ಸಾರಾಂಶ
ಕುಡೆಕಲ್ಲು ಐನ್‌ಮನೆಯಲ್ಲಿ ಮೂರು ದಿನ ಕಳಿಯಾಟ ಸಾವಿರಾರು ಮಂದಿ ದೈವ ಭಕ್ತರ ಸಮುಮ್ಮಖದಲ್ಲಿ ನಡೆಯಿತು. ಹಲವು ಗ್ರಾಮಗಳ ಭಕ್ತರು ಪ್ರಸಾದ ಸ್ವೀಕರಿಸಿದರು.
ಗುಡ್ಡೆಹೊಸೂರು: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ಐನ್ ಮನೆಯಲ್ಲಿ ಮೂರು ದಿನ ಕಳಿಯಾಟ ಸಾವಿರಾರು ಮಂದಿ ದೈವ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಮುಖ್ಯವಾಗಿ ಶ್ರೀ ವಿಷ್ಣುಮೂರ್ತಿ, ಶ್ರೀ ಧರ್ಮದೈವ, ಪಾಷಣಮೂರ್ತಿ, ರಕ್ತೇಶ್ವರಿ ದೈವ, ಪಂಜುರ್ಳಿ ದೈವ, ಪೊಟ್ಟ ದೈವ, ಗುರುಕಾರ್ಣೋ ದೈವಗಳ ಕೋಲ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೊಡಗು ಸೇರಿದಂತೆ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಹಲವು ಗ್ರಾಮಗಳ ದೈವ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.ಆಲೆಟ್ಟಿ ಗ್ರಾಮದ ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೂರು ದಿನವೂ ನಿರಂತರ ಅನ್ನಸಂತರ್ಪಣೆ ನಡೆಯಿತು. ಕುಡೆಕಲ್ಲು ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.