ಸಾರಾಂಶ
grow greenery in hyriyur
ಹಿರಿಯೂರು: ಗಿಡ ನೆಡುವುದು ಸರ್ಕಾರ ಮತ್ತು ಸಂಘ ಸಂಸ್ಥೆಗಳ ಕಾರ್ಯ ಎಂದುಕೊಳ್ಳದೆ ಪ್ರತಿಯೊಬ್ಬರು ಜವಾಬ್ದಾರಿ ಹೊರಬೇಕು ಎಂದು ಡಿವೈಎಸ್ ಪಿ ಚೈತ್ರಾ ಅಭಿಪ್ರಾಯಪಟ್ಟರು. ನಗರದ ಟಿಬಿ ವೃತ್ತದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ವನಮಹೋತ್ಸವದ ಅಂಗವಾಗಿ ಗಿಡ ನೆಟ್ಟು ಮಾತನಾಡಿದರು.
ಸಾವಿರಾರು ಗಿಡ ಮರಗಳನ್ನು ನೆಟ್ಟು ಬೆಳೆಸಿದ ಸಾಲು ಮರದ ತಿಮ್ಮಕ್ಕ ನಮಗೆಲ್ಲಾ ಮಾದರಿ. ಮಹಿಳೆಯರು ತಮ್ಮ ದೈನಂದಿನ ಬದುಕಿನ ಜೊತೆಗೆ ತಮ್ಮ ತಮ್ಮ ಮನೆಗಳ ಸುತ್ತಮುತ್ತ ಪರಿಸರ ಸುಂದರವಾಗಿರಲು ಗಿಡ ನೆಡಬೇಕು ಎಂದರು.ಸಿಪಿಐ ರಾಘವೇಂದ್ರ ಕಾಂಡಿಕೆ ಮಾತನಾಡಿ, ಮರಗಳನ್ನು ಬೆಳೆಸುವ ಹವ್ಯಾಸ ಕೇವಲ ವನಮಹೋತ್ಸವ ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.
ಪಿಎಸ್ ಐ ಶಶಿಕಲಾ, ಸಿಬ್ಬಂದಿಯಾದ ಚಿದಾನಂದ, ರಾಮಕೃಷ್ಣ, ನಳಿನ,ರವಿ, ವಿಶಾಲಾಕ್ಷಿ, ರಾಘು,ಸುನೀಲ್, ಶ್ರೀನಿವಾಸ್, ಶಾರದಾ,ಶೋಭಾ, ಮಂಜುನಾಥ್, ಸಂತೋಷ್ ಇದ್ದರು.----ಚಿತ್ರ 1,2
ನಗರದ ಟಿಬಿ ವೃತ್ತದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ವನಮಹೋತ್ಸವದ ಪ್ರಯುಕ್ತ ಡಿವೈಎಸ್ ಪಿ ಚೈತ್ರಾ ಸಸಿ ನೆಟ್ಟರು.