ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕೇಂದ್ರ ಸರ್ಕಾರವು ಸೋಮವಾರದಿಂದ ವಿವಿಧ ವಸ್ತುಗಳ ಮೇಲೆ ಜಿ.ಎಸ್.ಟಿ. ತೆರಿಗೆಯನ್ನು ಇಳಿಕೆ ಮಾಡುವ ಮೂಲಕ ಬಡವರಿಗೆ, ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಿದೆ ಎಂದು ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.ನಗರದ ಚಂಪಕ್ ಸರ್ಕಲ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್(ಎನ್.ಡಿ.ಎ.) ಪಕ್ಷದ ವತಿಯಿಂದ ಆಯೋಜಿಸಿದ್ದ ಜಿ.ಎಸ್.ಟಿ.ಇಳಿಕೆ ನವರಾತ್ರಿಯ ಕೊಡುಗೆಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆಯಂತೆ ನವರಾತ್ರಿಯ ದಸರಾ ಹಬ್ಬದ ಕೊಡುಗೆಯಾಗಿ ನೀಡಿದ್ದಾರೆ.
ಸ್ವದೇಶಿಯ ಉತ್ಪನ್ನಗಳಿಗೆ ಒತ್ತುಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ದಿಗಾಗಿ ಸ್ವದೇಶಿಯ ಉತ್ಪನ್ನಗಳಿಗೆ ಒತ್ತು ನೀಡುವ ದೆಸೆಯಲ್ಲಿ ದಿನಬಳಕೆಯ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ಮೂಲಕ ಸಾಮಾನ್ಯ ಜನತೆಗೆ ಅನುವು ಮಾಡಿದೆ. ರೈತರಿಗೆ ಕೃಷಿ ಯಂತ್ರೋಪಕರಣಗಳಿಗೆ, ಔಷಧಿಗಳಿಗೆ. ದಿನನಿತ್ಯದ ಪದಾರ್ಥಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ಮೂಲಕ ಜನಪರ ಆಡಳಿತ ನೀಡುತ್ತಿರುವುದು ಸ್ವಾಗತಾರ್ಹ ಎಂದರು. ಜನರಿಗೆ ನವರಾತ್ರಿಯ ಕೊಡುಗೆಯಾಗಿ ಜಿ.ಎಸ್.ಟಿ. ಇಳಿಕೆ ಮಾಡಿ ಮಾಡುವ ಮೂಲಕ ಜನಸಾಮಾನ್ಯರ ಮೇಲಿನ ಹೊರೆಯನ್ನು ಇಳಿಸಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಕೇಂದ್ರ ಸರ್ಕಾರವು ನೀಡಿರುವ ಕೊಡುಗೆ ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿರುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸ ಬೇಕಾಗಿದೆ ಎಂದು ಹೇಳಿದರು. ಜಿಎಸ್ಟಿ ಇಳಿಕೆ ಬಗ್ಗೆ ಪ್ರಚಾರ
ಕೆ.ಜಿ.ಎಫ್. ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ ದೇಶದ ೧೪೦ ಕೋಟಿ ಜನತೆಗೆ ಜಿ.ಎಸ್.ಟಿ. ದರ ಇಳಿಕೆ ಮಾಡಿ ವಿಜಯದಶಮಿಗೆ ಕೊಡುಗೆ ನೀಡಿರುವುದನ್ನು ನಾವು ವಿಜಯೋತ್ಸವ ಮೂಲಕ ಜನಸಾಮಾನ್ಯರಿಗೆ ಪ್ರಚಾರ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಈ ಕೊಡುಗೆಯ ಮಾಹಿತಿಯನ್ನು ಸಾರ್ವಜನಿಕರಿಗೆ ಅರಿವು ಮೂಡಿಸ ಬೇಕಾಗಿರುವುದು ಎನ್.ಡಿ.ಎ.( ಬಿಜೆಪಿ-ಜೆ.ಡಿಎಸ್) ಪಕ್ಷದ ಜವಾಬ್ದಾರಿಯಾಗಿದೆ ಎಂದರು.ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹಿಸುವ ದೆಸೆಯಲ್ಲಿ ಜಿ.ಎಸ್.ಟಿ. ದರವನ್ನು ಇಳಿಸುವ ಮೂಲಕ ಔಷಧಿ, ಶೈಕ್ಷಣಿಕವಾಗಿ ಪೂರಕವಾದ ಲೇಖನಿ. ಪುಸ್ತಕ. ಇತ್ಯಾದಿಗಳನ್ನು ತೆರಿಗೆ ಮುಕ್ತಗೊಳಿಸಿ ಜನಸಾಮಾನ್ಯರಿಗೆ ಅನುವುಂಟು ಮಾಡಿದೆ. ಈ ಕುರಿತು ಎಲ್ಲಾ ಜನರಿಗೂ ಅರಿವುಂಟು ಮಾಡ ಬೇಕಾಗಿದೆ ಎಂದು ಹೇಳಿದರು. ಔಷಧಿಗಳಿಗೆ ತೆರಿಗೆ ಇಳಿಕೆ
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕಳೆದ ೧೧ ವರ್ಷಗಳ ಹಿಂದೆ ಕಾಂಗ್ರೆಸ್‌ನ ಯು.ಪಿ.ಎ. ಸರ್ಕಾರದಲ್ಲಿ ಜಿ.ಎಸ್.ಟಿ. ದರಗಳನ್ನು ಶೇ ೨೭ಕ್ಕೆ ಏರಿಕೆ ಮಾಡಿರುವುದನ್ನು ಬಿಜೆಪಿ ಸರ್ಕಾರ ಶೇ ೧೮ಕ್ಕೆ ಇಳಿಸಿದೆ. ಎರಡು ಹಂತದಲ್ಲಿ ಮಾಡಿದೆ. ಸಾಮಾನ್ಯ ಜನರ ಅವಶ್ಯಕವಾದ ಔಷಧಿಗಳಿಗೆ ತೆರಿಗೆಯಿಂದ ಮುಕ್ತ ಗೊಳಿಸಿ ಶೂನ್ಯಕ್ಕೆ ಇಳಿಸಿ ಬಡಜನತೆಗೆ ನವರಾತ್ರಿಯ ವಿಜಯ ದಶಮಿ ಕೊಡುಗೆಯನ್ನು ನೀಡಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದರು. ನಿತ್ಯ ವಸ್ತುಗಳ ದರ ಕಡಿತಕಾಂಗ್ರೆಸ್ ಸರ್ಕಾರವು ಸಾಮಾನ್ಯ ಜನತೆಯ ಮೇಲೆ ವಿಧಿಸಿದ್ದ ತೆರಿಗೆಯ ಹೊರೆಯನ್ನು ಬಿಜೆಪಿಯ ನರೇಂದ್ರ ಮೋದಿ ಸರ್ಕಾರವು ಮುಕ್ತಗೊಳಿಸಿದೆ. ಜೀವವಿಮೆ. ವಾಹನಗಳು, ದಿನನಿತ್ಯ ಬಳಕೆ ಪದಾರ್ಥಗಳು, ವಸ್ತುಗಳು ಇಳಿಕೆ ಮಾಡುವ ಮೂಲಕ ಜನಪರ ಆಡಳಿತ ನೀಡುತ್ತಿರುವುದನ್ನು ಸಾರ್ವಜನಿಕರಿಗೆ ಕರಪತ್ರ ಭಿತ್ತಿ ಪತ್ರಗಳಿಂದ, ಮಾಧ್ಯಮಗಳ ಪ್ರಚಾರ, ಸಾಮಾಜಿಕ ಜಾಲದಾಣದ ಮೂಲಕ ಅರಿವು ಮೂಡಿಸ ಬೇಕಾಗಿದೆ ಎಂದರು. ಜೆ.ಡಿ.ಎಸ್.ಮುಖಂಡ ಬಣಕನಹಳ್ಳಿ ನಟರಾಜ್ ಮಾತನಾಡಿದರು. ಇದೇ ಸಂದರ್ಭಧಲ್ಲಿ ಪಟಾಕಿ ಸಿಡಿಸಿ ಸಿಹಿಯನ್ನು ಹಂಚಲಾಯಿತು. ನಂತರದಲ್ಲಿ ಜಿ.ಎಸ್.ಟಿ. ಇಳಿಕೆ ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.