ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ

| Published : Feb 08 2024, 01:30 AM IST

ಸಾರಾಂಶ

ದಾಬಸ್‌ಪೇಟೆ: ಕೆರೆ-ಕಟ್ಟೆಗಳಲ್ಲಿ ತುಂಬಿರುವ ಹೂಳೆತ್ತುವುದರಿಂದ ಹೆಚ್ಚಿನ ನೀರು ಸಂಗ್ರಹವಾಗುತ್ತದೆ ಹಾಗೂ ಅಂತರ್ಜಲ ವೃದ್ಧಿಯಾಗುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ಮಳೆ ನೀರು ಇಂಗಿಸುವ ಕಾರ್ಯ ಮಾಡಬೇಕು ಎಂದು ಎಸ್.ಎಂ ಸೆಹೆಗಲ್ ಫೌಂಡೇಶನ್‌ ಮುಖ್ಯಸ್ಥ ಶೃಚಿಸಿಂಗ್ ತಿಳಿಸಿದರು.

ದಾಬಸ್‌ಪೇಟೆ: ಕೆರೆ-ಕಟ್ಟೆಗಳಲ್ಲಿ ತುಂಬಿರುವ ಹೂಳೆತ್ತುವುದರಿಂದ ಹೆಚ್ಚಿನ ನೀರು ಸಂಗ್ರಹವಾಗುತ್ತದೆ ಹಾಗೂ ಅಂತರ್ಜಲ ವೃದ್ಧಿಯಾಗುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ಮಳೆ ನೀರು ಇಂಗಿಸುವ ಕಾರ್ಯ ಮಾಡಬೇಕು ಎಂದು ಎಸ್.ಎಂ ಸೆಹೆಗಲ್ ಫೌಂಡೇಶನ್‌ ಮುಖ್ಯಸ್ಥ ಶೃಚಿಸಿಂಗ್ ತಿಳಿಸಿದರು. ತ್ಯಾಮಗೊಂಡ್ಲು ಹೋಬಳಿಯ ಹತ್ತುಕ್ಕುಂಟೆಪಾಳ್ಯದ ಗೋಮಾಳದಲ್ಲಿರುವ ಗೋಕಟ್ಟೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂತರ್ಜಲ ಅಭಿವೃದ್ಧಿ ಪಡಿಸುವುದು ಮತ್ತು ಪ್ರಾಣಿ ಪಕ್ಷಗಳಿಗೆ ನೀರು ದೊರಕುವಂತೆ ಮಾಡುವ ಉದ್ದೇಶದಿಂದ ಕೆರೆಗಳ ಪುನಶ್ಚೇತನ ಮಾಡುತ್ತಿದ್ದೇವೆ. ಇದಕ್ಕೆ ಸಮುದಾಯದ ಸಹಭಾಗಿತ್ವವೂ ಮುಖ್ಯ. ನಿಮ್ಮ ಸಹಕಾರ ಇದ್ದರೆ ಮಾತ್ರ ಯೋಜನೆ ಸಾಕಾರವಾಗುತ್ತದೆ ಎಂದರು. ದೇಶದ 54 ಜಿಲ್ಲೆಗಳಲ್ಲಿನ 2000 ಹಳ್ಳಿಗಳ ಸಮುದಾಯದೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದೆ. ಪ್ರಸ್ತುತ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕೆರೆಗಳ ಪುನರುಜ್ಜೀವನ, ರೈತರಿಗೆ ರೈತ ಕಂಪನಿಗಳಿಗೆ ಉತ್ತೇಜನ, ಶಾಲೆಗಳ ಅಭಿವೃದ್ಧಿ ಮಾಡುತ್ತಿದೆ ಎಂದರು. ಸ್ಥಳೀಯ ಸಂಯೋಜನಾಧಿಕಾರಿ ರಾಮು ಜೋಗಿಹಳ್ಳಿ, ಗ್ರಾಪಂ ಅಧ್ಯಕ್ಷ ಅಂಜನಮೂರ್ತಿ, ಸದಸ್ಯರಾದ ಯಶೋದಮ್ಮ ರಮೇಶ್, ಸೆಹಗಲ್ ಫೌಂಡೇಶನ್‌ನ ಸಿವಿಲ್ ಇಂಜಿನಿಯರ್ ಸುನಿಲ್, ಗುತ್ತಿಗೆದಾರ ವೇಣು ಇತರರಿದ್ದರು.

ಪೋಟೋ 1 :

ತ್ಯಾಮಗೊಂಡ್ಲು ಹೋಬಳಿಯ ಹತ್ತುಕ್ಕುಂಟೆಪಾಳ್ಯದ ಗೋಕಟ್ಟೆ ಹೂಳೆತ್ತುವ ಕಾಮಗಾರಿಗೆ ಸೆಹೆಗಲ್ ಫೌಂಡೇಶನ್‌ ಮುಖ್ಯಸ್ಥ ಶೃಚಿಸಿಂಗ್‌ ಚಾಲನೆ ನೀಡಿದರು. ಸಂಯೋಜನಾಧಿಕಾರಿ ರಾಮು ಜೋಗಿಹಳ್ಳಿ, ಗ್ರಾಪಂ ಅಧ್ಯಕ್ಷ ಅಂಜನಮೂರ್ತಿ, ಸದಸ್ಯರಾದ ಯಶೋದಮ್ಮ ರಮೇಶ್, ಸೆಹಗಲ್ ಫೌಂಡೇಶನ್‌ನ ಸುನಿಲ್, ಗುತ್ತಿಗೆದಾರ ವೇಣು ಇತರರಿದ್ದರು.