ಸಾರಾಂಶ
ನಾವುಗಳು ಪರಿಸರ ಕಾಳಜಿಯನ್ನು ಮರೆತಿದ್ದೇವೆ, ಮುಂದಿನ ಭವಿಷ್ಯ ರೂಪಿಸುವ ಮಕ್ಕಳ ಕೈಯಿಂದ ಸಸಿ ಬೆಳಸುವ ಕಾರ್ಯದ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆ ಪಡುವ ವಿಚಾರ, ಮಕ್ಕಳ ಜೊತೆಗೆ ಪೋಷಕರು ಸಸಿಗಳನ್ನು ಬೆಳೆಸಿ ಪೋಷಿಸುವಂತಾಗಲಿ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಕರೆ ನೀಡಿದರು.
ಶಿರಾಳಕೊಪ್ಪ: ನಾವುಗಳು ಪರಿಸರ ಕಾಳಜಿಯನ್ನು ಮರೆತಿದ್ದೇವೆ, ಮುಂದಿನ ಭವಿಷ್ಯ ರೂಪಿಸುವ ಮಕ್ಕಳ ಕೈಯಿಂದ ಸಸಿ ಬೆಳಸುವ ಕಾರ್ಯದ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆ ಪಡುವ ವಿಚಾರ, ಮಕ್ಕಳ ಜೊತೆಗೆ ಪೋಷಕರು ಸಸಿಗಳನ್ನು ಬೆಳೆಸಿ ಪೋಷಿಸುವಂತಾಗಲಿ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಕರೆ ನೀಡಿದರು.
ಬಿಳಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾವು ಮತ್ತು ತೆಂಗು ಕೃಷಿ ಅಭಿವೃದ್ಧಿ ಸಂಘದಿಂದ ನಡೆದ ಶಾಲಾ ಮಕ್ಕಳಿಗೆ ಮಾವಿನ ಸಸಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು, ರೈತರಿದ್ದರೆ ನಾವು ಎಂಬುದನ್ನು ಮರೆಯಬಾರದು. ಪ್ರಕೃತಿಯ ಮುನಿಸಿನಿಂದ ಈ ಬಾರಿ ರೈತರು ಪರದಾಡುವಂತಾಗಿದೆ. ನಾಡಿಗೆ ಒಂದು ತುತ್ತು ಅನ್ನಕೊಡುವ ರೈತನನ್ನು ನೆನೆಯಬೇಕುಎಂಬ ಕಾರಣಕ್ಕೆ ಉಳವ ಯೋಗಿಯ ನೋಡಲ್ಲಿ ಎಂಬ ರೈತ ಗೀತೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಬಳಸಬೇಕು ಎಂದು ಯಡಿಯೂರಪ್ಪಪನವರು ಮುಖ್ಯಮಂತ್ರಿಯಾಗಿದ್ದಾಗ ಆದೇಶ ಮಾಡಿದ್ದರು ಎಂದು ತಿಳಿಸಿದರು.ಪೋಷಕರು ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಬೇಡಿ, ಶಿಕ್ಷಣದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ. ಶಿಕ್ಷಣ ಪಡೆಯಲು ಬೇಕಾದ ಶಾಲಾ ಕಾಲೇಜಿನ ವ್ಯವಸ್ಥೆ ನಮ್ಮ ತಾಲೂಕಿನಲ್ಲಿದೆ ಎಂಬುದನ್ನು ನಾವು ಮರೆಯಬಾರದು ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಮಾವು ಮತ್ತು ತೆಂಗು ಅಭಿವೃದ್ಧಿ ಬೆಳಗಾರರ ಸಂಘದ ನಿರ್ದೇಶಕ ಪರಮೇಶ್ವರಪ್ಪ ಅಡಗಂಟಿ, ಮಲೆನಾಡು ಅಭಿವೃದ್ಧಿ ಪ್ರದೇಶದ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಗ್ರಾಪಂ ಅಧ್ಯಕ್ಷ ಶಿವ್ಯಾನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಮುರಗೇಂದ್ರ, ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಾಗರಾಜ ಸ್ವಾಮಿ ಮತ್ತಿತರರಿದ್ದರು.