ಸಾರಾಂಶ
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಿ.ಎಸ್.ಪುರ ಹೋಬಳಿ ಸಾಲಗಾರರ ಕ್ಷೇತ್ರ ಸಾಮಾನ್ಯ ಮೀಸಲು ನಿರ್ದೇಶಕರಾಗಿ ಬುಕ್ಕಸಾಗರ ಮಹದೇವಯ್ಯ 40 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಿ.ಎಸ್.ಪುರ ಹೋಬಳಿ ಸಾಲಗಾರರ ಕ್ಷೇತ್ರ ಸಾಮಾನ್ಯ ಮೀಸಲು ನಿರ್ದೇಶಕರಾಗಿ ಬುಕ್ಕಸಾಗರ ಮಹದೇವಯ್ಯ 40 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಿ.ಎಸ್.ಪುರ ಹೋಬಳಿಯ ಸಾಮಾನ್ಯ ಮೀಸಲು ಸಾಲಗಾರರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮಹದೇವಯ್ಯ ಹಾಗೂ ಕಾಳೇಗೌಡ ನಾಮಪತ್ರ ಸಲ್ಲಿಸಿ ಕಣದಲ್ಲಿ ನೇರ ಹಣಾಹಣಿ ನಡೆಸಿದರು. ಚುನಾವಣಾ ಮತದಾನ ಪ್ರಕ್ರಿಯೆ ನಡೆದು ನಂತರ ಎಣಿಕೆ ಕಾರ್ಯ ನಡೆಯಿತು. ಒಟ್ಟು 58 ಮತಗಳ ಪೈಕಿ 56 ಮತಗಳು ಚಲಾವಣೆಗೊಂಡಿದ್ದವು. ಚಲಾವಣೆ ಪೈಕಿ ಒಂದು ಮತ ತಿರಸ್ಕೃತ ಮತವಾಗಿ ಉಳಿದ 55 ಮತಗಳಲ್ಲಿ ಬುಕ್ಕಸಾಗರ ಮಹದೇವಯ್ಯ 40 ಮತಗಳನ್ನು ಪಡೆದು ಬಾರಿ ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಕಾಳೇಗೌಡ 15 ಮತಗಳ ಪಡೆದು ಪರಾಜಯಗೊಂಡರು. ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿ ಬುಕ್ಕಸಾಗರ ಸಾಲಗಾರರ ಕ್ಷೇತ್ರ ಸಾಮಾನ್ಯ ಮೀಸಲು ನಿರ್ದೇಶಕರಾಗಿ ಬುಕ್ಕಸಾಗರ ಮಹದೇವಯ್ಯ 40 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು.