ಸಾರಾಂಶ
ಪ್ರತಿಯೊಂದು ಮನೆಗಳಿಗೂ ಪ್ರತಿಯೊಬ್ಬರಿಗೂ ಗಂಗಾಜಲ ಸಿಗಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ. ಆದ್ದರಿಂದ ಪ್ರತಿಯೊಂದು ಮನೆ ಮನೆಗೂ ಗಂಗಾಜಲ ಸಿಗಬೇಕೆಂಬುದು ಈ ಯೋಜನೆಯ ಆಶಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಲ್ಲನಾಯಕನ ಕಟ್ಟೆ ಹಾಗೂ ಗಾಣದಾಳು ಗ್ರಾಮಗಳು ಸೇರಿ ಸುಮಾರು 1.84 ಕೋಟಿ ರು.ಗಳಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿಪೂಜೆ ನೆರವೇರಿಸಿದರು.ಮಲ್ಲನಾಯಕನ ಕಟ್ಟೆ ಗ್ರಾಮದ ಶ್ರೀದೊಡ್ಡಮ್ಮತಾಯಿ ದೇವಸ್ಥಾನದ ಆವರಣ ಹಾಗೂ ಗಾಣದಾಳು ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪೂಜೆ ನೆರವೇರಿಸಿ ಮಾತನಾಡಿ, ಈ ಯೋಜನೆಯಡಿ ಪ್ರತಿಯೊಂದು ಮನೆಗಳಿಗೂ ಪ್ರತಿಯೊಬ್ಬರಿಗೂ ಗಂಗಾಜಲ ಸಿಗಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ. ಆದ್ದರಿಂದ ಪ್ರತಿಯೊಂದು ಮನೆ ಮನೆಗೂ ಗಂಗಾಜಲ ಸಿಗಬೇಕೆಂಬುದು ಈ ಯೋಜನೆಯ ಆಶಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಸಲಹೆ ನೀಡಿದರು.
ಗಾಣದಾಳು ಗ್ರಾಪಂ ಅಧ್ಯಕ್ಷ ಎಂ.ಬಿ.ಕುಳ್ಳೇಗೌಡ, ಸದಸ್ಯರಾದ ಶ್ವೇತಾ, ಗ್ರಾಮದ ಮುಖಂಡರಾದ ಯುವರಾಜ್, ರಂಜನ್ ಶಿವಲಿಂಗಯ್ಯ, ವಿಜಯ್‌ಕುಮಾರ್, ರಾಘು, ಪದ್ಮಾನಂದ, ಎಂ.ಬಿ.ಶಂಕರೇಗೌಡ , ಉದಯ್, ಸಂತೋಷ್, ಪಟೇಲ್ ರಾಮು, ಚಂದನ್, ನಂದೀಶ್, ಸಿದ್ದಪ್ಪಾಜಿ, ಶಿವರಾಂ , ಚಂದ್ರಣ್ಣ, ಸಹಾಯಕ ಇಂಜಿನಿಯರ್ ಸಾಯೋಬ್ ಹಾಗೂ ಶಿವಳ್ಳಿ ಆರಕ್ಷಕ ಠಾಣೆಯ ಸಿಬ್ಬಂದಿ ಇದ್ದರು.ರಾಜ್ಯ ಪ್ರಶಸ್ತಿಗೆ ನಾಮ ನಿರ್ದೇಶನ ಆಹ್ವಾನ
ಮಂಡ್ಯ: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲು ನಾಮ ನಿರ್ದೇಶನವನ್ನು ಆಹ್ವಾನಿಸಲಾಗಿದೆ. ಪ್ರಕರಣವು 01.08.2023 ರಿಂದ 31.07.2024 ರೊಳಗೆ ನಡೆದಿರಬೇಕು. 01.08.2006 ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ 10 ಸಾವಿರ ರು. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ 25 ಸಾವಿರ ರು. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ 1 ಲಕ್ಷ ರು. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಅರ್ಜಿ ಸಲ್ಲಿಸಲು ಅ. 10 ಕೊನೆಯ ದಿನವಾಗಿದ್ದು, ಮಕ್ಕಳ ದಿನಾಚರಣೆ- 2024ನೇ ಸಾಲಿನ ಪ್ರಶಸ್ತಿಗಾಗಿ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಂದ ಪಡೆದು, ಕನ್ನಡ ಭಾಷೆಯಲ್ಲಿಯೇ ಭರ್ತಿ ಮಾಡಿ ಅರ್ಜಿಗಳನ್ನು ಸಲ್ಲಿಸಕ್ಕದ್ದು ಎಂದು ಮಂಡ್ಯ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.