ಗ್ಯಾರಂಟಿ ಯೋಜನೆ ಜನರ ಬಲವರ್ಧನೆಗೆ ಸಹಕಾರಿ: ಕುರುಬರ

| Published : Jul 15 2025, 01:00 AM IST

ಗ್ಯಾರಂಟಿ ಯೋಜನೆ ಜನರ ಬಲವರ್ಧನೆಗೆ ಸಹಕಾರಿ: ಕುರುಬರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಮನೆ ಬಾಗಿಲಿಗೆ ತಲುಪುವಂತಹ ಯೋಜನೆಗಳಾಗಿದ್ದು, ಇದರಿಂದ ರಾಜ್ಯದ ಜನರ ಆರ್ಥಿಕ ಮತ್ತು ಸಾಮಾಜಿಕ ಬಲವರ್ದನೆಗೆ ಸಹಕಾರಿಯಾಗಿವೆ.

ಅಳ್ನಾವರ: ಗ್ಯಾರಂಟಿಯಲ್ಲಿ ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಯನ್ನು ಜಾರಿ ಮಾಡುವ ಮೂಲಕ ಸ್ತ್ರೀಯರಿಗೆ ಸ್ವಾವಲಂಬಿಯಾಗಿ ಬದುಕಲು ಸರ್ಕಾರ ಸಹಕಾರ ನೀಡಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೊಜನೆಯಡಿ 500 ಕೋಟಿ ಉಚಿತ ಟಿಕೆಟ್ ವಿತರಣೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಮನೆ ಬಾಗಿಲಿಗೆ ತಲುಪುವಂತಹ ಯೋಜನೆಗಳಾಗಿದ್ದು, ಇದರಿಂದ ರಾಜ್ಯದ ಜನರ ಆರ್ಥಿಕ ಮತ್ತು ಸಾಮಾಜಿಕ ಬಲವರ್ದನೆಗೆ ಸಹಕಾರಿಯಾಗಿವೆ. ಈ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಸುಗಮಗೊಳಿಸಲು ಕ್ರಮಗಳನ್ನು ಕೈಕೊಳ್ಳಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜುಗಳ ಸಮಯಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಸ್ ಚಾಲಕ ನಿರ್ವಾಹಕರಿಗೆ ಸನ್ಮಾನಿಸಿದ ಬಳಿಕ ಮಹಿಳೆಯರಿಂದ ಕೆಕ್ ಕತ್ತರಿಸಲಾಯಿತು. ಈ ವೇಳೆ ಕಾರ್ಮಿಕ ಸಚಿವರ ಆಪ್ತ ಕಾಯದರ್ಶಿ ಶ್ರೀಕಾಂತ ಗಾಯಕವಾಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಪಪಂ ಅಧ್ಯಕ್ಷ ಅಮೋಲ ಗುಂಜೀಕರ, ಸತ್ತಾರ ಬಾತಕಂಡೆ, ವಶೀಮಖಾನ ಪಠಾಣ, ಹಳಿಯಾಳ ಘಟಕ ವ್ಯವಸ್ಥಾಪಕ ಆರ್ ರೂಗಿ, ನಿಲ್ದಾಣಾಧಿಕಾರಿ ಸುರೇಶ ಕಲ್ಲವಡ್ಡರ, ನಿಸ್ಸಾರ ಖತೀಬ, ಪಪಂ ಹಾಗೂ ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.