ಸಾರಾಂಶ
ಗೋವಾದ ಕ್ಯಾಲಂಗುಟೆ ಕನ್ನಡ ಸಂಘ, ಬೆಂಗಳೂರಿನ ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟೇಬಲ್ ಫೌಂಡೇಷನ್ ವತಿಯಿಂದ ಜ.26ರಂದು ಪಣಜಿಯಲ್ಲಿ ನಡೆಯುವ ಸಂಕ್ರಾಂತಿ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್.ಶ್ಯಾಮ್ ಅವರಿಗೆ ರಾಷ್ಟ್ರೀಯ ಪ್ರಜಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪಣಜಿಯ ಪತ್ರಕರ್ತ ಅನಿಲ್ ಸವದಿ ತಿಳಿಸಿದ್ದಾರೆ.
ದಾವಣಗೆರೆ: ಗೋವಾದ ಕ್ಯಾಲಂಗುಟೆ ಕನ್ನಡ ಸಂಘ, ಬೆಂಗಳೂರಿನ ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟೇಬಲ್ ಫೌಂಡೇಷನ್ ವತಿಯಿಂದ ಜ.26ರಂದು ಪಣಜಿಯಲ್ಲಿ ನಡೆಯುವ ಸಂಕ್ರಾಂತಿ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್.ಶ್ಯಾಮ್ ಅವರಿಗೆ ರಾಷ್ಟ್ರೀಯ ಪ್ರಜಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪಣಜಿಯ ಪತ್ರಕರ್ತ ಅನಿಲ್ ಸವದಿ ತಿಳಿಸಿದ್ದಾರೆ.
ಜಿ.ಎಸ್. ಶ್ಯಾಮ್ ದಾವಣಗೆರೆ ಜಿಲ್ಲೆಯ ಎಂಜಿನಿಯರ್ ಪದವೀಧರರಾಗಿ, 2 ದಶಕಗಳ ಕಾಲ ದೇಶಭಕ್ತ ಮತ್ತು ಗೋಸಂರಕ್ಷಣೆ ಸಂಘಟನೆಗಳಲ್ಲಿ ನಾಡಿನಾದ್ಯಂತ ಯುವಶಕ್ತಿ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಜಿಲ್ಲೆಯ ಅಣಜಿ ಗೊಲ್ಲರಹಳ್ಳಿ ಗ್ರಾಮದವರು. ತಂದೆ ಬಿ.ಟಿ.ಸಿದ್ದಪ್ಪ ಗೋರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾಗಿ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮತ್ತು ವಿದ್ಯಾ ಸಂಸ್ಥೆ ಸಂಸ್ಥಾಪಕರಾಗಿದ್ದಾರೆ. ತಂದೆಯಂತೆ ಮಗ ಜಿ.ಎಸ್. ಶ್ಯಾಮ್ ಸಹ ಸಾರ್ವಜನಿಕ ಕ್ಷೇತ್ರಕ್ಕೆ ಧುಮಿಕಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ.
ರಾಜಕೀಯ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಟ್ಟಾಭಿಮಾನಿಯಾಗಿದ್ದು, ಪ್ರಾಮಾಣಿಕತೆ, ಸರಳತೆ ಮೈಗೂಡಿಸಿಕೊಂಡಿದ್ದಾರೆ. ಈಗಾಗಲೇ ಮಾಯಾಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಕ್ಷೇತ್ರಾದ್ಯಂತ ಗುರುತಿಸಿಕೊಂಡಿದ್ದಾರೆ. ಅವರ ಜನಪ್ರಿಯತೆ ಕಂಡು ರಾಜ್ಯ, ರಾಷ್ಟ್ರ ಬಿಜೆಪಿ ವರಿಷ್ಠರು ಜಿಎಸ್.ಶ್ಯಾಮ್ ಅವರನ್ನು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸೇವೆಗಳ ಮಧ್ಯೆ ರಾಜಕೀಯ ಕ್ಷೇತ್ರದಲ್ಲೂ ಜನಸ್ನೇಹಿ ಯುವ ನಾಯಕನಾಗಿ ಬೆಳೆದಿದ್ದಾರೆ. ಈ ಹಿನ್ನೆಲೆ ರಾಷ್ಟ್ರೀಯ ಪ್ರಜಾ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.- - -
-19ಕೆಡಿವಿಜಿ35: ಜಿ.ಎಸ್.ಶ್ಯಾಮ್