ಹಸಿರು ಬರ: ಆಳಂದ ರೈತರ ಬದುಕಿಗೆ ಗರ
KannadaprabhaNewsNetwork | Published : Oct 18 2023, 01:00 AM IST
ಹಸಿರು ಬರ: ಆಳಂದ ರೈತರ ಬದುಕಿಗೆ ಗರ
ಸಾರಾಂಶ
ಆಳಂದ ತಾಲೂಕಿನಲ್ಲಿ ಹಸಿರು ಬರಗಾಲ. ಒಟ್ಟು 1,33,590 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿಯಲ್ಲಿ 1,30,388 ಹೆಕ್ಟೇರ್ ಬಿತ್ತನೆ ನಡೆದಿದ್ದು ಈ ಪೈಕಿ 43,733 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ.
43,733 ಹೆಕ್ಟೇರ್ ಬೆಳೆ ಹಾನಿ, ಬೆಳೆ ಹಸಿರಾಗಿ ಕಂಡರೂ ಕಾಳುಕಟ್ಟಿಲ್ಲ ಕನ್ನಡಪ್ರಭ ವಾರ್ತೆ ಆಳಂದ ಆಳಂದ ತಾಲೂಕಿನಲ್ಲಿ ಹಸಿರು ಬರಗಾಲ. ಒಟ್ಟು 1,33,590 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿಯಲ್ಲಿ 1,30,388 ಹೆಕ್ಟೇರ್ ಬಿತ್ತನೆ ನಡೆದಿದ್ದು ಈ ಪೈಕಿ 43,733 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಈ ಬಾರಿ ಇದೇ ಮೊದಲು ಬಾರಿಗೆ ಹಸಿರು ಬರ ಆವರಿಸಿದೆ. ನೋಡಲು ಹೊಲದಲ್ಲಿ ಬೆಳೆ ಹಸಿರಾಗಿ ಕಾಣಿಸುತ್ತದೆ. ಬೆಳೆ ಉತ್ಪಾದನೆಗೆ ಪೂರಕವಾಗಿಲ್ಲ. ಇದನ್ನು ಹಸಿರು ಬರ ಎಂದು ಕರೆಯಲಾಗುತ್ತದೆ. ಮಳೆ ಇಲ್ಲದ್ದಕ್ಕೆ ಬೆಳೆ ಎತ್ತರ ಬೆಳೆಯದೇ, ಫಲ ಹಿಡಿದುಕೊಳ್ಳದೆ ನೆಲಕಚ್ಚಿಕೊಂಡಿದೆ. ಹೀಗಾಗಿ ಫಲ ಕೈಗೆ ಬುರವ ಗ್ಯಾರಂಟಿ ಇಲ್ಲ. ರೈತ ಸಮುದಾಯಕ್ಕೆ ಬೆಳೆ ಸಾಗುಮಾಡಲು ಆಗದೇ ಇತ್ತ ಇಟ್ಟುಕೊಳ್ಳಲು ಆಗದೆ, ಇದಕ್ಕೆಲ್ಲ ದುಬಾರಿ ಲಾಗೋಡಿ ಮಾಡುವ ಅನಿರ್ವಾಯತೆ ಅವರಿಗೆ ಎದುರಾಗಿದೆ. ಚಿಂತಾಜನ ಪರಿಸ್ಥಿತಿ: ಮುಂಗಾರಿನ ಜೂನ್ ಮತ್ತು ಜುಲೈ ತಿಂಗಳಲ್ಲಿ ಸಕಾಲಕ್ಕೆ ಮಳೆ ಬಾರದೆ, ಅನೇಕರು ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿ ಕೈಸುಟ್ಟುಕೊಂಡರೆ ಇನ್ನೂ ಸಾವಿರಾರು ರೈತರು ಬಳಿಕ ಬಿತ್ತನೆ ಮಾಡಿ ಕೈ ಸುಟ್ಟುಕೊಂಡಂತಾಗಿದೆ. ಆಳಂದ ವಲಯದಲ್ಲಿ ತೊಗರಿ 6,712 ಹೆಕ್ಟೇರ್, ಹೆಸರು 59 ಹೆಕ್ಟೇರ್, ಉದ್ದು 179 ಹೆಕ್ಟೇರ್, ಸೋಯಾ 2159 ಹೆಕ್ಟೇರ್, ಸೂರ್ಯಕಾಂತಿ 178 ಹೆಕ್ಟೇರ್ ಕಬ್ಬು 321 ಹೆಕ್ಟೇರ್‍ಸೇರಿ ಒಟ್ಟು 9608 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಖಜೂರಿ ವಲಯದಲ್ಲಿ ತೊಗರಿ 5,724 ಹೆಕ್ಟೇರ್, ಹೆಸರು 52 ಹೆಕ್ಟೇರ್, ಉದ್ದು 93 ಹೆಕ್ಟೇರ್, ಸೋಯಾ 3852 ಹೆಕ್ಟೇರ್, ಸೂರ್ಯಕಾಂತಿ 5 ಹೆಕ್ಟೇರ್, ಕಬ್ಬು 257 ಹೆಕ್ಟೇರ್ ಹಾನಿ ಸೇರಿ ಒಟ್ಟು 9983 ಹೆಕ್ಟೇರ್ ಬೆಳೆ ನಷ್ಟ ಸಂಭವಿಸಿದೆ. ಮಾದನಹಿಪ್ಪರಗಾ ವಲಯದಲ್ಲಿ ತೊಗರಿ 6,009 ಹೆಕ್ಟೇರ್, ಹೆಸರು 27 ಹೆಕ್ಟೇರ್, ಉದ್ದು 49 ಹೆಕ್ಟೇರ್, ಸೋಯಾ 1,539 ಹೆಕ್ಟೇರ್, ಸೂರ್ಯಕಾಂತಿ 85 ಹೆಕ್ಟೇರ್, ಕಬ್ಬು 326 ಹೆಕ್ಟೇರ್ ಸೇರಿ 8,035 ಹೆಕ್ಟೇರ್ ಪ್ರದೇಶ ಬೆಳೆ ಹಾನಿ ಸಂಭವಿಸಿದೆ. ನರೋಣಾ ವಲಯದಲ್ಲಿ ತೊಗರಿ 4,136 ಹೆಕ್ಟೇರ್, ಹೆಸರು 18 ಹೆಕ್ಟೇರ್, ಉದ್ದು 46 ಹೆಕ್ಟೇರ್, ಸೋಯಾ 1303 ಹೆಕ್ಟೇರ್, ಸೂರ್ಯಕಾಂತಿ 15 ಹೆಕ್ಟೇರ್, ಕಬ್ಬು 184 ಹೆಕ್ಟೇರ್ ಸೇರಿ ಒಟ್ಟು 5702 ಹೆಕ್ಟೇರ್ ಬೆಳೆ ಹಾನಿ. ನಿಂಬರಗಾ ವಲಯದಲ್ಲಿ ತೊಗರಿ 5,944 ಹೆಕ್ಟೇರ್, ಹೆಸರು 23 ಹೆಕ್ಟೇರ್, ಉದ್ದು 57 ಹೆಕ್ಟೇರ್, ಸೋಯಾ 1579 ಹೆಕ್ಟೇರ್, ಸೂರ್ಯಕಾಂತಿ 115 ಹೆಕ್ಟೇರ್, ಕಬ್ಬು 2,687 ಹೆಕ್ಟೇರ ಸೇರಿ 10405 ಹೆಕ್ಟೇರ್ ಹಾನಿಯಾಗಿದೆ. ಕೋಟ್... ತಾಲೂಕಿನಲ್ಲಿ ಹಸಿರು ಬರ ಆವರಿಸಿದೆ. ತೊಗರಿ, ಹೆಸರು, ಉದ್ದು, ಸೂಯಾಬಿನ್, ಸೂರ್ಯಕಾಂತಿ ಮತ್ತು ಕಬ್ಬು ಸೇರಿ ಒಟ್ಟು 43,733 ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಕುರಿತು ತಾಲೂಕು ಆಡಳಿತ ಮೂಲಕ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಪ್ರತ್ಯೇಕ ರೈತರ ಬೆಳೆಹಾನಿಯಾದ ಕುರಿತು ಸಮೀಕ್ಷೆ ಕೈಗೊಂಡು ವರದಿ ನೀಡಲಾಗಿದೆ. - ಶರಣಗೌಡ ಪಾಟೀಲ ಸಹಾಯಕ ಕೃಷಿ ನಿರ್ದೇಶಕರು ಆಳಂದ