ಬಾಳೆ ನಷ್ಟ: ವಿಶೇಷ ಪ್ಯಾಕೇಜ್‌ಗೆ ಬೆಳೆಗಾರರ ಪ್ರತಿಭಟನೆ

| Published : Jun 12 2024, 12:31 AM IST

ಬಾಳೆ ನಷ್ಟ: ವಿಶೇಷ ಪ್ಯಾಕೇಜ್‌ಗೆ ಬೆಳೆಗಾರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ನಡುವೆ ಸೋಮವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆ ತೋಟಗಾರಿಕೆ ಅಧಿಕಾರಿಗಳು ೧೧೦೦ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ನಾಶವಾಗಿ ಎಕರೆಗೆ ೧೭ ಸಾವಿರದಂತೆ ೧೮೬ ಲಕ್ಷ ರು.ಗಳನ್ನು ಪರಿಹಾರವಾಗಿ ನೀಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಳೆದ ತಿಂಗಳಿನಿಂದ ಸುರಿದ ಗಾಳಿ ಮಳೆಗೆ ಸುಮಾರು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ನಾಶವಾಗಿರುವ ಬೆಳೆಗೆ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್‌ಗಾಗಿ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದಿಂದ ನಗರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ನಗರದ ಸತ್ತಿ ರಸ್ತೆಯಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ತೋಟಗಾರಿಕೆ ನಿರ್ದೇಶಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಹಳ್ಳಿಕರೆಹುಂಡಿ ಭಾಗ್ಯರಾಜ್ ಜಿಲ್ಲೆಯಲ್ಲಿ ಗಾಳಿ ಮಳೆಗೆ ಸುಮಾರು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ನಾಶವಾಗಿದೆ, ಇಲ್ಲಿವರೆಗೂ ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಳಾಗಲೀ ಸ್ಪಂದಿಸಿಲ್ಲ, ರೈತರು ಸಾಲಸೋಲ ಮಾಡಿ ಬೆಳೆದ ಬೆಳೆ ನಾಶವಾಗಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದರು.

ಈ ನಡುವೆ ಸೋಮವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆ ತೋಟಗಾರಿಕೆ ಅಧಿಕಾರಿಗಳು ೧೧೦೦ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ನಾಶವಾಗಿ ಎಕರೆಗೆ ೧೭ ಸಾವಿರದಂತೆ ೧೮೬ ಲಕ್ಷ ರು.ಗಳನ್ನು ಪರಿಹಾರವಾಗಿ ನೀಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದರು.

ನಯಾಪೈಸೆ ಪರಿಹಾರ ಬಂದಿಲ್ಲ: ಇಲ್ಲಿವರೆಗೆ ಯಾವ ಒಬ್ಬ ಬಾಳೆ ಬೆಳೆಗಾರರಿಗೂ ಒಂದು ಪೈಸೆ ಪರಿಹಾರ ಬಂದಿಲ್ಲ, ಸಭೆಗೆ ಸುಳ್ಳು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಮಾಹಿತಿ ನೀಡಿರುವ ಅಧಿಕಾರಿಗಳು ಸ್ಥಳಕ್ಕೆ ಬಂದು ಯಾರಾರಿಗೆ ಕೊಟ್ಟಿದ್ದಾರೆ ಎಂದು ಹೇಳಬೇಕು, ಇಲ್ಲದಿದ್ದರೆ ಜಾಗ ಬಿಟ್ಡು ಕದಲುವುದಿಲ್ಲ ಎಂದು ಪಟ್ಡು ಹಿಡಿದು ಕುಳಿತರು, ರೈತರ ಸಭೆ ಕರೆದಿಲ್ಲ, ರೈತರ ಕಷ್ಟ ಕೇಳುವರಿಲ್ಲ. ನಿನ್ನೆ ಇಬ್ಬರು ಮಂತ್ರಿಗಳು ಬಂದು ಬಂದ್ಯಾ ಪುಟ್ಟ, ಹೋದ್ಯಾ ಪುಟ್ಟ ಎಂಬಂತೆ ಬಂದು ಹೋಗಿದ್ದಾರೆ ಯಾರೊಬ್ಬರಿಗೂ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.ಭದ್ತತೆಯಲ್ಲಿದ್ದ ಪೊಲೀಸ್ ಇಲಾಖೆಯವರು ಜಿಲ್ಲಾ ತೋಟಗಾರಿಕೆ ಇಲಾಖೆಯ ನಿರ್ದೇಶಕರ ಜೊತೆ ಮಾತನಾಡಲು ದೂರವಾಣಿ ವ್ಯವಸ್ಥೆ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ನಾವು ಆ ರೀತಿ ಹೇಳಿಲ್ಲ ಸಭೆಗೆ ಯಾವುದೇ ಮಾಹಿತಿ ನೀಡಿಲ್ಲ ಬೆಳೆ ನಷ್ಟವಾಗಿರುವ ಬಗ್ಗೆ ತಿಳಿಸಿದ್ದೇನೆ ಎಂದರು.ಹಳ್ಳಿಕರೆಹುಂಡಿ ಭಾಗ್ಯರಾಜ್ ಮಾತನಾಡಿ ಬಾಳೆ ಬೆಳೆಗಾರರ ಸಭೆ ನಡೆಸಿ ಬೆಳ ನಷ್ಟದ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿ ವಿಶೇಷ ಪ್ಯಾಕೇಜ್‌ಗಾಗಿ ಮನವಿ ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.ಅಧಿಕಾರಿ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ವಾಪಸು ಪಡೆಯಲಾಯಿತುಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ ರವಿ ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳಿ ಕಟ್ಟೆ ಕುಮಾರ್ ಪ್ರಭುಸ್ವಾಮಿ ಸಿದ್ದಲಿಂಗಪ್ಪ, ಸಿದ್ದಪ್ಪ, ಗುರುವಿನಪುರ ಮೋಹನ್, ಚಂದ್ರು ಆನಂದಸ್ವಾಮಿ, ಮಲ್ಲೇಶ್, ಮಹೇಶ್, ಸಿ, ಚಂದ್ರಪ್ಪ ಇತರರು ಭಾಗವಹಿಸಿದ್ದರು.