ಸಾರಾಂಶ
ಗುಬ್ಬಿ ವೀರಣ್ಣನವರು ಅಂತಾರಾಷ್ಟ್ರೀಯವಾಗಿ ಖ್ಯಾತರಾಗಿದ್ದರು. ಅವರ ಕೊಡುಗೆ ರಂಭೂಮಿಗೆ ಗುರುತರವಾದದ್ದು. ಅವರ ಮುಂದರಿಕೆಯಾಗಿ ತುಮಕೂರು ಜಿಲ್ಲೆಯಲ್ಲಿ ಹತ್ತಾರು ರಂಗತಂಡಗಳು ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುಮಕೂರು
ಗುಬ್ಬಿ ವೀರಣ್ಣನವರು ಅಂತಾರಾಷ್ಟ್ರೀಯವಾಗಿ ಖ್ಯಾತರಾಗಿದ್ದರು. ಅವರ ಕೊಡುಗೆ ರಂಭೂಮಿಗೆ ಗುರುತರವಾದದ್ದು. ಅವರ ಮುಂದರಿಕೆಯಾಗಿ ತುಮಕೂರು ಜಿಲ್ಲೆಯಲ್ಲಿ ಹತ್ತಾರು ರಂಗತಂಡಗಳು ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಅವರು ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಡಮರುಗ ರಂಗತಂಡ ಆಯೋಜಿಸಿದ್ದ 5 ದಿನಗಳ ದೇಸೀ ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೆಳೇಹಳ್ಳಿಯಂತಹ ಪುಟ್ಟ ಹಳ್ಳಿಯಲ್ಲಿ ಡಮರುಗ ತಂಡವೂ ರಾಷ್ಟ್ರೀಯವಾಗಿ ಅಂತರರಾಷ್ಟ್ರೀಯವಾಗಿ ಗುರುತಿಸಿಕೊಳ್ಳುತ್ತಿದೆ. ಅವರ ಇಂತಹ ಕಲಾಸಂಸ್ಕೃತಿ ಕಾರ್ಯಕ್ಕೆ ಪ್ರಜ್ಞಾವಂತರು ಕೈಜೋಡಿಸಬೇಕಿದೆ. ಆಗ ಅವರಿಗೆ ಇನ್ನಷ್ಟು ಬಲ ಬರುತ್ತದೆ ಎಂದುವೇದಿಕೆಯಲ್ಲಿ ತಾಲೂಕು ಕ.ಸಾ.ಪ. ಅಧ್ಯಕ್ಷ ಬೆಳ್ಳಾವಿ ಶಿವಕುಮಾರ್, ಆರ್ಥಿಕ ಸಾಕ್ಷರತಾ ಸಲಹೆಗಾರ ಎಸ್. ದಯಾನಂದ್, ಬಿ.ಎಂ.ಎಸ್. ಕಾಲೇಜು ಉಪನ್ಯಾಸಕಿ ಹೇಮಲತಾ, ನಿವೃತ್ತ ಶಿಕ್ಷಕ ಹನುಮಂತಯ್ಯ ಉಪಸ್ಥಿತರಿದ್ದರು.
ಮೊದಲ ನಾಟಕವಾಗಿ ರಂಗಬಂಡಿ ಮಳವಳ್ಳಿ ತಂಡ ಅಭಿನಯಿಸಿದ ‘ಅನುರಕ್ತೆ’ ನಾಟಕವು, ದೇವತೆ ಯಕ್ಷ ಕಚನಿಂದ ನಿರಾಕರಣೆಗೊಳಗಾಗಿ ಭೂಸುರ ಯಯಾತಿಯನ್ನು ಮದುವೆಯಾಗಿ ಅವನಿಂದಲೂ ಮೋಸಕ್ಕೊಳಗಾಗಿ ಗಂಡು ದೇವನಾಗಲೀ, ನರನಾಗಲೀ ಹೆಣ್ಣನ್ನು ಭೋಗದ ವಸ್ತುವಾಗಿಯೇ ನೋಡುತ್ತಾನೆ ಎಂದು ಪಟ್ಟದರಸಿಯಾಗಿದ್ದವಳು. ಎಲ್ಲವನ್ನು ತ್ಯಜಿಸಿ ಸನ್ಯಾಸಿಯಾಗುತ್ತಾಳೆ. ಇದು ಏಕವ್ಯಕ್ತಿ ಪ್ರಯೋಗ, ಇದನ್ನು ಮಾಲಾಶ್ರೀ ಮಳವಳ್ಳಿ ಪ್ರಸ್ತುತಪಡಿಸಿದರು.