚಿನ ಮತ ನೀಡಿರುವ ನಿಮ್ಮ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದು ತಿಳಿಸಿದರು.ಗ್ರಾಮಗಳಲ್ಲಿ ದೇಗುಲಗಳ ನಿರ್ಮಾಣದಿಂದ ಜನರಲ್ಲಿ ಶಾಂತಿ, ನೆಮ್ಮದಿ ಜತೆಗೆ ಒಗ್ಗಟ್ಟು, ವಿಶ್ವಾಸಗಳು ಮೂಡುತ್ತವೆ. ಕೆಲಸ- ಕಾರ್ಯಗಳನ್ನು ಒಟ್ಟಾಗಿ ನಿಂತು ಉತ್ತಮ ದೇವಾಲಯ ಮೂಡಿ ಬರಲು ಪ್ರತಿಯೊಬ್ಬರೂ ಸಹಕರಿಸಿ ಎಂದು ತಿಳಿಸಿದರು.
ಈ ವೇಳೆ ಶ್ರೀ ಹಟ್ಟಿಮಾರಮ್ಮ, ಶ್ರೀ ಸಿದ್ಧೇಶ್ವರ ಮತ್ತು ಶ್ರೀ ಚೌಡಮ್ಮ ದೇವಾಲಯ ಸಮಿತಿ ವತಿಯಿಂದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರನ್ನು ಅಭಿನಂದಿಸಲಾಯಿತು.ಮನ್ಮುಲ್ ನಿರ್ದೇಶಕ ಎ.ಸಿ.ಸತೀಶ್, ತಾಪಂ ಮಾಜಿ ಸದಸ್ಯ ಬಿ. ಗಿರೀಶ್, ಸೊಸೈಟಿ ಮಾಜಿ ಅಧ್ಯಕ್ಷ ಆರ್. ಸಿದ್ದಪ್ಪ, ಮುಖಂಡರಾದ ಮಹೇಂದ್ರ, ತಮ್ಮಣ್ಣ, ಪಿಟಿ. ಕುಮಾರ್, ರೇವಣ್ಣ, ಚನ್ನಶೆಟ್ಟಿ, ವರದರಾಜು, ನಾಗರಾಜು, ಪೇಯಿಂಟ್ ಪುಟ್ಟಸ್ವಾಮಿ, ದೇವರಾಜು ಸೇರಿದಂತೆ ಹಲವರಿದ್ದರು.