ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಗುದ್ದಲಿಪೂಜೆ

| Published : Apr 23 2025, 12:33 AM IST

ಸಾರಾಂಶ

ವಿಜಯನಗರ ಬಡಾವಣೆಗೆ ಹೇಮಾವತಿ ನದಿಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ಪೈಪ್‌ಲೈನ್ ಮಾಡಲು ಶಾಸಕರಾದ ಎಚ್ ಪಿ ಸ್ವರೂಪ್ ಪ್ರಕಾಶರವರು ಭೂಮಿಪೂಜೆ ನೆರವೇರಿಸಿದರು. ಇದುವರೆಗೂ ಈ ಬಡಾವಣೆಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿತ್ತು. ಇನ್ನು ಮುಂದೆ ಹೇಮಾವತಿ ನದಿ ನೀರು ಬರಲಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಮೀಪ ವಿಜಯನಗರ ಬಡಾವಣೆಗೆ ಹೇಮಾವತಿ ನದಿಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ಪೈಪ್‌ಲೈನ್ ಮಾಡಲು ಶಾಸಕರಾದ ಎಚ್ ಪಿ ಸ್ವರೂಪ್ ಪ್ರಕಾಶರವರು ಭೂಮಿಪೂಜೆ ನೆರವೇರಿಸಿದರು.

ನಂತರ ಉದ್ದೇಶಿಸಿ ಮಾತನಾಡಿದ ಶಾಸಕರು, ಬಡಾವಣೆಯ ಸಂಘದ ಪದಾಧಿಕಾರಿಗಳು ಮತ್ತು ನಿವಾಸಿಗಳ ಬಹುದಿನದ ಬೇಡಿಕೆಯಾಗಿದ್ದ ಶಾಶ್ವತ ನದಿ ನೀರು ನೀಡಬೇಕೆಂದು ಒತ್ತಾಯಿಸುತ್ತಿದ್ದರು. ಇದಕ್ಕೆ ಈಗ ಚಾಲನೆ ನೀಡಲಾಗಿದೆ. ಇದುವರೆಗೂ ಈ ಬಡಾವಣೆಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿತ್ತು. ಇನ್ನು ಮುಂದೆ ಹೇಮಾವತಿ ನದಿ ನೀರು ಬರಲಿದೆ ಎಂದರು.

ಈ ಸಂದರ್ಭದಲ್ಲಿ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ಎಚ್. ನಾರಾಯಣಗೌಡ, ಉಪಾಧ್ಯಕ್ಷ ಎಚ್.ಟಿ. ಮಲ್ಲಿಕಾರ್ಜುನ್, ಖಜಾಂಚಿ ಬಿ.ಆರ್‌. ಮೊಗಣ್ಣಗೌಡ, ಸಂಘದ ನಿರ್ದೇಶಕರುಗಳಾದ ಬ್ಯಾಟಾಚಾರ್, ಚಂದ್ರೇಗೌಡ, ನಾಗರಾಜ್, ಸೋಮಣ್ಣ ತಾಳೂರು, ರವಿಕುಮಾರ್, ಅನಂತರಾಮ್, ಬೆಟ್ಟೇಗೌಡ, ಅಧಿಕಾರಿಗಳಾದ ಎಇಇ ಚೆನ್ನೆಗೌಡ್ರು, ಎಂಜಿನಿಯರ್ ಕವಿತಾ, ಹೆಲ್ತ್ ಇನ್ಸ್‌ಪೆಕ್ಟರ್‌ ಪ್ರಸಾದ್ ಮತ್ತು ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.