ಸಾರಾಂಶ
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಶೀಘ್ರದಲ್ಲೇ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿ ಯಾರಾದರೂ ನಿಲ್ಲಲಿ, ಗೆಲ್ಲಿಸುವುದಕ್ಕೆ ಗಮನಕೊಡಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕಾರ್ಯಕರ್ತರಿಗೆ ಸಲಹೆ ನೀಡಿದರು.ತಾಲೂಕಿನ ಹೊಸಪುರ ಗ್ರಾಮದಲ್ಲಿ ₹೨೦ ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪಕ್ಷ ಬೇಧ ಮರೆತು ಗೆಲ್ಲಿಸಿಕೊಟ್ಟರೆ ನನಗೂ ಶಕ್ತಿ ಬರಲಿದೆ. ಆಗ ಸರ್ಕಾರದ ಜೊತೆ ಹೋರಾಟ ಮಾಡಿ ಅನುದಾನ ತರಲು ಸಾಧ್ಯವಾಗುತ್ತದೆ. ಕ್ಷೇತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಮಂಜೂರಾತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಆಪ್ತ ಕೆ.ಗೋಪಾಲ ಹೊರೆಯಾಲ ಶ್ರಮವಹಿಸಿದ್ದಾರೆ ಎಂದರು.
ಕಳೆದ ಎರಡು ವರ್ಷಗಳಿಂದ ವಾಲ್ಮೀಕಿ, ಕನಕ, ಭಗೀರಥ, ಕುಂಬಾರ ಭವನಗಳಿಗೆ ಅನುದಾನ ನೀಡಲು ಆಗಿಲ್ಲ. ಈಗ ಸಿಎಂ ವಿಶೇಷ ಅನುದಾನದಲ್ಲಿ ₹೧೦ ಕೋಟಿ ಅನುದಾನ ಮೀಸಲಿಡುವೆ ಎಂದರು.ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಲೀಲಾವತಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಸಚಿವ ಡಾ.ಎಚ್.ಸಿ.ಮಹದೇವಪ್ಪರ ಆಪ್ತ ಕೆ.ಗೋಪಾಲಹೊರೆಯಾಲ, ಜಿಪಂ ಮಾಜಿ ಸದಸ್ಯ ಕೆ.ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮಾಜಿ ಉಪಾಧ್ಯಕ್ಷರಾದ ಬಂಗಾರನಾಯಕ, ಹೊರೆಯಾಲ ಕೃಷ್ಣ, ಮಾಜಿ ಸದಸ್ಯ ನೀಲಕಂಠಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಮಹೇಶ್ ಚಿಕ್ಕಾಟಿ, ಸದಸ್ಯ ಹೊಸಪುರ ಸಿದ್ದರಾಜು, ನಾಗಮ್ಮ, ಕೋಟೆಕೆರೆ ಪ್ಯಾಕ್ಸ್ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಮುಖಂಡರಾದ ಶಿವರುದ್ರಪ್ಪಚಾರ್, ಬಸಪ್ಪಚಾರ್, ಯಡವನಹಳ್ಳಿ ಕೃಷ್ಣ ಹಲವರಿದ್ದರು.