ಸಾರಾಂಶ
ಕಾಂಗ್ರೆಸ್ ಜನಪರ ಆಡಳಿತ ನೀಡುತ್ತಿದ್ದು ಸರ್ಕಾರದ ಸೌಲಭ್ಯಗಳ ಪಡೆಯಲು ಗ್ರಾಮಾಂತರ ಪ್ರದೇಶಗಳ ಜನರು ಕಚೇರಿಗಳಿಗೆ ಅಲೆದಾಡುವುದು ತಪ್ಪಿಸುವ ಉದ್ದೇಶದಿಂದ ಗ್ರಾಮಮಟ್ಟದಲ್ಲೇ ಜನತಾದರ್ಶನ ಕಾರ್ಯಕ್ರಮ, ತಾಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಜನರ ಮನೆ ಬಾಗಿಲಿಗೆ ಕರೆತಂದು ಸರ್ಕಾರದ ಸೌಲಭ್ಯಗಳ ಅರ್ಹ ಫಲಾನುಭವಿಗಳಿಗೆ ಕೊಡಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಕ್ಷೇತ್ರದ ಪ್ರಮುಖ ನೀರಾವರಿ ಯೋಜನೆ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಗೆ ಒಳಪಡುವ ಎಲ್ಲಾ ಕೆರೆಗಳಿಗೆ ಶೀಘ್ರವೇ ನೀರು ಹರಿಸಲಿದ್ದು ಬೊಮ್ಮೇನಹಳ್ಳಿ ಗ್ರಾಮದಲ್ಲಿನ 29ಎಕರೆ ವಿಸ್ತೀರ್ಣದ ಕೆರೆ ದುರಸ್ತಿಗೆ ₹84.74ಲಕ್ಷ ಅನುದಾನ ಮಂಜೂರಾಗಿದ್ದು, ದುರಸ್ತಿ ಕಾಮಗಾರಿ ಕೆಲಸಕ್ಕೆ ಈ ದಿನ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.ತಾಲೂಕಿನ ನುಗ್ಗಿಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ಮಂಗಳವಾರ ಜನತಾದರ್ಶನ ಕಾರ್ಯಕ್ರಮ ನಡೆಸಿ ಸರ್ಕಾರದ ವಿವಿಧ ಸೌಲಭ್ಯಗಳ ಮಂಜೂರಾತಿ ಪತ್ರಗಳ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ ಹಿರೇಹಳ್ಳದ ಒಂದು ಭಾಗ ಕುಸಿದಿದ್ದು ಇದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಜನತಾದರ್ಶನ ಕಾರ್ಯಕ್ರಮಗಳ ನಡೆಸಿ ಜನರ ಸಮಸ್ಯೆಗಳ ಸ್ಥಳದಲ್ಲೇ ಬಗೆ ಹರಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಜನಪರ ಆಡಳಿತ ನೀಡುತ್ತಿದ್ದು ಸರ್ಕಾರದ ಸೌಲಭ್ಯಗಳ ಪಡೆಯಲು ಗ್ರಾಮಾಂತರ ಪ್ರದೇಶಗಳ ಜನರು ಕಚೇರಿಗಳಿಗೆ ಅಲೆದಾಡುವುದು ತಪ್ಪಿಸುವ ಉದ್ದೇಶದಿಂದ ಗ್ರಾಮಮಟ್ಟದಲ್ಲೇ ಜನತಾದರ್ಶನ ಕಾರ್ಯಕ್ರಮ, ತಾಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಜನರ ಮನೆ ಬಾಗಿಲಿಗೆ ಕರೆತಂದು ಸರ್ಕಾರದ ಸೌಲಭ್ಯಗಳ ಅರ್ಹ ಫಲಾನುಭವಿಗಳಿಗೆ ಕೊಡಿಸಲಾಗುತ್ತಿದೆ ಎಂದರು.ಸಮಾರಂಭದಲ್ಲಿ ಬೆಸ್ಕಾಂ ಅಭಿಯಂತರ ಟಿ.ನಾಗರಾಜ್, ಪಿಡಿಒ ಬಸವರಾಜ್, ನಾಗರಾಜ್, ಬೈರಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಕಿರಣ್, ಉಪಾಧ್ಯಕ್ಷ ಕುಬೇರಪ್ಪ, ಮಹೇಶ್ವರಪ್ಪ, ಭಾಗ್ಯ, ಡಾ.ಅಜಯ್ ಕುಮಾರ್, ಕೆ.ಪಿ.ಗಿರೀಶ್, ಮೋಹನ್, ರುದ್ರೇಶ್, ಕಾಕನೂರು ಸತೀಶ್ ಸೇರಿ ಗ್ರಾಮಸ್ಥರಿದ್ದರು.