ಕಡೂರು: ತಾಲೂಕಿನ ಕಡೆ ಗ್ರಾಮವಾಗಿರುವ ಹೋಚಿಹಳ್ಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು: ತಾಲೂಕಿನ ಕಡೆ ಗ್ರಾಮವಾಗಿರುವ ಹೋಚಿಹಳ್ಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಭಾನುವಾರ ತಾಲೂಕಿನ ಹೋಚಿಹಳ್ಳಿ ಗ್ರಾಮದಲ್ಲಿ ಕೆಆರ್ ಐ ಡಿಎಲ್ ಸಂಸ್ಥೆಯಿಂದ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಗ್ರಾಮದ ಭಕ್ತರ ಬೇಡಿಕೆಯಂತೆ ಶ್ರೀ ಮೈಲಾರ ಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ₹15 ಲಕ್ಷ ಬಸ್ ನಿಲ್ದಾಣ ಕಾಮಗಾರಿಗೆ ₹10 ಲಕ್ಷ, ಗ್ರಾಮದ ಹಳೆಯ ಕಲ್ಯಾಣಿ ದುರಸ್ಥಿಗೆ ₹30 ಲಕ್ಷ, ಶ್ರೀ ಮಹಾತಂಗಮ್ಮ ದೇವಾಲಯ ಜೀರ್ಣೋದ್ದಾರಕ್ಕೆ ₹3 ಲಕ್ಷ, ಸಮುದಾಯಭವನಕ್ಕೆ ₹20 ಲಕ್ಷ ಮತ್ತು ಸಿ.ಸಿ. ರಸ್ತೆ ನಿರ್ಮಾಣಕ್ಕೆ ₹50 ಲಕ್ಷ ಅನುದಾನವನ್ನು ಈ ಗ್ರಾಮಕ್ಕೆ ನೀಡಿದ್ದೇನೆ ಎಂದರು.ಗ್ರಾಮೀಣ ಭಾಗಗಳ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ವ್ಯಾಪಾರ ಮತ್ತಿತರ ಚಟುವಟಿಕೆಗಳಿಗೆ ಪೂರಕವಾಗುತ್ತದೆ. ರೈತರಿಗೆ ಪ್ರತಿಯೊಂದು ಯೋಜನೆಗಳು ಉಪಯೋಗವಾಗಲಿದೆ ಎಂದರು. ಗ್ರಾಮದ ಮುಖಂಡ ಎಚ್.ಆರ್. ಭೋಗಪ್ಪ ಮಾತನಾಡಿ, ಶಾಸಕರು ಹೋಚಿಹಳ್ಳಿ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿ ಈ ಗ್ರಾಮವನ್ನು ಒಂದು ಮಾದರಿ ಗ್ರಾಮವಾಗಿ ಮಾಡಿರುವುದಕ್ಕೆ ಅಭಿನಂದಿಸುತ್ತೇವೆ ಎಂದರು.
ಕೆಆರ್ ಐಡಿಎಲ್ ಎಂಜಿನಿಯರ್,ವಿ.ಎನ್. ಅಶ್ವಿನಿ, ಗಿರೀಶ್ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಇದ್ದರು.30ಕೆಕೆಡಿಯು1.ಕಡೂರು ತಾಲೂಕು ಹೋಚಿಹಳ್ಳಿ ಗ್ರಾಮದ ವಿವಿಧ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು.