ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ(ಕೆಪಿಎಸ್) ಆವರಣದಲ್ಲಿ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ 1.70 ಕೋಟಿ ರು. ವೆಚ್ಚದ ನೂತನ ಹೆಚ್ಚುವರಿ ಕೊಠಡಿಗಳ ಕಟ್ಟಡ ಕಾಮಗಾರಿಗೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲುಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ(ಕೆಪಿಎಸ್) ಆವರಣದಲ್ಲಿ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ 1.70 ಕೋಟಿ ರು. ವೆಚ್ಚದ ನೂತನ ಹೆಚ್ಚುವರಿ ಕೊಠಡಿಗಳ ಕಟ್ಟಡ ಕಾಮಗಾರಿಗೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಶಾಸಕರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹೊತ್ತು ನೀಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಅಗತ್ಯ ಅನುದಾನ ಒದಗಿಸಲಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಮೂಲಕ ಒಟ್ಟು 1.70
ಕೋಟಿ ರು. ವೆಚ್ಚದಲ್ಲಿ 780 ಚದರ ಮೀಟರ್ (ನೆಲಮಹಡಿ 390 ಚದರ ಮೀಟರ್ ಹಾಗೂ ಮೊದಲ ಮಹಡಿ 390 ಚದರ ಮೀಟರ್) ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದರು.ದ್ವಿಮಹಡಿಯ ಈ ನೂತನ ಕಟ್ಟಡದಲ್ಲಿ 4 ತರಗತಿ ಕೊಠಡಿಗಳು. 2 ಸುಸಜ್ಜಿತ ಪ್ರಯೋಗಾಲಯಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಒಳಗೊಂಡಿರಲಿದೆ ಎಂದರು.ಪ್ರಾಂಶುಪಾಲ ಎ.ಎಂ. ವಿಶಾಲ ಕುಶಾಲಪ್ಪ ಮಾತನಾಡಿ, ವರ್ಷಗಳಿಂದ ಬಾಕಿಯಿದ್ದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಕೊನೆಗೂ ಕಾಮಗಾರಿಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ೨೦೧೮-೧೯ನೇ ಸಾಲಿನಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿತ್ತು. ಆದರೆ ವಿವಿಧ ಕಾರಣಗಳಿಂದ ಈ ಕಾಮಗಾರಿ ವಿಳಂಬವಾಗುತ್ತಾ ಬಂದಿತ್ತು. ಇದೀಗ ಎಲ್ಲ ಅಡೆತಡೆಗಳು
ನಿವಾರಣೆಯಾಗಿದ್ದು, ಕಾಮಗಾರಿ ಆರಂಭಗೊಂಡಿದೆ ಎಂದರು.ಹರೀಶ್ ಭಟ್ ಪೂಜಾ ವಿಧಿ ನೆರವೇರಿಸಿದರುಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ನೂರಂಬಾಡ ಉದಯ ಶಂಕರ್, ಸದಸ್ಯರಾದ ಕೇಟೋಳಿರ ರಾಜ ಗಣಪತಿ, ಉಸ್ಮಾನ್, ಮೊಯ್ಯು, ಆಸೀನಾ, ಉಪ ಪ್ರಾಂಶುಪಾಲ ಶಿವಣ್ಣ ಎನ್.ಎಸ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಮಾಜಿ ಸದಸ್ಯ ಮಾಚೇಟಿರ ಕುಶು ಕುಶಾಲಪ್ಪ, ಎಂ ಎಚ್ ಅಬ್ದುಲ್ ರೆಹಮಾನ್ , ಕುಲ್ಲೇಟಿರ ಅರುಣ್ ಬೇಬಾ, ಹ್ಯಾರಿಸ್ ಕೊಳಕೇರಿ, ಶೌಕತ್ ಅಲಿ, ಕಲಿಯಂದ ಸಂಪನ್ ಅಯ್ಯಪ್ಪ, ಹಾಗೂ ಬಾಚಮಂಡ ಲವ ಚಿಣ್ಣಪ್ಪ, ಬಿದ್ಧಾಟಂದ ತಮ್ಮಯ್ಯ, ಅಪ್ರು ರವೀಂದ್ರ, ಅರಾಫಾತ್, ಸಿರಾಜ್, ವಾಸಿಂ . ಲೋಕೋಪಯೋಗಿ ಇಲಾಖೆಯ ಅಭಿಯಂತರ ಗಿರೀಶ್, ನಾಪೋಕ್ಲು ಗ್ರಾಮ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಮತ್ತಿತರರಿದ್ದರು.