ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಶಿಫಾರಸ್ಸಿನಂತೆ ಪ್ರತ್ಯೇಕ ಶೇ. 1 ರಷ್ಟು ಮೀಸಲಾತಿಯನ್ನು ಅಲೆಮಾರಿಗಳಿಗೆ ನೀಡಬೇಕೆಂದು ಒತ್ತಾಯಿಸಿ ಸ್ಲಂ ಜನಾಂದೊಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗ ಹಿತರಕ್ಷಣಾ ಸಮಿತಿ, ತುಮಕೂರು ಅಲೆಮಾರಿ ಮಹಾಸಭಾದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರಿಗೆಂದು ಜಾರಿ ಮಾಡಿರುವ 5 ಗ್ಯಾರಂಟಿಗಳು ಆರ್ಥಿಕ ಸಬಲತೆ ತಂದುಕೊಟ್ಟರು ಅಲ್ಪಕಾಲಿಕವಾಗಿದೆಇತ್ತೀಚಿಗೆರಾಜ್ಯ ಸಚಿವ ಸಂಪುಟವು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ನೀಡಿದ ಶಿಫಾರಸ್ಸಿನಲ್ಲಿ ಪರಿಶಿಷ್ಟರ 101 ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳಾದ ಅಲೆಮಾರಿ ಹಾಗೂ ಅರೆಅಲೆಮಾರಿ ಸಂಬಂಧಿಸಿದ 59 ಜಾತಿಗಳನ್ನು ಪ್ರವರ್ಗ 1 ಯಲ್ಲಿ ಸೇರಿಸಿ ಇವರಿಗೆ ಶೇ. 1 ರಷ್ಟು ಮೀಸಲಾತಿ ನೀಡುವ ಬಗ್ಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಗಮೋಹನ್ ದಾಸ್ ಆಯೋಗ ಅಸ್ಪೃಶ್ಯ ಅಲೆಮಾರಿ ಜಾತಿ ಗುಂಪಿಗೆ ನೀಡಿದ್ದ ಪ್ರತ್ಯೇಕ ಶೇ.1% ರ ಮೀಸಲಾತಿಯನ್ನು ಕಿತ್ತುಕೊಂಡು ಸ್ಪೃಶ್ಯ ಜಾತಿಗಳಾದ ಲಂಬಾಣಿ, ಬೊವಿ, ಕೊರಮ, ಕೊರಚ, ಜಾತಿಗಳ ಗುಂಪಿಗೆ ಸೇರಿಸಿ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿ ಅಲೆಮಾರಿ ತಬ್ಬಲಿಗಳನ್ನು ದಿಕ್ಕಾಪಾಲು ಮಾಡಿರುವುದು ಸುಪ್ರೀಂಕೋರ್ಟಿನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.ಅದ್ದರಿಂದ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲೆಮಾರಿ ಸಮುದಾಯಗಳಿಗೆ ಆದ ಘೋರ ಅನ್ಯಾಯವನ್ನು ಸರಿಪಡಿಸಿ, ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಶಿಫಾರಸ್ಸಿನಂತೆ ಪ್ರತ್ಯೇಕ 1% ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮೂಲಕ ಅಲೆಮಾರಿಗಳಿಗೆ ಸಂವಿಧಾನ ಬದ್ದಮೀಸಲಾತಿ ಗ್ಯಾರಂಟಿ ನೀಡಬೇಕು ಎಂದರು.ಅಲೆಮಾರಿ ಮಹಾಸಭಾದ ರಾಮಕ್ಕ ಮತ್ತು ಮಾರಯ್ಯ, ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಅನುಪಮಾ ಮಾತನಾಡಿದರು. ಸ್ಲಂ ಜನಾಂದೋಲನ ಕರ್ನಾಟಕದ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತುಮಕೂರು ಸ್ಲಂ ಸಮಿತಿಯ ತಿರುಮಲಯ್ಯ, ಕೃಷ್ಣಮೂರ್ತಿ, ಕಣ್ಣನ್, ಸಾವಿತ್ರಿ ಬಾಯಿಪುಲೆ ಸಂಘಟನೆಯ ಶಾರದಮ್ಮ, ಪೂರ್ಣಿಮಾ, ಮಂಗಳಮ್ಮ, ಹನುಮಕ್ಕ, ಲಕ್ಷ್ಮಮ್ಮ, ತುಮಕೂರು, ಗುಬ್ಬಿ, ಅಮಲಾಪುರ ಅಲೆಮಾರಿ ಸಮುದಾಯದ ವೆಂಕಟೇಶ್, ಗುರಪ್ಪ, ಸಂತೋಷ್, ನಾಗರಾಜು, ಸುಂಕಮ್ಮ, ಮಾರಯ್ಯ, ರಾಜು, ಗೋವಿಂದ, ಶವಣ್ಣ, ಶಂಕರ್, ಮುಂತಾದವರು ಪಾಲ್ಕೊಂಡಿದ್ದರು.