ಸಾರಾಂಶ
ಭಾರತ ವಿಶ್ವಗುರುವಾಗುವುದಕ್ಕೆ ಇಲ್ಲಿನ ಸಂಸ್ಕೃತಿ, ಶಿಕ್ಷಣ, ಪರಂಪರೆ, ಆಧ್ಯಾತ್ಮ ಕಾರಣವಾಗಿದೆ. ಮನುಷ್ಯ ಕೇಳಿಸಿಕೊಳ್ಳುವ ಜತೆಗೆ ಚಿಂತನೆ, ಮನನ ಮಾಡುವುದನ್ನು ಅನುಕರಿಸಿದಾಗ ಸರ್ವತೋಮುಖ ಬೆಳವಣಿಗೆ ಸಾಧ್ಯ. ಜಾತಿ, ಕುಲ ಬೇಧವಿಲ್ಲದೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡಬಹುದು. 
ಕನ್ನಡಪ್ರಭ ವಾರ್ತೆ ಸೊರಬ
ಗುರು, ಲಿಂಗ, ಜಂಗಮ ಸೇವೆ ನಡೆಯುವ ಕುಟುಂಬಕ್ಕೆ ಗುರು ಆಶೀರ್ವಾದ ಸದಾ ಇರಲಿದೆ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು.ತಾಲೂಕಿನ ತುಮರಿಕೊಪ್ಪ ಗ್ರಾಮದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಲಿಂಗೇಗೌಡ ಮನೆಯ ಆವರಣದಲ್ಲಿ ಹಮ್ಮಿಕೊಂಡ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಜ್ಜನರ ಸಂಘದಿಂದ ವ್ಯಕ್ತಿ ಬೆಳೆಯುವ ಜತೆಗೆ ಕುಟುಂಬ ಸಮಾಜದಲ್ಲಿ ಗುರುತಿಸಿಕೊಳ್ಳುತ್ತದೆ ಎಂದ ಅವರು ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕದಲ್ಲಿ ರಾಜ್ಯ ಮೇರು ಪರ್ವತವಾಗಿದೆ ಎಂದರು.
ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಭಾರತ ವಿಶ್ವಗುರುವಾಗುವುದಕ್ಕೆ ಇಲ್ಲಿನ ಸಂಸ್ಕೃತಿ, ಶಿಕ್ಷಣ, ಪರಂಪರೆ, ಆಧ್ಯಾತ್ಮ ಕಾರಣವಾಗಿದೆ. ಮನುಷ್ಯ ಕೇಳಿಸಿಕೊಳ್ಳುವ ಜತೆಗೆ ಚಿಂತನೆ, ಮನನ ಮಾಡುವುದನ್ನು ಅನುಕರಿಸಿದಾಗ ಸರ್ವತೋಮುಖ ಬೆಳವಣಿಗೆ ಸಾಧ್ಯ. ಜಾತಿ, ಕುಲ ಬೇಧವಿಲ್ಲದೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡಬಹುದು. ಕಾಯ, ವಾಚಾ, ಮನಸ್ಸು ಶುದ್ಧವಾಗಿ ಕೆಲಸ ಮಾಡಿದರೆ ದೇವರನ್ನು ಒಲಿಸಿಕೊಳ್ಳಬಹುದು ಎಂದರು.ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಲಿಂಗೇಗೌಡ, ಅಶ್ವಿನಿ, ಮಂಜುಗೌಡ, ಸಂತೋಷ್, ಮೃತ್ಯುಂಜಯ ಗೌಡ ಇತರರಿದ್ದರು.
;Resize=(128,128))
;Resize=(128,128))
;Resize=(128,128))