ಸಾರಾಂಶ
ರೈತ ಹೆಚ್ಚು ಬೆಳೆ ಬೆಳೆದು ಲಾಭ ಮಾಡಿಕೊಳ್ಳಬೇಕೆಂಬ ದುರಾಸೆಗೆ ಬಿದ್ದು ಅತಿಯಾದ ರಸಗೊಬ್ಬರ, ಕೀಟನಾಶಕ ಬಳಕೆಯಿಂದ ಮಣ್ಣು ಮಲೀನವಾಗಿದೆ. ಸಾವಯವ ತೋಟಗಾರಿಕೆ ಬೆಳೆ ಬೆಳೆಯಬೇಕು ಎಂದು ತೋವಿವಿ ಕುಲಪತಿ ಪ್ರೊ.ವಿಷ್ಣುವರ್ಧನ ಹೇಳಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡರೈತ ಹೆಚ್ಚು ಬೆಳೆ ಬೆಳೆದು ಲಾಭ ಮಾಡಿಕೊಳ್ಳಬೇಕೆಂಬ ದುರಾಸೆಗೆ ಬಿದ್ದು ಅತಿಯಾದ ರಸಗೊಬ್ಬರ, ಕೀಟನಾಶಕ ಬಳಕೆಯಿಂದ ಮಣ್ಣು ಮಲೀನವಾಗಿದೆ. ಅದರಿಂದ ಹೊರಬರಲು ಸಾವಯವ ತೋಟಗಾರಿಕೆ ಬೆಳೆ ಬೆಳೆಯಬೇಕು ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿಷ್ಣುವರ್ಧನ ಹೇಳಿದರು.
ಭಾನುವಾರ ತಾಲೂಕಿನ ಇಂಜಿನವಾರಿ ಗ್ರಾಮದ ಸಾವಯವ ಕೃಷಿಕ ತಿಪ್ಪಣ್ಣ ಗೌಡರ ಹೊಲದಲ್ಲಿ ಸ್ನೇಹ, ಪ್ರೀತಿ, ನಿಮ್ಮೊಂದಿಗೆ ರೈತ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ತೋಟಗಾರಿಕೆ ಮಾಡುವುದರಿಂದ ಲಾಭ ಬರುತ್ತದೆ. ಎಲ್ಲರೂ ಮಿಶ್ರ ಬೇಸಾಯ ಮಾಡಿ ಅದರಲ್ಲಿ ಏನಾದರೂ ತೊಂದರೆಯಾದಲ್ಲಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿದರೆ ನಮ್ಮ ತಂಡ ನಿಮ್ಮ ಹೊಲಕ್ಕೆ ಆಗಮಿಸಿ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಸಮಸ್ಸೆಯನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದು ಹೇಳಿದರು.ಸಾವಯವ ಕೃಷಿ ರೈತ ಉತ್ಪಾದನೆ ಸಂಘದ ಅಧ್ಯಕ್ಷ ಐ.ಎನ್. ದೊಡ್ಡಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇರೆ ಬೇರೆ ಜಿಲ್ಲೆಯ ರೈತರು ಒಂದೆಡೆ ಸೇರುವುದರಿಂದ ಸಾವಯವ ಕೃಷಿಯ ಸಮಸ್ಯೆಗಳನ್ನು ಅರಿತು ಬಗೆಹರಿಸಿ ಲಾಭದಾಯಕ ಕೃಷಿ ಮಾಡುವ ವಿಧಾನಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿ.ವಿ. ಡೀನ್ ಮಹೇಶ್ವರಪ್ಪ, ಕೃಷಿಕರಾದ ಮಕರಂದ ಜೇನು ಕೃಷಿ ಸಂಘದ ಅಧ್ಯಕ್ಷ ವೀರಯ್ಯ ಸುಳ್ಳಿಕೇರಿ, ಬಿ.ಎಫ್.ಪಾಟೀಲ, ಎನ್.ಎಸ್. ದೇಸಾಯಿ, ಪ್ರಭುಗೌಡ ಪಾಟೀಲ, ಕೃಷ್ಣಾ ಮಾಯಣ್ಣವರ, ಎಚ್.ಎನ್. ಕಡಪಟ್ಟಿಯವರು ಸಾವಯವ ಕೃಷಿ ಬೆಳವಣಿಗೆ ಅಲ್ಲಿ ಬರುವ ಸಮಸ್ಯೆಗಳ ಕುರಿತಾಗಿ ಅಭಿಪ್ರಾಯ ಹಂಚಿಕೊಂಡರು. ಎಫ್.ಬಿ.ಒ ನಿರ್ದೇಶಕಿ ಪುಷ್ಪಾ ಅಂಗಡಿ, ತಿಪ್ಪಣ್ಣ ಗೌಡರ, ಕಡಪ್ಪ ಪೈರಾಸಿ, ಸಚಿನ್ ಸಿದ್ನಾಳ ಇತರರು ಇದ್ದರು.ಬಾಗಲಕೋಟೆ, ಧಾರವಾಡ, ಬೆಳಗಾವಿ, ವಿಜಯಪೂರ, ಕೊಪ್ಪಳ ಮುಂತಾದ ಜಿಲ್ಲೆಗಳ ರೈತರು ಸಮವಸ್ತ್ರದೊಂದಿಗೆ ಪಾಲ್ಗೊಂಡಿದ್ದರು.