ಭದ್ರಾವತಿ : ಗೃಹ ಲಕ್ಷ್ಮೀ ಹಣದಿಂದ ಅಂಗಡಿಯನ್ನು ತೆರೆದು ಇತರರಿಗೆ ಪ್ರೇರಣೆಯಾದ ಮಹಿಳೆ

| Published : Dec 24 2024, 12:49 AM IST / Updated: Dec 24 2024, 12:06 PM IST

ಭದ್ರಾವತಿ : ಗೃಹ ಲಕ್ಷ್ಮೀ ಹಣದಿಂದ ಅಂಗಡಿಯನ್ನು ತೆರೆದು ಇತರರಿಗೆ ಪ್ರೇರಣೆಯಾದ ಮಹಿಳೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ತಾ. ಯಡೇಹಳ್ಳಿ ಖುರ್ಷಿದ್ ಗೃಹ ಲಕ್ಷ್ಮೀ ಹಣದಿಂದ ಅಂಗಡಿಯನ್ನು ತೆರೆದು ಇತರರಿಗೆ ಪ್ರೇರಣೆಯಾಗಿದ್ದಾರೆ.14 ವರ್ಷಗಳ ಹಿಂದೆ ತನ್ನ ಒಬ್ಬನೇ ಮಗನನ್ನು ಮತ್ತು12 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಹೊಳೆಹೊನ್ನೂರು: ಭದ್ರಾವತಿ ತಾ. ಯಡೇಹಳ್ಳಿ ಖುರ್ಷಿದ್ ಗೃಹ ಲಕ್ಷ್ಮೀ ಹಣದಿಂದ ಅಂಗಡಿಯನ್ನು ತೆರೆದು ಇತರರಿಗೆ ಪ್ರೇರಣೆಯಾಗಿದ್ದಾರೆ.14 ವರ್ಷಗಳ ಹಿಂದೆ ತನ್ನ ಒಬ್ಬನೇ ಮಗನನ್ನು ಮತ್ತು12 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. 

ಇಂತಹ ಮಹಿಳೆ ಗೃಹಲಕ್ಷ್ಮಿಯ ಪ್ರತಿ ತಿಂಗಳ ಎರಡು ಸಾವಿರ ರು. ಕೂಡಿಟ್ಟು ಅಂಗಡಿಯನ್ನು ತೆರೆದು ಬದುಕು ಸಾಗಿಸಲು ಮುಂದಾಗಿದ್ದಾರೆ. ಅಂಗಡಿ ಉದ್ಘಾಟನೆ ನೆರವೇರಿಸಿದ ಖುರ್ಷಿದ್‌ ಗೆ ಎಲ್ಲರೂ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಮನು, ಗ್ರಾಪಂ ಸದಸ್ಯ ಮಹಮದ್ ಅಲಿ, ಎಸ್.ಎಂ.ಹಾಲೇಶಪ್ಪ, ನಾಗರಾಜ್ ಗೌಡ, ಪಿ.ಎನ್.ಜಗದೀಶ್, ಸಾಹಿಲ್, ಇಮ್ರಾನ್, ಆದಿಲ್, ಬಾಷಾ ಇದ್ದರು.