ಸಾರಾಂಶ
ಚಾಮರಾಜನಗರ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ತಿ.ನರಸೀಪುರದ ನಳಂದ ಬುದ್ಧ ವಿಹಾರದ ಭಂತೇ ಭೋದಿರತ್ನ ಗುದ್ದಲಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ನಲ್ಲೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ತಿ.ನರಸೀಪುರದ ನಳಂದ ಬುದ್ಧ ವಿಹಾರದ ಭಂತೇ ಭೋದಿರತ್ನ ಗುದ್ದಲಿಪೂಜೆ ನೆರವೇರಿಸಿದರು. ಸಾಮೂಹಿಕ ಬುದ್ಧವಂದನೆ ಸಲ್ಲಿಸಿ ಅಂಬೇಡ್ಕರ್ ಅವರ ಪುತ್ಥಳಿಗೆ ಗುದ್ದಲಿಪೂಜೆ ನೆರವೇರಿಸಿ ಭಂತೇ ಭೋದಿರತ್ನ ಅವರು ಮಾತನಾಡಿ, ಭಾರತಕ್ಕಾಗಿ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಅಂಬೇಡ್ಕರ್ ಬರೆದು ಕೊಟ್ಟರು, ಎಲ್ಲ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದರು. ಅವರ ಆದರ್ಶ, ತತ್ವಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಅಂಬೇಡ್ಕರರು ಓದಿಗೆ ಹೆಚ್ಚಿನ ಒತ್ತು ನೀಡಿದರು. ವಿಶ್ವಜ್ಞಾನಿಯಾದರು. ಅವರ ಆಶಯಗಳು ಈಡೇರಿಸಲು ಅವರ ಪುತ್ಥಳಿ ನಿರ್ಮಾಣದೊಂದಿಗೆ ಅಂಬೇಡ್ಕರ್ ಭವನ, ಡಿಜಿಟಲ್ ಗ್ರಂಥಾಲಯ ನಿರ್ಮಿಸಬೇಕು. ಅದು ಗ್ರಾಮದ ಮಕ್ಕಳ ಓದಿಗೂ ಸಹಾಯ ಆಗುತ್ತದೆ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಮಸಮುದ್ರ ಪುಟ್ಟಸ್ವಾಮಿ,ಗ್ರಾಮದ ಯಜಮಾನರಾದ ದೊರೆಸ್ವಾಮಿ, ಸೋಮು, ಶ್ರೀನಿವಾಸ, ಸೋಮೇಶ್ವರ, ಮಹದೇವಯ್ಯ, ಸುರೇಶ್, ಮಂಜುನಾಥ್, ರಂಗಸ್ವಾಮಿ, ಮಹೇಶ್, ಬಸವರಾಜು, ಮಹಾದೇವಸ್ವಾಮಿ, ಮುಖಂಡರಾದ ಗುತ್ತಿಗೆದಾರ ನಲ್ಲೂರು ಮಹಾದೇವಸ್ವಾಮಿ, ಶ್ರೀನಾಥ್, ಸೋಮೇಶ್ವರ, ಪರಮೇಶ್ವರ್, ಡಿ.ನಾರಾಯಣಸ್ವಾಮಿ, ಗಣಿ ಉದ್ಯಮಿ ರಂಗಸ್ವಾಮಿ, ಶಿವಯ್ಯ, ಟೈಲರ್ ರಂಗಸ್ವಾಮಿ, ಕು.ಚಿನ್ನಸ್ವಾಮಿ, ಬಂಗಾರಸ್ವಾಮಿ, ಚೆನ್ನಮಲ್ಲು, ನವೀನ್, ಚಂದ್ರು, ವಿನೋದ್, ಶೇಷಯ್ಯ, ಪ್ರಕಾಶ್, ಉದಯ್,ಮನು, ಗ್ರಾಪಂ.ಸದಸ್ಯರಾದ ರಾಜಮ್ಮ, ಲೋಕೇಶ್, ಡೈರಿ ಅಧ್ಯಕ್ಷ ಸುರೇಶ್,ಎನ್ ಎಫ್ ಸಿ ಗ್ರೂಪ್ ನ ಸದಸ್ಯರಾದ ಸೋಮೇಶ, ಪುಟ್ಟಸ್ವಾಮಿ, ರವಿ, ಎನ್.ಕೆ.ರವಿ, ರಾಜೇಶ್, ಬಸವಣ್ಣ, ಕುಮಾರ್, ಮಹಿಳಾ ಸ್ವ.ಸಹಾಯ ಸಂಘದ ಸದಸ್ಯರು, ಸರ್ಕಾರಿ ನೌಕರರು, ಯುವಕರು ಗ್ರಾಮದ ಎಲ್ಲ ಕೋಮಿನ ಯಜಮಾನರು, ಮುಖಂಡರು ಹಾಜರಿದ್ದರು.