ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕಳೆದೊಂದು ವಾರದಿಂದ ರಾಜಾಪೂರದ ಕಾಳಮ್ಮವಾಡಿ ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಇದೀಗ ರಬಕವಿ-ಮಹಿಷವಾಡಗಿ ಸೇತುವೆಯಿಂದ ಹಿಪ್ಪರಗಿ ಜಲಾಶಯದತ್ತ ಸಾಗುತ್ತಿರುವುದು ಜನರಲ್ಲಿ ನಿರಾಳತೆ ಮೂಡಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕಳೆದೊಂದು ವಾರದಿಂದ ರಾಜಾಪೂರದ ಕಾಳಮ್ಮವಾಡಿ ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಇದೀಗ ರಬಕವಿ-ಮಹಿಷವಾಡಗಿ ಸೇತುವೆಯಿಂದ ಹಿಪ್ಪರಗಿ ಜಲಾಶಯದತ್ತ ಸಾಗುತ್ತಿರುವುದು ಜನರಲ್ಲಿ ನಿರಾಳತೆ ಮೂಡಿದೆ.ಅವಳಿ ನಗರದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಇದು ಕೂಡ ಸಹಾಯಕವಾಗಿದ್ದು, ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರು ಹಿಪ್ಪರಗಿ ಜಲಾಶಯದತ್ತ ತೆರಳುತ್ತಿದೆ. ನೀರಿಲ್ಲದೆ ಸ್ಥಗಿತವಾಗಿದ್ದ ಅವಳಿ ನಗರಕ್ಕೆ ನೀರು ಪೂರೈಸುವ ಪಂಪ್‌ಗಳು ಕಾರ್ಯಾರಂಭ ಮಾಡಿವೆ. ಇದರಿಂದ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ. ಬೇಸಿಗೆ ಮುಗಿದ ನಂತರವೂ ಕೃಷ್ಣೆಗೆ ನೀರು ಬಾರದ ಹಿನ್ನೆಲೆ ಈ ಬಾರಿ ಹಿಪ್ಪರಗಿ ಜಲಾಶಯ ಬತ್ತಿ ಹೋಗಿತ್ತು. ಇದೀಗ ಮತ್ತೆ ಹಳೆಯ ಗತವೈಭವ ಜನರು ಕಣ್ತುಂಬಿಕೊಳ್ಳುವಂತಾಗಿದೆ.
ಇನ್ನಷ್ಟು ನೀರು ಮಹಾರಾಷ್ಟ್ರದಿಂದ ಹರಿದು ಬರುತ್ತಿರುವುದರಿಂದ ಕೃಷ್ಣೆಯ ಒಡಲಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದು ಕೃಷ್ಣೆಯ ಇಕ್ಕೆರಲ ದಡ ತುಂಬುವುದು ಖಚಿತ ಎನ್ನಲಾಗಿದೆ.