ನಗರದ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ‘ಗ್ರೋವಿಂಗ್ ಬಿಯಾಂಡ್ ಲಿಮಿಟ್ಸ್’ ಎಂಬ ವಿಶೇಷ ತರಬೇತಿಯನ್ನು ಆಯೋಜಿಸಲಾಯಿತು. ಕಾಲೇಜಿನ ವೆಡ್ನಸ್ಡೆ ಲರ್ನಿಂಗ್ ಸಿರೀಸ್ ಅಂಗವಾಗಿ ಈ ಕಾರ್ಯಕ್ರಮವು ಕಾಲೇಜಿನ ಟಿ. ಮೋಹನ್‌ದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್‌ನ ಆಡಿಟೋರಿಯಂನಲ್ಲಿ ನಡೆಯಿತು.

ಉಡುಪಿ: ನಗರದ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ‘ಗ್ರೋವಿಂಗ್ ಬಿಯಾಂಡ್ ಲಿಮಿಟ್ಸ್’ ಎಂಬ ವಿಶೇಷ ತರಬೇತಿಯನ್ನು ಆಯೋಜಿಸಲಾಯಿತು. ಕಾಲೇಜಿನ ವೆಡ್ನಸ್ಡೆ ಲರ್ನಿಂಗ್ ಸಿರೀಸ್ ಅಂಗವಾಗಿ ಈ ಕಾರ್ಯಕ್ರಮವು ಕಾಲೇಜಿನ ಟಿ. ಮೋಹನ್‌ದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್‌ನ ಆಡಿಟೋರಿಯಂನಲ್ಲಿ ನಡೆಯಿತು.ಎಂ. ಜಿ. ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್ ನಾಯಕ್ ಉಪಸ್ಥಿತರಿದ್ದರು. ಕ್ರಾಪ್ಟ್ ಮಂತ್ರ ಸಂಸ್ಥೆಯ ಸ್ಥಾಪಕರಾದ ರೇಣು ಜಯರಾಮ್ ಮಣಿಪಾಲ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳು, ಆತ್ಮವಿಶ್ವಾಸ, ವೈಯಕ್ತಿಕ ಬೆಳವಣಿಗೆ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಸಾಮಾಜಿಕ ಉದ್ಯಮಶೀಲತೆ, ಸ್ವಾವಲಂಬನೆ ಹಾಗೂ ಸೃಜನಶೀಲತೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು.ವಿದ್ಯಾರ್ಥಿಗಳಾದ ಮೌಲ್ಯ ಪ್ರಾರ್ಥಿಸಿ, ಭೂಮಿಕ ಅತಿಥಿಗಳನ್ನು ಪರಿಚಯಿಸಿದರು. ಶ್ರಾವ್ಯ ಸ್ವಾಗತಿಸಿ, ಮಿಥಾಲಿ ನಿರೂಪಿಸಿದರು.