ಕಂಚುಗಾರರ ಬೀದಿಯಲ್ಲಿರುವ ನೇಕಾರ ಕುರುಹಿನಶೆಟ್ಟಿ ಜನಾಂಗದ ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ವಾರ್ಡ್‌ಗಳ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪುರಸಭೆಯ ೨೩ ವಾರ್ಡ್‌ಗಳ ವ್ಯಾಪ್ತಿಯ ಅಭಿವೃದ್ಧಿಗೆ ತಲಾ ಒಂದು ಕೋಟಿಯಂತೆ ೨೩ ಕೋಟಿ ರು.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎದುರು ಮುಖದ ಶ್ರೀ ಆಂಜನೇಯಸ್ವಾಮಿಯ ದೇವಾಲಯಕ್ಕೆ ಅಡಿಗೆ ಕೋಟೆ ಅವಶ್ಯಕತೆ ಇದೆ ಎಂದು ಐದು ಲಕ್ಷ ರು.ಗೆ ಬೇಡಿಕೆ ಸಲ್ಲಿಸಿದ್ದಾರೆ, ಹಣ ಕೊಡಿಸುವ ಭರವಸೆ ನೀಡಿದ್ದೇನೆ ಎಂದರು. ಇಂದು ಸಂಜೆ ೧ರಿಂದ ೫ನೇ ವಾರ್ಡ್ ತನಕ ಭೇಟಿ ನೀಡಿ ಚರ್ಚಿಸಲಿದ್ದೇನೆ. ನಾಳೆ ದೇವಾಂಗ ಬಡಾವಣೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಇನ್ನೈದು ವಾರ್ಡ್‌ಗಳಿಗೆ ಭೇಟಿ ನೀಡುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಸುಮಾರು ೪೦ ವರ್ಷಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಶಾಸಕರಾಗಿದ್ದಾಗ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಒಳಚರಂಡಿ ಮಂಡಳಿಯಿಂದ ಅನುಮೋದನೆ ದೊರೆತಿದೆ. ಹಣಕಾಸು ಮಂತ್ರಿಗಳ ಜತೆಗೆ ಚರ್ಚಿಸಿದ್ದು, ಶೀಘ್ರದಲ್ಲಿ ೧೨೬ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಮಾಹಿತಿ ನೀಡಿದರು.

ಪಟ್ಟಣದ ಕಂಚುಗಾರರ ಬೀದಿಯಲ್ಲಿರುವ ನೇಕಾರ ಕುರುಹಿನಶೆಟ್ಟಿ ಜನಾಂಗದ ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ವಾರ್ಡ್‌ಗಳ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪುರಸಭೆಯ ೨೩ ವಾರ್ಡ್‌ಗಳ ವ್ಯಾಪ್ತಿಯ ಅಭಿವೃದ್ಧಿಗೆ ತಲಾ ಒಂದು ಕೋಟಿಯಂತೆ ೨೩ ಕೋಟಿ ರು.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎದುರು ಮುಖದ ಶ್ರೀ ಆಂಜನೇಯಸ್ವಾಮಿಯ ದೇವಾಲಯಕ್ಕೆ ಅಡಿಗೆ ಕೋಟೆ ಅವಶ್ಯಕತೆ ಇದೆ ಎಂದು ಐದು ಲಕ್ಷ ರು.ಗೆ ಬೇಡಿಕೆ ಸಲ್ಲಿಸಿದ್ದಾರೆ, ಹಣ ಕೊಡಿಸುವ ಭರವಸೆ ನೀಡಿದ್ದೇನೆ ಎಂದರು. ಇಂದು ಸಂಜೆ ೧ರಿಂದ ೫ನೇ ವಾರ್ಡ್ ತನಕ ಭೇಟಿ ನೀಡಿ ಚರ್ಚಿಸಲಿದ್ದೇನೆ. ನಾಳೆ ದೇವಾಂಗ ಬಡಾವಣೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಇನ್ನೈದು ವಾರ್ಡ್‌ಗಳಿಗೆ ಭೇಟಿ ನೀಡುತ್ತೇನೆ ಎಂದರು.

ದೊಡ್ಡಮಸೀದಿ ಬೀದಿ ಹಾಗೂ ಕುರುಹಿನಶೆಟ್ಟಿ ಸಮುದಾಯ ಭವನಕ್ಕೆ ಭೇಟಿ ನೀಡಿ, ಬಡಾವಣೆಯ ನಿವಾಸಿಗಳ ಜತೆ ಚರ್ಚಿಸಿದರು. ಆರ್. ರಮೇಶ್, ಎಚ್.ಟಿ.ನರಸಿಂಹಶೆಟ್ಟಿ, ಆರ್. ಮಂಜುನಾಥ್, ಎಚ್.ಆರ್‌. ಬಾಲಕೃಷ್ಣ, ಜಯಕುಮಾರ್ ಬಿ.ಎನ್., ಎಂ.ವಿ.ಮಂಜುನಾಥ್, ಹನುಮಂತಣ್ಣ, ಆರ್. ಕೆ. ಗುರುರಾಜ್, ರಂಗಸ್ವಾಮಿ, ಸುಬ್ರಮಣ್ಯ, ಪ್ರಕಾಶ್, ಬಾಲು, ಇತರರು ಇದ್ದರು.