ಸಾರಾಂಶ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಗೃಹಲಕ್ಷ್ಮೀ, ಅನ್ನಭಾಗ್ಯ ಶಿಬಿರಕ್ಕೆ ಹಣ ಬಾರದ ಸಾವಿರಾರು ಮಹಿಳೆಯರು ಮುಗಿ ಬಿದ್ದು ಸಮಸ್ಯೆ ಪರಿಹಾರಕ್ಕಾಗಿ ಜಮಾಯಿಸಿದ್ದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಗೃಹಲಕ್ಷ್ಮೀ,ಅನ್ನಭಾಗ್ಯ ಶಿಬಿರಕ್ಕೆ ಹಣ ಬಾರದ ಸಾವಿರಾರು ಮಹಿಳೆಯರು ಮುಗಿ ಬಿದ್ದು ಸಮಸ್ಯೆ ಪರಿಹಾರಕ್ಕಾಗಿ ಜಮಾಯಿಸಿದ್ದರು.ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಸರ್ಕಾರದ ಹಣ ಬಂದಿರಲಿಲ್ಲ.ಅನ್ನಭಾಗ್ಯ ಯೋಜನೆಯಲ್ಲಿಅಕ್ಕಿಯ ಬದಲಿಗೆ ನೀಡುವ ಹಣ ಕೂಡ ಬಾರದ ಕಾರಣ ಮಹಿಳೆಯರು ಕಚೇರಿಗೆ ಅಲೆಯುತ್ತಿದ್ದರು.
ಇದನ್ನು ಮನಗಂಡ ಜಿಲ್ಲಾಡಳಿತ ಮಹಿಳೆಯರ ಗೃಹಲಕ್ಷ್ಮೀ,ಅನ್ನಭಾಗ್ಯದ ಸಮಸ್ಯೆ ಬಗೆಹರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಹಾರ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಡೆದ ಶಿಬಿರದಲ್ಲಿ ಸಾವಿರಾರು ಮಹಿಳೆಯರು ಆಗಮಿಸಿ ಬಹುತೇಕರ ಸಮಸ್ಯೆ ಸ್ಥಳದಲ್ಲೇ ಬಗೆಹರಿದಿದೆ.ಇ ಕೆವೈಸಿ, ಅಪ್ಡೆಟ್ ಬ್ಯಾಂಕ್ ಖಾತೆ ತೆರೆಯುವುದು, ಆಧಾರ್ ಜೋಡಣೆ,ಎನ್‌ಪಿಸಿಐ ಮ್ಯಾಪಿಂಗ್, ಯೋಜನೆ ಆರಂಭದಲ್ಲಿ ಬಂದ ಹಣ ನಂತರ ಬರದಿದ್ದ ಸಮಸ್ಯೆ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗೆ ಪರಿಹಾರ ಈ ಶಿಬಿರದಲ್ಲಿ ಸಿಕ್ಕಿದೆ.
ತಾಲೂಕಿನ ೧೭೮೩ ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಹಣ ಬಾರದ ಹಿನ್ನಲೆ ಶಿಬಿರದಲ್ಲಿ ಇಕೆವೈಸಿ, ಬ್ಯಾಂಕ್ ಖಾತೆ ಸಮಸ್ಯೆ, ಫಿಂಗರ್ ಸಮಸ್ಯೆಗಳಿಗೆ ಮುಕ್ತಿ ದೊರೆತಿದೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ರಮೇಶ್ ತಿಳಿಸಿದ್ದಾರೆ.ತುಂಬಿ ತುಳುಕಿದ ಭವನ
ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಗುರುವಾರ ಬೆಳಗ್ಗೆಯಿಂದಲೇ ಸಾವಿರಾರು ಮಹಿಳೆಯರು ಬಂದ ಕಾರಣ ಭವನದ ತುಂಬೆಲ್ಲ ಮಹಿಳೆಯರು ತುಂಬಿ ತುಳುಕಾಡುವ ದೃಶ್ಯ ಕಂಡು ಬಂತು.ಅರ್ಜಿ ಸ್ವೀಕಾರ
ಮಾತೃ ವಂದನಾ ಯೋಜನೆಯ ಫಲಾನುಭವಿಗಳಿಂದಲೂ ಇದೇ ಶಿಬಿರದಲ್ಲಿ ಅರ್ಜಿ ಸ್ವೀಕರಿಸಿ ಪರಿಶೀಲನೆ ಕೂಡ ನಡೆಯಿತು.ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಯೋಗಾನಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಹೇಮಾವತಿ ಸೇರಿದಂತೆ ಪೊಲೀಸರು ಹಾಗೂ ಪಡಿತರ ವಿತರಕರು ಇದ್ದರು.
;Resize=(128,128))
;Resize=(128,128))
;Resize=(128,128))