ಗುಣಮಟ್ಟದ ಹಾಲು ಶೇಖರಣೆಯಿಂದ ಹೆಚ್ಚಿನ ಲಾಭ: ಸದಾಶಿವಮೂರ್ತಿ

| Published : Sep 23 2024, 01:30 AM IST

ಗುಣಮಟ್ಟದ ಹಾಲು ಶೇಖರಣೆಯಿಂದ ಹೆಚ್ಚಿನ ಲಾಭ: ಸದಾಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಣಮಟ್ಟದ ಹಾಲು ಸಂಗ್ರಹಣೆಯಿಂದ ಹಾಲಿನ ಉಪ ಉತ್ಪನ್ನಗಳನ್ನು ತಯಾರು ಹಾಗೂ ಹಾಲಿನ ಪೌಡರ್ ಮಾಡಲು ಸಹಕಾರಿಯಾಗುತ್ತದೆ. ಲಾಭಾಂಶವು ಹೆಚ್ಚು ಬರುತ್ತದೆ ಎಂದು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ತಿಳಿಸಿದರು. ಚಾಮರಾಜನಗರದಲ್ಲಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ನಂಜೇದೇವನಪುರ ಡೇರಿಗೆ ₹೧.೭೨ ಲಕ್ಷ ನಿವ್ಚಳ ಲಾಭ । ೭೭ ಸಾವಿರ ಬೋನಸ್ ವಿತರಣೆ: ಶ್ರೀಕಂಠಕುಮಾರ್ ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಹಾಲು ಒಕ್ಕೂಟಕ್ಕೆ ಪ್ರತಿನಿತ್ಯ ೩ ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಗುಣಮಟ್ಟದ ಹಾಲು ಸಂಗ್ರಹಣೆಯಿಂದ ಹಾಲಿನ ಉಪ ಉತ್ಪನ್ನಗಳನ್ನು ತಯಾರು ಹಾಗೂ ಹಾಲಿನ ಪೌಡರ್ ಮಾಡಲು ಸಹಕಾರಿಯಾಗುತ್ತದೆ. ಲಾಭಾಂಶವು ಹೆಚ್ಚು ಬರುತ್ತದೆ ಎಂದು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ತಿಳಿಸಿದರು. ತಾಲೂಕು ನಂಜೇದೇವನಪುರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು, ನಂಜೇದೇವನಪುರ ಡೇರಿಯು ಗುಣಮಟ್ಟದ ಹಾಲು ಸಂಗ್ರಹ ಮಾಡಿದ ಪರಿಣಾಮ ೧.೭೨ ಲಕ್ಷ ರು.ಗಳ ನಿವ್ವಳ ಪಡೆದುಕೊಂಡಿದೆ. ಇದರಲ್ಲಿ ಬೋನಸ್ ಆಗಿ ಉತ್ಪಾದಕರಿಗೆ ೭೪ ಸಾವಿರ ರು. ನೀಡಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಡೇರಿಗಳು ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಒಕ್ಕೂಟ ಅಭಿವೃದ್ದಿಯಾಗುತ್ತದೆ. ಡೇರಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದರು. ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ನೌಕರರು ಹಾಗೂ ಆಡಳಿತ ಮಂಡಳಿಯ ಪಾತ್ರ ಬಹಳಷ್ಟಿದೆ. ನಂಜೇದೇವನಪುರ ಡೇರಿ ಗುಣಮಟ್ಟದ ಹಾಲು ನೀಡಿ, ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ, ನೌಕರರು ಅಭಿನಂದನಾರ್ಹರು. ಈಗಾಗಲೇ ಒಕ್ಕೂಟ ಮತ್ತು ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ನೀಡಲಾಗಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು. ಸಂಘದ ಅಧ್ಯಕ್ಷ ಎನ್.ಎಸ್. ಶ್ರೀಕಂಠಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರು ಗುಣಮಟ್ಟದ ಹಾಲು ನೀಡುವ ಮೂಲಕ ಹೆಚ್ಚಿನ ಲಾಭ ಪಡೆದುಕೊಳ್ಳಬೇಕು. ೭೭ ಸಾವಿರ ರು. ಬೋನಸ್ ಅನ್ನು ಷೇರುದಾರ ಸದಸ್ಯರಿಗೆ ನೀಡಲಾಗುತ್ತದೆ ಎಂದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಎನ್.ಅಮರ್ ಮಾತನಾಡಿ, ಹಸು ಸಾಕಾಣಿಕೆ ಮತ್ತು ಹಾಲಿನಲ್ಲಿ ಕೊಬ್ಬಿನಾಂಶವನ್ನು ಹೆಚ್ಚಿಸಿಕೊಳ್ಳುವ ಕುರಿತು ವಿವರವಾಗಿ ತಿಳಿಸಿದರು.

ಸಂಘ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಬಿ.ಮಹದೇವಕುಮಾರ್ ವಾರ್ಷಿಕ ವರದಿ ಓದಿ ಅನುಮೋದನೆ ಪಡೆದುಕೊಂಡರು. ಸಂಘಕ್ಕೆ ಹೆಚ್ಚಿನ ಹಾಲು ಸರಬರಾಜು ಮಾಡಿದ ಮಹೇಶ್, ಮಾದಪ್ಪ. ಶಿವರಾಜು ಅವರಿಗೆ ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ನೀಡಲಾಯಿತು. ಸಭೆಯ ಸಾನ್ನಿಧ್ಯವನ್ನು ಶ್ರೀ ರಾಜೇಂದ್ರಸ್ವಾಮೀಜಿ ವಹಿಸಿದ್ದರು. ಹಿರಿಯ ಮುಖಂಡರಾದ ಪಿ.ರಾಜಣ್ಣ, ಗ್ರಾಪಂ ಅಧ್ಯಕ್ಷ ಪಿ. ಶೇಖರಪ್ಪ, ನೌಕರರ ಸಂಘದ ಅಧ್ಯಕ್ಷ ಪಿ.ಶಾಂತು, ಚಾಮುಲ್ ವಿಸ್ತರಣಾಧಿಕಾರಿ ನಾಗೇಶ್, ಸಂಘದ ಉಪಾಧ್ಯಕ್ಷ ನೀಲಕಂಠಪ್ಪ, ನಿರ್ದೇಶಕರಾದ ವೀರೂಪಾಕ್ಷ, ಗುರುಮಲ್ಲಪ್ಪ, ಮಾದಪ್ಪ, ಮಹದೇವಪ್ಪ, ಚಿಕ್ಕಮಾದೇಗೌಡ, ಮಹದೇವೇಗೌಡ, ಶಿವಮ್ಮ, ಗುರುತಾಯಮ್ಮ, ಹಾಲು ಪರೀಕ್ಷಕ ಮಹದೇವಪ್ಪ, ಸಹಾಯಕ ಮಾದಪ್ಪ, ಸಂಘದ ಸರ್ವ ಸದಸ್ಯರು ಇದ್ದರು.