ಶೃಂಗೇರಿಶಿಕ್ಷಣ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಶಿಕ್ಷಣದ ಮಹತ್ತರ ಸಾಧನೆ ಎಂದರೆ ಸುಜ್ಞಾನದ ಬೆಳಕಾಗಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಉಪನ್ಯಾಸ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶಿಕ್ಷಣ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಶಿಕ್ಷಣದ ಮಹತ್ತರ ಸಾಧನೆ ಎಂದರೆ ಸುಜ್ಞಾನದ ಬೆಳಕಾಗಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಗೋಣಿಬೀಡಿನ ಪುಷ್ಪಗಿರಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ಜ್ಞಾನಪುಷ್ಪ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸಮಾಜ ದಲ್ಲಿ ಸಾಕ್ಷರರ ಸಂಖ್ಯೆ ಹೆಚ್ಚಿದ್ದರೂ ಜಾತಿ ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕುತ್ತಿದ್ದು ನಾನು ಎಂಬ ಅಹಂ ಭಾವದಿಂದ ಬೀಗುತ್ತಿದೆ. ಸುಶಿಕ್ಷಿತರು ಸಮಾಜದ ವಿದ್ವಂಸಕ ಕೃತ್ಯಗಳನ್ನು ಖಂಡಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು. ಪ್ರಕೃತಿ ಎಂದಿಗೂ ಎಲ್ಲವೂ ನನ್ನದು ಎಂಬ ಅಹಂಭಾವ ತೋರುವುದಿಲ್ಲ. ಸೂರ್ಯ ಹುಟ್ಟುತ್ತಾನೆ.ಚಂದಿರ ಬೆಳಕು ಪಸರಿಸುತ್ತಾನೆ ಎಂದರು.

ವೈವಿಧ್ಯಮಯ ಹೂಗಳು, ಸಸ್ಯಗಳು ಬೆಳೆಯುತ್ತದೆ. ಇತಿಹಾಸ ಓದುವುದು ಇತಿಹಾಸ ಸೃಷ್ಠಿಸಲು ಮಾತ್ರ. ವಿಜ್ಞಾನ ಇರುವುದು ಸಕಲರ ಶ್ರೇಯಸ್ಸಿಗೆ ಎಂಬುದನ್ನು ಯುವಪೀಳಿಗೆ ಅರಿತುಕೊಳ್ಳಬೇಕು.ಭಾವನೆಗಳು ಸಂವೇದನಾ ಸ್ವರೂಪ ತಾಳಿದಾಗ ಮಾತ್ರ ನಮ್ಮಲ್ಲಿ ವಿವೇಚನೆ ಬೆಳೆಯಲು ಸಾಧ್ಯ ಎಂದರು.

ನಿವೃತ್ತ ಶಿಕ್ಷಕ ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಮೋಹನ್ ರಾಜಣ್ಣ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್, ಪ್ರಜ್ವಲ್, ಚಂದನ್ ಮತ್ತಿತರರು ಉಪಸ್ಥಿತರಿದ್ದರು.

23 ಶ್ರೀ ಚಿತ್ರ 1-

ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ನಡೆದ ಜ್ಞಾನಪುಷ್ಪ ಕಾರ್ಯಕ್ರಮವನ್ನು ನಿವೃತ್ತಶಿಕ್ಷಕ ಸತ್ಯನಾರಾಯಣ ಉದ್ಘಾಟಿಸಿದರು.