ಕೆರೆ ತುಂಬುವುದರಿಂದ ಅಂತರ್ಜಲ ವೃದ್ಧಿ

| Published : Aug 17 2025, 02:55 AM IST

ಸಾರಾಂಶ

ಕೆರೆ-ಕಟ್ಟೆ ತುಂಬುವುದರಿಂದ ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಅಂತರ್ಜಲ ಮಟ್ಟ ಸುಧಾರಣೆಗೊಂಡು ರೈತರ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಲಿದೆ.

ಯಲಬುರ್ಗಾ:

ಕೆರೆ ತುಂಬಿಸುವ ಯೋಜನೆಯಡಿ ಮತ್ತು ಮಳೆಯಿಂದಾಗಿ ಪಟ್ಟಣದ ಕೆಂಪು ಕೆರೆ ಭರ್ತಿ ಆಗಿರುವುದು ಅಂತರ್ಜಲ ಮಟ್ಟ ಸುಧಾರಣೆಗೆ ವರದಾನವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕೆಂಪು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಸಮರ್ಪಿಸಿದ ಮಾತನಾಡಿದ ಅವರು, ಕೆರೆ-ಕಟ್ಟೆ ತುಂಬುವುದರಿಂದ ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಅಂತರ್ಜಲ ಮಟ್ಟ ಸುಧಾರಣೆಗೊಂಡು ರೈತರ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಲಿದೆ. ಇದರಿಂದ ರೈತರ ಬದುಕು ಹಸನಾಗಲಿದೆ. ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆಯ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಡಿ ಕ್ಷೇತ್ರದ ೨೬ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಹೊಸದಾಗಿ ೩೩ ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಈ ವೇಳೆ ಕೆಬಿಜೆಎನ್‌ಎಲ್ ಎಇಇ ಚನ್ನಪ್ಪ, ಪಿಡಬ್ಲ್ಯೂಡಿ ಎಇಇ ಮಲ್ಲಿಕಾರ್ಜುನ, ಪಪಂ ಮುಖ್ಯಾಧಿಕಾರಿ ನಾಗೇಶ, ಪ್ರಮುಖರಾದ ಆನಂದ ಉಳ್ಳಾಗಡ್ಡಿ, ಮಹೇಶ ಹಳ್ಳಿ, ಮಲ್ಲೇಶಗೌಡ ಮಾಲಿಪಾಟೀಲ್, ಮಲ್ಲಿಕಾರ್ಜುನ ಜಕ್ಕಲಿ, ಡಾ. ನಂದಿತಾ ದಾನರಡ್ಡಿ, ಸಾವಿತ್ರಿ ಗೊಲ್ಲರ, ಜ್ಯೋತಿ ಪಲ್ಲೇದ, ಶರಣಮ್ಮ ಪೂಜಾರ, ಈಶ್ವರ ಅಟಮಾಳಗಿ, ಶರಣಗೌಡ ಬಸಾಪುರ, ಪುನೀತ ಕೊಪ್ಪಳ, ಪಪಂ ಸಿಬ್ಬಂದಿ ರಮೇಶ ಬೇಲೇರಿ, ಎಂಜಿನಿಯರ್ ಉಮೇಶ ಬೇಲಿ, ಸುಮಾ ಸೇರಿದಂತೆ ಮತ್ತಿತರರು ಇದ್ದರು.