ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ: ಕೆ.ಎಸ್.ಆನಂದ್

| Published : Jan 28 2025, 12:49 AM IST

ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ: ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುಆಟ ಪಾಠಗಳನ್ನು ಭೋಧಿಸುವ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲು ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ ತಂದು ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಆಟ ಪಾಠಗಳನ್ನು ಭೋಧಿಸುವ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲು ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ ತಂದು ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ₹20 ಲಕ್ಷ ವೆಚ್ಚದ ನೂತನ ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಕಲಿತು ಮಕ್ಕಳಿಗೆ ಅಂನವಾಡಿಯಲ್ಲಿ ಕಲಿಕೆ ಆರಂಭಿಸುವುದರಿಂದ ಇದೇ ಅವರ ಮೊದಲ ಹಂತ ಈ ನಿಟ್ಟಿನಲ್ಲಿ ಪಟ್ಟಣದಲ್ಲಿ 6 ಕಡೆ ನೂತನ ಅಂಗನವಾಡಿ ಕೇಂದ್ರಗಳ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿವೆ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ₹20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಆನುದಾನ ನೀಡುತ್ತಿದೆ. ಪಟ್ಟಣದ ಸಂತೆ ಮೈದಾನ, ರಾಜೀವ್ ಗಾಂಧಿ ಬಡಾವಣೆ, 9ನೇ ವಾರ್ಡಿನಲ್ಲಿ ಮತ್ತು ನರಭೋವಿ ಕಾಲೋನಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ ಎಂದರು. ಪಟ್ಟಣ ಪ್ರದೇಶಗಳಿಗೂ ಅಂಗನವಾಡಿ ಬೇಕು ಅಂಗನವಾಡಿಗಳಿಂದ ಸಾಕಷ್ಟು ಉಪಯೋಗವಿದ್ದು, ಪೋಷಕಾಂಶ ಮತ್ತು ಆಹಾರ ವಿತರಣೆ, ಮಕ್ಕಳ ಆರೋಗ್ಯ ಕಾಪಾಡುವ ಈ ಕೇಂದ್ರಗಳು ಸರಕಾರಿ ಶಾಲಾ ಕಟ್ಟಡದ ಪಕ್ಕದಲ್ಲಿ ಇದ್ದರೆ ಮಕ್ಕಳು ಇಲ್ಲಿಂದ ಮುಂದಿನ ಶಾಲೆಗಳಿಗೆ ಹೋಗುತ್ತಾರೆ. ಅಂಗನವಅಡಿ ಕಾರ್ಯಕರ್ತೆಯರು ಪರಿಶ್ರಮದಿಂದ ಕೆಲಸ ಮಾಡುತ್ತಿದ್ದು ಅವರ ಬೇಡಿಕೆ ಈಡೇರುವ ಕಾಲ ಹತ್ತಿರವಿದೆ ಎಂದ ಅವರು, ಮಕ್ಕಳ ಇಲಾಖೆಯಿಂದ ನಿರ್ವಹಣೆಯಾಗುವ ಅಂಗನವಾಡಿ ಕೇಂದ್ರಗಳಿಂದ ಸವಲತ್ತು ಗಳು ಪ್ರತಿ ಜನರಿಗೆ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಅಂಗನವಾಡಿ ಕೇಂದ್ರಗಳು ಮನೆಗಳಂತಾಗಿದ್ದು ಮಕ್ಕಳ ಶಿಕ್ಷಣಕ್ಕೆ, ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳ ವಿತರಣೆ ಕೂಡ ಇಲ್ಲಿ ನಡೆಯಲಿದೆ. ಶೀಘ್ರದಲ್ಲೇ ಪುರಸಭೆಯಿಂದ ಅಂಗನವಾಡಿ ಕೇಂದ್ರಗಳ ದಾಖಲೆ ನೀಡಲಾಗುವುದು. ಅಗತ್ಯವಿರುವ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಜಾಗ ನೀಡಲಾಗುವುದು. ಶಾಸಕರ ಸಹಕಾರದಿಂದ ಕೇಂದ್ರಗಳ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಪುರಸಭೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಶಿವಪ್ರಸಾದ್ ಮಾತನಾಡಿ, ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಕಡೂರು ಪಟ್ಟಣದಲ್ಲಿ ಸುಮಾರು 13 ಕಡೆ ಜಾಗ ಗುರುತು ಮಾಡಲಾಗಿದೆ. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಎಲ್ಲ ರೀತಿ ಸಹಕಾರ ನೀಡಿ ಜಾಗವನ್ನು ನೀಡುತ್ತಿದ್ದಾರೆ ಉತ್ತಮ ಕಟ್ಟಡ ನಿರ್ಮಾಣಕ್ಕಾಗಿ ಶಾಸಕರಿಗೆ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಘಟಕದ ಅದ್ಯಕ್ಷ ಆಸಂದಿ ಕಲ್ಲೇಶ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಶ್ರೀಕಾಂತ್, ಹಾಲಮ್ಮ, ಮಂಡಿ ಎಕ್ಬಾಲ್‌, ಸೈಯ್ಯದ್ ಯಾಸಿನ್, ಕಮಲಾ ವೆಂಕಟೇಶ್‌, ಮನು ಮರುಗುದ್ದಿ, ಸುಧಾ ಉಮೇಶ್, ಕೆ ಆರ್ ಐ ಡಿ ಎಲ್ ಅಧಿಕಾರಿ ಅಶ್ವಿನಿ, ಶಿಕ್ಷಣಾಧಿಕಾರಿ ದೇವರಾಜ್ ನಾಯ್ಕ, ಮುಖಂಡರಾದ ಡಿ.ಕೆ. ಹೈದರ್, ಅಭಿದ್ ಪಾಷ, ಜಿಮ್ ರಾಜು. ಅ.ಕೇಂದ್ರಗಳ ಸಹಾಯಕಿಯರು, ಕಾರ್ಯಕರ್ತರು ಮತ್ತಿತರರು ಇದ್ದರು. 27ಕೆಕೆಡಿಯು1.

ಕಡೂರು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ₹20 ಲಕ್ಷ ವೆಚ್ಚದ ನೂತನ ಅಂಗನವಾಡಿ ಕೇಂದ್ರದ ಕಾಮಗಾರಿಗೆ ಶಾಸಕ ಕೆ. ಎಸ್. ಆನಂದ್ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರೊಂದಿಗೆ ಚಾಲನೆ ನೀಡಿದರು.