ಹರಿಹರ: ಎಸ್‌ಸಿ-ಎಸ್‌ಟಿ ಯುವಜನರಿಗೆ ಜಿಟಿಟಿಸಿ ಅಲ್ಪಾವಧಿ ತಾಂತ್ರಿಕ ತರಬೇತಿ

| Published : Apr 22 2025, 01:52 AM IST

ಸಾರಾಂಶ

ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಲ್ಲಿ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಮೂಲಕ 16 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉದ್ಯೋಗ ಅವಕಾಶ ಕಲ್ಪಿಸಲು ಉಚಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.

- ಶಿಷ್ಯವೇತನ ಸೌಲಭ್ಯ, ಉದ್ಯೋಗ ಅವಕಾಶಕ್ಕೆ ಮಾರ್ಗದರ್ಶನ

- - -

ಹರಿಹರ: ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಲ್ಲಿ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಮೂಲಕ 16 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉದ್ಯೋಗ ಅವಕಾಶ ಕಲ್ಪಿಸಲು ಉಚಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ., ಅಥವಾ ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಸಿಎನ್‍ಸಿ ಪ್ರೋಗ್ರಾಮರ್, ಕನ್ವೆನ್ಷನಲ್ ಟರ್ನರ್ ಮಿಲ್ಲಿಂಗ್ ಮಷಿನ್, ಕನ್ವೆನ್ಷನಲ್ ಮಿಲ್ಲಿಂಗ್ ಮಷಿನ್ ಅಪರೇಟರ್, ಕನ್ವೆನ್ಷನಲ್ ಸರ್ಫೇಸ್ ಗ್ರೈಂಡರ್ ಆಪರೇಟರ್, ಡಿಸೈನ್ ಮಷಿನ್, ಪ್ರೊಡಕ್ಷನ್ ಎಂಜಿನಿಯರ್ (ಕ್ಯಾಡ್, ಕ್ಯಾಮ್) ಸಿಎನ್‍ಸಿ ಆಪರೇಟರ್ ಟರ್ನರ್, ಟೂಲ್ ರೂಮ್ ಮೆಷಿನಿಸ್ಟ್‌ ಅಲ್ಪಾವಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುವುದು.

ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲಾಗುವುದು, ತರಬೇತಿ ಮುಗಿದ ನಂತರ ಉದ್ಯೋಗ ಅವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಮೇ 2ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಇಂಡಸ್ಟ್ರಿಯಲ್ ಏರಿಯಾ, ಹರ್ಲಾಪುರ, ಕೆಎಸ್‍ಆರ್‌ಟಿಸಿ ಡಿಪೋ ಹತ್ತಿರ, ಹರಿಹರ, ಪೋನ್ ನಂ: 97431-85553, 96110-25932, 91643-69670 ಇಲ್ಲಿಗೆ ಸಂಪರ್ಕಿಸಲು ಕೋರಿದೆ.