ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ಬಿ. ಎಂ. ಸಾಗರ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಬಿ.ಎಂ.ಸಾಗರ್‌ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮುದಾಯಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕರಾದ ಕೆ.ಕೆ.ಹೇಮಂತ್‌ ಕುಮಾರ್‌ ಮತ್ತು ಕೂಡಿಗೆ ವೃತ್ತದ ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ.ವೀಣಾ ಹಾಜರಿದ್ದು ಒಕ್ಕೂಟದ ವತಿಯಿಂದ ಸಂಘದ ಸದಸ್ಯರಿಗೆ ದೊರೆಯುವ ಸೌಲಭ್ಯದ ಬಗ್ಗೆ ವಿವರಿಸಿದರು. ಈ ಸಂದರ್ಭ ಹೆಚ್ಚು ಹಾಲನ್ನು ಸಂಘಕ್ಕೆ ನೀಡುವವರನ್ನು ಗುರುತಿಸಿ ಬಹುಮಾನಗಳನ್ನು ನೀಡಲಾಯಿತು. ಕಾರ್ಯದರ್ಶಿ ನವೀನ್‌ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಸುಲೋಚನ ನಿರ್ದೇಶಕರಾದ ಬಿ.ಎಸ್.ಧನಪಾಲ್‌, ಪಿ. ಬಿ. ಯತೀಶ್‌, ಬಿ.ವಿ.ಮೋಹನ್‌ ಕುಮಾರ್‌, ಸಿ.ಬಿ.ಪಳಂಗಪ್ಪ, ಕೆ.ಆರ್‌

ಗುರುಪ್ರಸಾದ್‌, ಬಿ.ಎನ್.ಕಾಶಿ, ಬಿ.ಎಸ್.ಶುಭಶೇಖರ್‌, ಎಂ.ಅಭಿಷೇಕ್‌, ಎಸ್, ಆರ್.ಕಮಲ, ಸಿ.ಕಮಾಲಾಕ್ಷಿ, ಬಸಮ್ಮ ಉಪಸ್ಥಿತರಿದ್ದರು.