ಜಿಎಸ್‌ಟಿ ಸುಧಾರಣೆ ಮೋದಿಯಿಂದ ದೇಶಕ್ಕೆ ದೀಪಾವಳಿ, ನವರಾತ್ರಿ ಉಡುಗೊರೆ: ಶ್ರೀನಿಧಿ ಹೆಗ್ಡೆ

| Published : Sep 06 2025, 01:01 AM IST

ಜಿಎಸ್‌ಟಿ ಸುಧಾರಣೆ ಮೋದಿಯಿಂದ ದೇಶಕ್ಕೆ ದೀಪಾವಳಿ, ನವರಾತ್ರಿ ಉಡುಗೊರೆ: ಶ್ರೀನಿಧಿ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಎಸ್ ಟಿ ಸ್ಲ್ಯಾಬ್ ಬದಲಾವಣೆ ದೇಶದ ಸಾಮಾನ್ಯ ಜನ, ಮಧ್ಯಮ ವರ್ಗ, ರೈತರು ಹಾಗೂ ವ್ಯಾಪಾರಿಗಳ ಜೀವನದಲ್ಲಿ ಹಾಗೂ ದೇಶದ ಆರ್ಥಿಕತೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಬಣ್ಣಿಸಿದ್ದಾರೆ.

ಉಡುಪಿ: ನಾಲ್ಕು ಸ್ಲಾಬ್ ಗಳಲ್ಲಿದ್ದ ಜಿಎಸ್‌ಟಿ ಮಿತಿಯನ್ನು ಎರಡು ಸ್ಲಾಬ್ ಮಾಡುವ ಮೂಲಕ ಔಷಧಿ, ಜೀವವಿಮೆಯೂ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡಲಾಗಿದೆ. ಈ ಮೂಲಕ ದೇಶದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ತಿರುವು ಮೂಡಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಇದು ದೇಶದ ಸಾಮಾನ್ಯ ಜನ, ಮಧ್ಯಮ ವರ್ಗ, ರೈತರು ಹಾಗೂ ವ್ಯಾಪಾರಿಗಳ ಜೀವನದಲ್ಲಿ ಹಾಗೂ ದೇಶದ ಆರ್ಥಿಕತೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಬಣ್ಣಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಾಮಾನ್ಯ, ಮಧ್ಯಮ ವರ್ಗದ ಜನರಿಗೆ, ರೈತರಿಗೆ ಜಿಎಸ್‌ಟಿ ಕಡಿತದ ಮೂಲಕ ಸಿಹಿ ಸುದ್ದಿ ನೀಡುವ ಭರವಸೆ ನೀಡಿದ್ದರು. ಇದೀಗ ಮೋದಿ ಸರ್ಕಾರ ನವರಾತ್ರಿ ಹಾಗೂ ದೀಪಾವಳಿ ಹಬ್ಬಕೆ ಉಡುಗೊರೆ ನೀಡಿದೆ.

ಸಾಮಾನ್ಯ, ಮಧ್ಯಮ ವರ್ಗ ಬಳಸುವ ವಸ್ತುಗಳ ಮೇಲೆ ಸಂಪೂರ್ಣ ತೆರಿಗೆ ಕಡಿತ ಮಾಡಲಾಗಿದೆ ಹಾಗೂ ಜಿಎಸ್‌ಟಿ ಸ್ಲ್ಯಾಬ್‌ಗಳ ಪರಿಷ್ಕರಣೆಯಲ್ಲಿ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದ್ದು, ಹಬ್ಬದ ಅವಧಿಯಲ್ಲಿ ವಾಹನಗಳ ಬೆಲೆಯಲ್ಲಿ ಭಾರೀ ಕಡಿತವಾಗಲಿದೆ. ಆರೋಗ್ಯ - ಜೀವ ವಿಮೆಯ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸಲಾಗಿದೆ, 33 ಜೀವರಕ್ಷಕ ಔಷಧಿಗಳ ಜಿಎಸ್‌ಟಿ ಶೂನ್ಯಗೊಳಿಸಲಾಗಿದೆ, ಅನೇಕ ಔಷಧಿ, ವೈದ್ಯಕೀಯ ಉಪಕರಣಗಳ ಜಿಎಸ್‌ಟಿಯನ್ನು ಭಾರೀ ಕಡಿತಗೊಳಿಸಲಾಗಿದೆ. ಇದು ನವರಾತ್ರಿಯ ಮೊದಲ ದಿನ, ಅಂದರೆ ಸೆ 22ರಿಂದ ಜಾರಿಯಾಗಲಿದೆ.

ಜಿಎಸ್‌ಟಿ ಸರಳೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ಸಾಮಾನ್ಯ ಜನತೆಗೆ ಹೊರೆ ಕಮ್ಮಿ ಮಾಡುವ ಮೂಲಕ ಹಾಗೂ ಉದ್ದಿಮೆದಾರರಿಗೆ ಉತ್ತೇಜನ ನೀಡುವುದರೊಂದಿಗೆ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಇದು ಮಹತ್ವದ ಹೆಜ್ಜೆ ಮುಂದಡಿ ಇಟ್ಟಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.