ಇಂದು ಕುಟುಂಬಗಳು ಛಿದ್ರವಾದ ಪರಿಣಾಮ ಮಕ್ಕಳಿಗೆ ಮೊಬೈಲ್ ಸಂಗಾತಿಯಾಗಿದೆ. ಆರೋಗ್ಯಕ್ಕೆ ಮಹಾ ಪ್ರಸಾದವಾಗಿದ್ದ ಹಣ್ಣು ಹಂಪಲಗಳು ಮರೆತಾಗಿದೆ. ಈ ಸ್ಥಳವನ್ನು ಬೇಕರಿ ತಿನಿಸು ಆಕ್ರಮಿಸಿ ಭವಿಷ್ಯ, ಆರೋಗ್ಯ ಕಿತ್ತುಕೊಂಡಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಕ್ಕಳಿಗೆ ಅಕ್ಷರ ಸಂಸ್ಕೃತಿ ಜೊತೆಗೆ ಪರಿಸರ ಉಳಿಸುವ ಸಂಸ್ಕೃತಿ ಬೀಜ ಬಿತ್ತಲು ಮನೆಗೊಂದು ಮರ ಬೆಳೆಸುವ ಸಂಕ್ಪಲ ಮಾಡಬೇಕು ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಮಾದಾಪುರ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಸ್ಪಂದನಾ ಫೌಂಡೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ ‘ಗಿಡ ನೆಡಿ, ಆರೋಗ್ಯವಂತರಾಗಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಗಾಡಿನಲ್ಲಿ ಬೆಳೆದ ತನಗೆ ಮರಗಿಡಗಳೇ ಸಂಗೀತ ಕೇಳುವ ಪ್ರೇಕ್ಷಕರಾಗಿತ್ತು. ನಮ್ಮ ಹಿರಿಕರು ಮರ-ಗಿಡಗಳನ್ನು ಪೂಜಿಸಿ ಆರಾಧಿಸುತ್ತಿದ್ದರು. ಕೂಡು ಕುಟುಂಬಗಳಿಂದ ನೆಮ್ಮದಿ ಕಂಡಿದ್ದರು. ಗಿಡ ಮರಗಳ ನಡುವೆ ಬಹುತೇಕ ಬದುಕಿತ್ತು ಎಂದರು.

ಇಂದು ಕುಟುಂಬಗಳು ಛಿದ್ರವಾದ ಪರಿಣಾಮ ಮಕ್ಕಳಿಗೆ ಮೊಬೈಲ್ ಸಂಗಾತಿಯಾಗಿದೆ. ಆರೋಗ್ಯಕ್ಕೆ ಮಹಾಪ್ರಸಾದವಾಗಿದ್ದ ಹಣ್ಣು ಹಂಪಲಗಳು ಮರೆತಾಗಿದೆ. ಈ ಸ್ಥಳವನ್ನು ಬೇಕರಿ ತಿನಿಸು ಆಕ್ರಮಿಸಿ ಭವಿಷ್ಯ, ಆರೋಗ್ಯ ಕಿತ್ತುಕೊಂಡಿದೆ. ಇನ್ನಾದರೂ ಎಚ್ಚೆತ್ತು ಮರ-ಗಿಡ ಬೆಳೆಸಿ ಹಣ್ಣು ಹಂಪಲ ಪ್ರಾಣಿ ಪಕ್ಷಿಗಳ ಬದುಕಿಗೆ ಎಂಬುದನ್ನು ಮರೆತರೆ ಮನುಕುಲ ಪರಿಸರ ಸರ್ವನಾಶವಾಗಲಿದೆ ಎಂದು ಎಚ್ಚರಿಸಿದರು.

ಪ್ರಾಂಶುಪಾಲೆ ಶಾಂತಿ ಮಾತನಾಡಿ, ನಮಗೆ ಮಕ್ಕಳಂತೆ ಮರಗಿಡಗಳಾಗಿವೆ. ಇರುವಷ್ಟು ಜೀವಿತಾವಧಿಯಲ್ಲಿ ನಾವು ಸಮಾಜಕ್ಕೆ ನೀಡುವಕೊಡುಗೆ ಮರಗಿಡ ಪೋಷಣೆ ಎಂದು ನುಡಿದರು.

ಗಾಯಕ, ಶಿಕ್ಷಕ-ವಿದ್ಯಾರ್ಥಿ ಸಮೂಹ ಪರಿಸರ ಉಳಿಸುವ ಸಂಕಲ್ಪದ ಪ್ರತಿಜ್ಞೆ ಮಾಡಿಗಿಡಕ್ಕೆ ನೀರೆರೆದರು. ಪ್ರಕೃತಿ ಕುರಿತಾದ ಪರಿಸರ ಗೀತೆಗಳನ್ನು ಹಾಡಿ ವೃಕ್ಷದೇವತೆಗೆ ನಮಿಸಿದರು. ಪರಿಸರ ಪ್ರೇಮಿ ವೆಂಕಟೇಶ್, ವಕೀಲ ರಾಜೇಶ್, ಸಾಮಾಜಿಕ ಕಾರ್ಯಕರ್ತ ಮಾದಾಪುರ ಸುಬ್ಬಣ್ಣ, ಮಂಗಳಾ, ಜ್ಯೋತಿ, ಕಲಾವಿದರಾದ ಅಭಿಷೇಕ್, ಕೆ.ವಿ. ಬಲರಾಮು, ಪ್ರಾಂಶುಪಾಲೆ ಶಾಂತಿ, ಮುಖ್ಯಶಿಕ್ಷಕರಾದ ದೇವರಾಜು, ಜ್ಯೋತಿ, ಶಿಕ್ಷಕರಾದ ಪ್ರಕಾಶ್, ರಾಘವೇಂದ್ರ, ಜಗದೀಶ್, ಮಂಗಳಾ, ಲೀಲಾವತಿ, ಸೌಮ್ಯ, ವೀಣಾ, ಜಯಲಕ್ಷ್ಮೀ, ಪಲ್ಲವಿ, ಭೂಮಿಕಾ ಇದ್ದರು.